ಕೊಪ್ಪಳ: ಐತಿಹಾಸಿಕ ಮಾನವ ಸರಪಳಿಯಲ್ಲಿ ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಚಾರ್ಯರಾದ ಡಾ. ಗಣಪತಿ ಲಮಾಣಿ, ಹಾಗೂ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಗವಿಸಿದ್ದಪ್ಪ ಮುತ್ತಳ, ಶ್ರೀ ವಿಠೋಬ ಎಸ್, ಡಾ. ಹುಲಿಗೆಮ್ಮ ಬಿ, ಡಾ. ಮಲ್ಲಿಕಾರ್ಜುನ ಬಿ, ಡಾ. ಪ್ರದೀಪ್ ಕುಮಾರ್, ಡಾ. ನರಸಿಂಹ, ಡಾ ಅಶೋಕ ಕುಮಾರ, ಶ್ರೀ ಮತಿ ಸುಮಿತ್ರಾ ಎಸ್. ವಿ, ಶ್ರೀ ಮತಿ ನಂದ, ಶ್ರೀ ಹನುಮಪ್ಪ ಹಾಗೂ ಕಾಲೇಜಿನ ಸ್ಕೌಟ್ ಅಂಡ್ ಗೈಡ್ಸ್, ಎನ್. ಎಸ್. ಎಸ್ ವಿದ್ಯಾರ್ಥಿಗಳು ಮತ್ತು ಕಾಲೇಜಿನ ಭೋದಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.
ಸೆಪ್ಟೆಂಬರ್ 15ರಂದು ಬೆಳಿಗ್ಗೆ 09 ರಿಂದ 10 ಗಂಟೆಯವರೆಗೆ ರಾಜ್ಯದ ಬೀದರ ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆಯವರೆಗೆ ಒಟ್ಟು 2500 ಕಿ.ಮೀ ಮಾನವ ಸರಪಳಿ ರಚನೆಯ ಮೂಲಕ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಲಾಯಿತು.
ಪ್ರಜಾಪ್ರಭುತ್ವವು ಸಮಾನತೆ, ಸ್ವಾತಂತ್ರ‍್ಯ ಮತ್ತು ಭಾತೃತ್ವದ ಭದ್ರ ಬುನಾದಿ ಮೇಲೆ ನಿಂತಿದೆ. ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿವಸ ದೇಶದ ನಾಗರಿಕರಿಗೆ ಅದರಲ್ಲೂ ವಿಶೇಷವಾಗಿ ಕರ್ನಾಟಕ ನಾಗರಿಕರಿಗೆ ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡಿಸಲು ಕೊಪ್ಪಳ ಜಿಲ್ಲೆಯಲ್ಲಿ ಕೊಪ್ಪಳ ತಾಲ್ಲೂಕಿನ ಬೆಳಗಟ್ಟಿ ಗ್ರಾಮದಿಂದ ಪ್ರಾರಂಭವಾಗಿ, ಹಿರೇಸಿಂದೋಗಿ, ಚಿಕ್ಕಸಿಂದೋಗಿ, ಕೊಪ್ಪಳ ನಗರ, ಗಿಣಿಗೇರಾ, ಹೊಸಳ್ಳಿ ಮಾರ್ಗವಾಗಿ ಕೊಪ್ಪಳ ಭೌಗೋಳಿಕ ಸರಹದ್ದಾದ ಮುನಿರಾಬಾದ್ ಡ್ಯಾಮ್ ವರೆಗೆ ಜಿಲ್ಲೆಯಲ್ಲಿ ಒಟ್ಟು 53 ಕಿಮೀ ಮಾನವ ಸರಪಳಿಯನ್ನು ನಿರ್ಮಿಸುವದರ ಮೂಲಕ ಆಚರಣೆ ಮಾಡಲಾಗಿದೆ.
ಈ ದಿನದಂದು 2500 ಕಿ. ಮೀ ಮಾನವ ಸರಪಳಿ, 25 ಲಕ್ಷ ಜನರು ಬಾಗಿ, 10 ಲಕ್ಷ ಸಸಿಗಳು,5000 ಸಂವಿಧಾನದ ಪೀಠಿಕೆಗಳನ್ನು ಪಠಣ ಮಾಡಿದ್ದಾರೆ.