ವಂಚಕ ಕಂಪನಿಗಳ ವಿರುದ್ಧ ಧರಣಿ ಸತ್ಯಾಗ್ರಹ
ಕೊಪ್ಪಳ: ನಗರದ ಜಿಲ್ಲಾಡಳಿತ ಭವನದ ಮುಂದೆ ವಿವಿಧ ಕಂಪನಿಗಳಿಂದ ವಂಚನೆಗೊಳಗಾದ ಗ್ರಾಹಕರ ವತಿಯಿಂದ ಧರಣಿ ಸತ್ಯಾಗ್ರಹ ೧೫ ದಿನದಿಂದ ಸಾಗಿಬಂದಿದೆ ,ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಎಸ್.ಡಿ.ಎಂ.ಸಿ ರಾಜ್ಯ ನಿರ್ದೇಶಕ, ಹೋರಾಟಗಾರ ಶರಣಬಸಪ್ಪ ದಾನಕೈ ಅವರು ಮಾತನಾಡಿ, ಬಡವರ ಹಣ ವಂಚನೆ ಮಾಡಿದ ಕಂಪನಿಗಳಾದ ಗ್ರೀನ್ ಬಡ್ಸ್, ಪಲ್ಸ್, ಸಮೃದ್ಧ ಜೀವನ, ವಿ3, ಗುರುಟೀಕ್ ಹೀಗೆ ವಿವಿಧ ಕಂಪನಿಗಳು , ಪ್ರತಿನಿಧಿಗಳಿಗೆ,ಗ್ರಾಹಕರಿಗೆ, ಸಾರ್ವಜನಿಕರಿಗೆ ಮೋಸಗೊಳಿಸಿವೆ, ಕಂಪನಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಹರಾಜು ಪ್ರಕ್ರಿಯೆ ನಡೆಸಿ ವಂಚನೆಗೊಳಗಾದ ಗ್ರಾಹಕರಿಗೆ ಹಣ ಪಾವತಿಸಬೇಕು ನಾವೇನು ಸರ್ಕಾರದ ಖಜಾನೆಯಿಂದ ಹಣ ನೀಡಿ ಎಂದು ಕೇಳುತ್ತಿಲ್ಲ. ನಾವು ಕಂಪನಿಗಳಿಗೆ ನೀಡಿರುವ ಹಣವನ್ನು ನಮ್ಮ ಹಕ್ಕಿನಿಂದ ಕೇಳುತ್ತಿದ್ದೇವೆ ನಿಗದಿತ ಸಮಯದಲ್ಲಿ ನಮ್ಮ ಹಣವನ್ನು ನಮಗೆ ಮರುಪಾವತಿ ಮಾಡಲಾರದ ಕಾರಣ ರಾಜ್ಯಾದ್ಯಂತ ಉಗ್ರ ಹೋರಾಟವನ್ನು ಟಿಪಿಜೆಪಿ ಸಂಘಟನೆ ವತಿಯಿಂದ ಪ್ರತಿ ಜಿಲ್ಲೆ ಹಾಗೂ ತಾಲೂಕಗಳಲ್ಲಿ ಧರಣಿ ಸತ್ಯಾಗ್ರಹವನ್ನು ಸೆಪ್ಟೆಂಬರ್ ಒಂದರಿಂದ ಇಲ್ಲಿಯವರೆಗೆ ಆಯಾ ತಾಲೂಕು, ಜಿಲ್ಲೆಗಳ ಅಧ್ಯಕ್ಷರು, ವಿವಿಧ ತಾಲೂಕಿನ ಪದಾಧಿಕಾರಿಗಳು, ಗ್ರಾಹಕರು ಹಾಗೂ ವಿವಿಧ ಸಂಘಟನೆಗಳ ಜೊತೆಗೂಡಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸುತ್ತಿದ್ದಾರೆ,ಇಲ್ಲಿಯವರೆಗೆ ಮುಖ್ಯಮಂತ್ರಿಗಳು,ಶಾಸಕರು,ಸಂಸದರು, ಜಿಲ್ಲಾಧಿಗಳು ಸ್ಪಂದನೆ ಮಾಡಿಲ್ಲ, ಇನ್ನು ಮುಂದಾದರೂ ಸಮಸ್ಯೆಗೆ ಸ್ಪಂದಿಸಬೇಕು ಎಂದು ರಾಜ್ಯ ಎಸ್.ಡಿ.ಎಂ.ಸಿ.ನಿರ್ದೇಶಕ ಶರಣಬಸಪ್ಪ ದಾನಕೈ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಇಂತಹ ಕಂಪನಿಗಳಿಂದ ವಂಚನೆಗೊಳಗಾದ ಗ್ರಾಹಕರು ಹಾಗೂ ವಿವಿಧ ಸಂಘ ಸಂಸ್ಥೆಗಳು ಪ್ರತಿನಿಧಿಗಳಾದ ಟಿಪಿಜೆಪಿ ಸಂಘನೆಯ ರಾಜ್ಯ ಅಧ್ಯಕ್ಷ ಅಪ್ಪಾಸಾಹೇಬ ಬುಗಡೆ ಜಿಲ್ಲಾ ಅಧ್ಯಕ್ಷ ಹನುಮೇಶ ಕಲ್ಮಂಗಿ, ವಿವಿಧ ತಾಲ್ಲೂಕಿನ ಅಧ್ಯಕ್ಷರು ಹಾಗೂ ಪ್ರತಿನಿದಿಗಳಾದ ಅಯ್ಯಪ್ಪ ಕುಂಬಾರ, ಗವಿಸಿದ್ದಪ್ಪ ಕುಂಬಾರ,ಅಂದಪ್ಪ ಸಂಗನಾಳ, ಚೆನ್ನಪ್ಪ ಹೂಗಾರ,ಶಾಂತಪ್ಪ ಇಟಗಿ, ಫಕೀರಪ್ಪ ಗಾಣಗೇರ, ಮಲ್ಲಪ್ಪ ಕಾಮನೂರ,ಎಂ.ಕೆ.ಮಕಾಂದಾರ,ಶಾಂತ ಕಲ್ಮಠ, ಸವಿತಾ ಪಾಟೀಲ್, ಗೌರಮ್ಮ ಚಳಿಗೇರಿ , ಬಸಮ್ಮ ಬಂಡಿ, ಯಲ್ಲಪ್ಪ ಸಣ್ಣಕ್ಕಿ ,ಎಂ.ಕೆ.ಹವಲ್ದಾರ,ಡಾ.ಬಸವರಾಜ ಗುಳದಳ್ಳಿ,ಶೇಖರಗೌಡ ಮೇಟಿ,ರಮೇಶಗೌಡ ಹಾಲಕೇರಿ,ಕನಕಪ್ಪ ಪೂಜಾರ,ಶರಣಪ್ಪ ಬ್ಯಾಳಿ, ಪ್ರತಿಭಟನೆಯಲ್ಲಿ ಭಾಗವಹಿಸಿ,ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನಕ್ಕೆ ತರುವುದರ ಮೂಲಕ ಸಾರ್ವಜನಿಕರಿಗೆ ವಂಚನೆ ಮಾಡಿದ ಕಂಪನಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಹಣ ಕಳೆದುಕೊಂಡ ಗ್ರಾಹಕರಿಗೆ ಮರುಪಾವತಿ ಮಾಡಿ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.