ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಬಸ್ತೀಪುರ ರಸ್ತೆಯಲ್ಲಿರುವ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಪಟ್ಟಣದ ಉಮಾಶಂಕರ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು.
ಈ ಸಭೆಯನ್ನು ಸಹಕಾರ ಸಂಘದ ಅಧ್ಯಕ್ಷರಾದ ಮಹಾದೇವನಾಯಕ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ನಂತರ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಾಗರಾಜುರವರು ಸಂಘದ ಒಂದು ವರ್ಷದ ಅವಧಿಯ ಆಯವ್ಯಯಗಳ ಪಟ್ಟಿಯನ್ನು ಓದಿ ಸಭೆಗೆ ತಿಳಿದರು.
ಉದ್ಘಾಟನೆಯಾದ ನಂತರ ಸಂಘದ ಅಧ್ಯಕ್ಷರು ಮಾತನಾಡಿ, 2023-24 ಸಾಲಿನ ವಿವರಗಳನ್ನು ತಿಳಿಸುತ್ತ, ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 2023-24 ನೇ ಸಾಲಿನಲ್ಲಿ ಬೆಳೆ ಸಾಲವನ್ನು 147 ಸದಸ್ಯರುಗಳಿಗೆ 14,07,63000 ರೂಪಾಯಿಗಳನ್ನು ವಿತರಿಸಲಾಗಿದೆ, 6 ಜನ ಸದಸ್ಯರುಗಳಿಗೆ ಮಧ್ಯಮಾವದಿ ಟ್ರ್ಯಾಕ್ಟರ್, ಸಾಲ 13, 27, 600 ರೂಪಾಯಿಗಳನ್ನು ನೀಡಲಾಗಿದೆ, ಹಾಗೆ ಚಿನ್ನಭಾರಣ ಸಾಲ 122 ಸದಸ್ಯರುಗಳಿಗೆ
46,42, 002 ರೂಪಾಯಿಗಳನ್ನು ಕೊಡಲಾಗಿದೆ.
ಹಾಗೂ 93 ಸ್ವ ಸಹಾಯ ಗುಂಪುಗಳಿಗೆ 1,45,31646 ರೂಪಾಯಿಗಳ ಸಾಲವನ್ನು ವಿತರಿಸಲಾಗಿದೆ, ಉಳಿದಂತೆ ವ್ಯಾಪಾರಾಭಿವೃದ್ಧಿ ಸಾಲ 436 ಜನ ಸದಸ್ಯರುಗಳಿಗೆ 2, 99, 99, 247 ರೂಪಾಯಿಗಳ ನ್ನು ನೀಡಲಾಗಿದೆ, ಇದರಲ್ಲಿ 2023-24 ನೇ ಸಾಲಿನಲ್ಲಿ 13,55, 432 ರಷ್ಟು ಲಾಭ ಗಳಿಸಿರುತ್ತೇವೆ ನಮ್ಮ 5 ವರ್ಷದ ಆಡಳಿತ ಮಂಡಳಿಯ ಕಳೆದ 5 ವರ್ಷದಲ್ಲಿ 550 ಜನ ಹೊಸ ಸದಸ್ಯರುಗಳಿಗೆ 8,67,72000 ರೂಪಾಯಿಗಳ ಕೆಸಿಸಿ ಬೆಳೆ ಸಾಲವನ್ನು ನೀಡಿದೆ, 6 ಟ್ರ್ಯಾಕ್ಟರ್ ಸಾಲ 1 ಭತ್ತದ ಕಟಾವು ಯಂತ್ರ, ಸಾಲ ನೀಡಿದ್ದು ಹಾಗೂ ಮಧುವನಹಳ್ಳಿ ಗ್ರಾಮದ ಗೊಬ್ಬರ ಪಡಿತರ ಮಾರಾಟ ಮಾಡಲು ಈ 25 ಲಕ್ಷ ವೆಚ್ಚದಲ್ಲಿ ರೈತರುಗಳಿಗೆ ಅನುಕೂಲವಾಗುವಂತೆ ಗೋದಾಮು ನಿರ್ಮಾಣ ಮಾಡಿರುತ್ತೇವೆ ಹಾಗೂ ಮುಂದೆ ಸಂಘದ ಮುಂಭಾಗದಲ್ಲಿ ಮಳಿಗೆಗಳನ್ನು ನಿರ್ಮಾಣ ಮಾಡಲು ತೀರ್ಮಾನಿಸಿ ಈ 8 ವರ್ಷದಲ್ಲಿ ನಮ್ಮ ಆಡಳಿತ ಮಂಡಳಿಯವರು ಉತ್ತಮ ಸಾಧನೆಯನ್ನು ಮಾಡಿರುತ್ತೇವೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಪ್ರೊಫೆಸರ್ ಡಾಕ್ಟರ್ ಜಿ ಎಸ್ ಶಶಿಧರ ಗೋಪಾಲ ಗೌಡ ಶಾಂತವೇರಿ ಮೆಮೋರಿಯಲ್ ನರ್ಸಿಂಗ್ ಕಾಲೇಜಿನ ಪ್ರಿನ್ಸಿಪಾಲರು ಇವರು ಕೃಷಿಪತ್ತಿನ ಅಧ್ಯಕ್ಷರಾದ ಮಹಾದೇವ ನಾಯಕ ಅವರಿಗೆ ಅದ್ಧೂರಿಯಾಗಿ ಸನ್ಮಾನ ಮಾಡಿದರು.
ಕಲ್ಯಾಣ ಮಂಟಪದಲ್ಲಿ ನಡೆದ ಸಹಕಾರ ಸಂಘದ ಸಭೆಯಲ್ಲಿ ಸಂಘದ ಅಧ್ಯಕ್ಷರಾದ ಮಹಾದೇವನಾಯಕ, ಉಪಾಧ್ಯಕ್ಷರು, ಮಾಜಿ ಅಧ್ಯಕ್ಷರಾದ ಸೋಮಶೇಖರ್,
ಹಾಗೂ ಎಲ್ಲಾ ನಿರ್ದೇಶಕರು ಸದಸ್ಯರುಗಳು ಇದ್ದರು.
ವರದಿ :ಉಸ್ಮಾನ್ ಖಾನ್