ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ
ಡಾ॥ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಸೆ.5 ರಂದು, ರಾಷ್ಟ್ರ ಕಂಡ ಶೈಕ್ಷಣಿಕ ಹರಿಕಾರ ಡಾ॥ಸರ್ವಪಲ್ಲಿ ರಾಧಾಕೃಷ್ಣನ್ ಅವರ 136ನೇ ಜಯಂತಿ, ಹಾಗೂ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ವಸತಿ ಶಾಲೆಯ ಮಕ್ಕಳೇ ಬಹು ಉತ್ಸಾಹದಿಂದ ಪರಸ್ಪರ ಒಂದುಗೂಡಿ, ವಸತಿ ಶಾಲೆಯ ಒಳಾಂಗಣದಲ್ಲಿ ಶಿಕ್ಷಕರ ದಿನಾಚರಣೆ ಆಯೋಜಿಸಿದ್ದರು. ವಸತಿ ಶಾಲೆಯ ಪ್ರಾಂಶುಪಾಲರಾದ ಶೋಭಾ ರವರ ನೇತೃತ್ವದಲ್ಲಿ, ಶಿಕ್ಷಕ ವೃಂಧದ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಿಸಲಾಯಿತು. ಪ್ರಾಂಶುಪಾಲರಾದ ಶೋಭಾ ರವರು ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ನಂತರ ಉಪಸ್ಥಿತರಿದ್ದ ಶಿಕ್ಷಕರೆಲ್ಲರಿಗೂ ವಿದ್ಯಾರ್ಥಿಗಳು ಸಿಹಿ ಹಂಚಿಸಿದರು. ವಿದ್ಯಾರ್ಥಿಗಳು ಪರಸ್ಪರ ಸಿಹಿ ಹಂಚಿಕೊಂಡರು, ಹಾಗೂ ಭೋದಕ ಭೋದಕೇತರ ಸಿಬ್ಬಂದಿಯವರಿಗೂ ಸಿಹಿ ಹಂಚಿ ಸಂಭ್ರಮಿಸಿದರು. ಪ್ರಾಂಶುಪಾಲರಾದ ಶೋಭಾ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಕರ ದಿನಾಚರಣೆ ಮಹತ್ವದ ಕುರಿತು ಮಾತನಾಡಿದರು. ಮತ್ತು ಶಿಕ್ಷಕರು ಮಾತನಾಡಿ ವಿದ್ಯಾರ್ಥಿಗಳು ಭವಿಷ್ಯದ ನಾಡಿನ ಬಹು ಅಮೂಲ್ಯವಾದ ಸಂಪತ್ತಾಗಿದ್ದು, ಆದರ್ಶಪ್ರಜೆಗಳಾಗಿ ಹೊರ ಹೊಮ್ಮಬೇಕಿದೆ. ಅದಕ್ಕಾಗಿ ವಿದ್ಯಾರ್ಥಿಗಳು ಪಾಲಿಸಬೇಕಾದ ನಿಯಮಗಳನ್ನು, ಅವರು ವಿವರಿಸಿ ತಿಳಿ ಹೇಳಿದರು. ವಸತಿ ಶಾಲೆಯ ಹಲವು ವಿದ್ಯಾರ್ಥಿಗಳಿಂದ ವಿವಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ವಸತಿ ಶಾಲೆಯ ವಿದ್ಯಾರ್ಥಿಗಳು, ಭೋದಕ ಭೋದಕೇತರ ಸಿಬ್ಬಂದಿಯವರೆಲ್ಲರೂ ಭಾಗವಹಿಸಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.