ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘ ಇವರ 10 ನೇ ವರ್ಷದ ವಾರ್ಷಿಕ ಮಹೋತ್ಸವ ಕಾರ್ಯಕ್ರಮ ಇಂದು ಹೊನ್ನಾಳಿಯ ಪಟ್ಟಣದ ಗುರು ಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಸಚಿವ ಹಾಗೂ ಶಾಸಕ ಎಂ ಪಿ ರೇಣುಕಾಚಾರ್ಯ ಮತ್ತು ರೈತ ಮುಖಂಡರ ಬಸವರಾಜಪ್ಪ, ಗೋಪಾಲಪ್ಪ,ಸಂಘದ ಅಧ್ಯಕ್ಷರಾದ ಪರಮೇಶ್ವರಪ್ಪ ಗೌಡರು,
ಈ ಸಂದರ್ಭದಲ್ಲಿ ಮಾತನಾಡಿದ ಎಂ ಪಿ ಅರ್ ದೇಶದ ಎರಡೂ ಕಣ್ಣುಗಳು ಎಂದರೆ ಸೈನಿಕರು ಮತ್ತು ರೈತರು, ಸೈನಿಕರು ದೇಶದ ಗಡಿ ಭಾಗದಲ್ಲಿ ಹಗಲು ರಾತ್ರಿ ಎನ್ನದೆ ಕೊರೆಯುವ ಚಳಿಯಲ್ಲೂ ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ತಮ್ಮ ಕುಟುಂಬದವರನ್ನು ಬಿಟ್ಟು ದೇಶದ ರಕ್ಷಣೆ ಮಾಡುತ್ತಾರೆ ಹಾಗೆಯೇ ನಮ್ಮ ರೈತರು ತಾನು ಕಷ್ಟ ಪಟ್ಟು ಸಾಲ ಮಾಡಿ ಮಳೆ ನಂಬಿ ಭೂತಾಯಿ ನಂಬಿ ಬೆಳೆ ಬೆಳೆದರೆ ದೇಶದ ಜನರ ಹಸಿವನ್ನು ನೀಗಿಸುವ ಕಾರ್ಯವನ್ನೂ ಮಾಡುತ್ತಾರೆ ಎಂದು ಹೇಳಿದರು. ಅಷ್ಟೇ ಅಲ್ಲದೆ ನನ್ನ ಕೊನೆಯ ಉಸಿರು ಇರುವವರೆಗೂ ನಿಮ್ಮ ಸೈನಿಕ ಸಂಘದ ಕಾರ್ಯಕ್ರಮಕ್ಕೆ ಊಟದ ವ್ಯವಸ್ಥೆ ಮತ್ತು ನಿಮ್ಮ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವುದಾಗಿ ಭರವಸೆ ನೀಡಿದರು.
ರೈತ ಸಂಘದ ಕಾರ್ಯಕರ್ತರ ಬಸವರಾಜಪ್ಪ ಮಾತನಾಡಿ ರೈತರು ಮತ್ತು ಸೈನಿಕರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಯಾವುದೇ ರಾಜಕೀಯ ವ್ಯಕ್ತಿಗಳು ತಮ್ಮ ಮಕ್ಕಳನ್ನು ಸೈನಿಕರನ್ನು ಮಾಡುವುದಿಲ್ಲ ರೈತರ ಮಕ್ಕಳು ಸೈನಿಕರ ಮಕ್ಕಳು ಮಾತ್ರ ರೈತನಾಗಲು ಮತ್ತು ಸೈನ್ಯಕ್ಕೆ ಸೇರುತ್ತಾರೆ
ಎಂದು ಹೇಳಿದರು.
ಈ ಸಂದರ್ಭದಲ್ಲಿ ದಿಡಗೂರಿನ ಗೋಪಾಲಪ್ಪ, ರೈತ ಮುಖಂಡರ,ರಮೇಶ್, ಮಾಜಿ ಸೈನಿಕ ವಾಸಪ್ಪ, ಹನುಮಂತಪ್ಪ, ಮಂಜಪ್ಪ, ಮತ್ತು ಅವಳಿ ತಾಲ್ಲೂಕಿನ ಮಾಜಿ ಸೈನಿಕರು, ಹಾಲಿ ಸೈನಿಕರು ಅವರ ಕುಟುಂಬದ ಸದಸ್ಯರು ಇದ್ದರು.
ವರದಿ ಪ್ರಭಾಕರ್ ಡಿ ಎಂ