ಕೊಪ್ಪಳ:ಮಂಡಲಮರಿ ಗುಡ್ಡವನ್ನು “ತೋಳ ಸಂರಕ್ಷಣೆ ಧಾಮ ಎಂದು ಘೋಷಣೆ” ಮಾಡಿ ಅವಸಾನ ಅಂಚಿನಲ್ಲಿರುವ ವನ್ಯ ಜೀವಿಗಳನ್ನು ರಕ್ಷಣೆ ಮಾಡಿ ತೋಳ ಸಂರಕ್ಷಣಾ ಧಾಮ ಘೋಷಣೆ ಮಾಡಲು ಸಿದ್ದತೆ ಮಾಡಿರುವ ಎಲ್ಲಾ ಕ್ರಮಗಳನ್ನು ಶೀಘ್ರದಲ್ಲೇ ಜಾರಿಗೊಳಿಸಬೇಕೆಂದು ಯಲಬುರ್ಗಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಜಿಲ್ಲಾ ಸಮಿತಿಯಿಂದ ತಾಲೂಕ ತಹಶೀಲ್ದಾರ ಬಸವರಾಜ ತನ್ನಳ್ಳಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಂಡಲಮರಿ- ಮಕ್ಕಳ್ಳಿ ಗ್ರಾಮದ ಗುಡ್ಡ ಗಾಡು ಪ್ರದೇಶದಲ್ಲಿ ಸರಕಾರದ ಜಮೀನು ಸು 150 ಎಕರೆ ಹೆಚ್ಚು ಇದ್ದು ಈ ಗುಡ್ಡುಗಾಡು ಪ್ರದೇಶದಲ್ಲಿ ವನ್ಯ ಜೀವಿಗಳಾದ ತೋಳ, ನರಿ, ನವಿಲು, ಕತ್ತೆಕಿರುಬ, ಕಾಡು ಬೆಕ್ಕು , ಮುಳ್ಳು ಹಂದಿ , ಉಡ ಸೇರಿದಂತೆ ಇನ್ನೂ ಹಲವಾರು ವನ್ಯ ಜೀವಿಗಳು ವಾಸಿಸುತ್ತಿದ್ದು ರಕ್ಷಣೆ ಇಲ್ಲದೆ ರೈತರ ಜಮೀನುಗಳಿಗೆ ಹೋಗಿ ಕುರಿ ಮತ್ತು ಮೇಕೆಗಳನ್ನು ತೋಳಗಳು ನಾಶ ಮಾಡುತ್ತಿದ್ದು ಮತ್ತು ಅರಣ್ಯ ಪ್ರದೇಶವನ್ನು ತಹಶೀಲ್ದಾರರು ಗುರುತಿಸುತ್ತಿದ್ದು ತೋಳ ರಕ್ಷಣೆಗೆ ಯಾವುದೇ ಸರಹದ್ದು ಗುರುತು ಮಾಡಿ ಆವರಣ ಗೋಡೆ (ತಂತಿಬೇಲಿ) ನಿರ್ಮಾಣ ಮಾಡಿ,ವನ್ಯ ಪ್ರಾಣಿಗಳಿಗೆ ನೀರು ಆಹಾರ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು.ತಕ್ಷಣವೇ ತೋಳ ಸಂರಕ್ಷಣೆ ಧಾಮ ಘೋಷಿಸಬೇಕು ಎಂದು ಮನವಿ ಮಾಡಲಾಯಿತು.
ಈ ಸಂರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಧ್ವನಿ ತಾಲೂಕ ಕಾರ್ಯದರ್ಶಿ ಮಾಲ್ಲಿಕಾರ್ಜುನ ಹಡಪದ, ಸಹ ಕಾರ್ಯದರ್ಶಿ ಬಸವರಾಜ ಮುಂಡರಗಿ, ಉಪಾಧ್ಯಕ್ಷ ಹುಸೇನಸಾಬ,ಖಜಾಂಚಿ ಸಿ ಎ ಆದಾ, ಸಂಘಟನಾ ಕಾರ್ಯದರ್ಶಿಗಳಾದ ನೀಲಪ್ಪ ಖಾನಾವಾಳಿ, ಶಾಮೀದಸಾಬ ತಾಳಕೇರಿ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆಯ ಜಿಲ್ಲಾ ಅಧ್ಯಕ್ಷ ಸಂತೋಷ ತೋಟದ ಹಾಗೂ ತಾಲೂಕ ಅಧ್ಯಕ್ಷ ಮಾರುತಿ ವಾಲಿಕಾರ ಪತ್ರಿಕಾ ಮಾದ್ಯಮದ ಸ್ನೇಹಿತರು ಉಪಸ್ಥಿತರಿದ್ದರು.