ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕರಮುಡಿ ಗ್ರಾಮದಲ್ಲಿ ಶ್ರೀ ಗುರು ಯೋಗಾನಂದ ಪುಣ್ಯಾಶ್ರಮದ ರಥೋತ್ಸವವು ಸೋಮವಾರ ವಿಜೃಂಭಣೆಯಿಂದ ಜರುಗಿತು.
ರಥೋತ್ಸವಕ್ಕೆ ಚಾಲನೆ ನೀಡಿದ ಪಟ್ಟಣದ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಶಿವಾಚಾರ್ಯರು ಆಶೀರ್ವಚನಗೈದು ಕರಮುಡಿಯಲ್ಲಿ ಹಲವಾರು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳು ಆಗಾಗ್ಗೆ ಜರುಗುತ್ತಿದ್ದು ಎಲ್ಲಾ ವರ್ಗದ ಜನರು ಕೂಡಿಕೊಂಡು ಶ್ರದ್ಧಾ ಭಕ್ತಿಯಿಂದ ನಡೆಸಿಕೊಂಡು ಬರುತ್ತಿರುವುದು ಭಾತೃತ್ವ ವೃದ್ಧಿ ಆಗುವುದರ ಜೊತೆಗೆ ಸಮೃದ್ಧಿ ಹಾಗೂ ಸಹ ಬಾಳ್ವೆ ಜೀವನ ನಡೆಸುತ್ತಿರುವುದು ಮಾದರಿ ಆಗಿದೆ ಎಂದರು.
ಡಾ.ಕಾಶಯ್ಯ ನಂದಿಕೋಲ ಒಡಪುಗಳನ್ನು ಹೇಳಿದರೆ, ಖಾಜಾಸಾಬ್ ಕಲ್ಲೂರರವರು ಉರುಳು ಸೇವೆಗೈದರು. ಭಜನಾ ಸಂಘದವರು ಹಾಗೂ ನೂರಾರು ಮುತ್ತೈದರು ಆರತಿ ಬೆಳಗಿ ಶ್ರೀಗಳನ್ನು ಸ್ವಾಗತಿಸಿ ರಥೋತ್ಸವ ಚಾಲನೆಗೆ ಸಹಕಾರ ನೀಡಿದರು.
ಬೆಳಗಿನಯಿಂದ ಸಾಯಂಕಾಲವರೆಗೂ ಅನ್ನ ಸಂತರ್ಪಣೆ ಜರುಗಿತು.
ಗುರಯ್ಯ ಹಿರೇಮಠ, ವೀರಯ್ಯ ಹಿರೇಮಠ, ತಾ. ಪಂ ಮಾಜಿ ಅಧ್ಯಕ್ಷ ಸಂಗಪ್ಪ ಬಂಡಿ, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ರಾಮಣ್ಣ ಪ್ರಬಣ್ಣನವರ, ಗ್ರಾ. ಪಂ. ಮಾಜಿ ಅಧ್ಯಕ್ಷ ಮಂಜುನಾಥ ಕುಕನೂರ, ಶಿವಪ್ಪ ಉಳ್ಳಾಗಡ್ಡಿ, ನಿಂಗಪ್ಪ ಇಟಗಿ, ಕರಿಸಿದ್ದಪ್ಪ ಪತ್ತಾರ್, ಮೈಲಾರಪ್ಪ ಪಲ್ಲೇದ್, ಪರಸಪ್ಪ ಲಮಾಣಿ, ಅಶೋಕ ಉಳ್ಳಾಗಡ್ಡಿ, ಭೀಮಪ್ಪ ಬಂಡಿ, ಭೀಮಪ್ಪ ಹವಳಿ, ವೀರಣ್ಣ ಪಟ್ಟೆದ, ಪರಸಪ್ಪ ಹಾದಿಮನಿ, ಶರಣಪ್ಪ ನೀಡಸೇಸಿ, ಉಮೇಶ ಕುಕನೂರ, ಶಿವಪುತ್ರಪ್ಪ ಮಲಿಗೋಡದ ಇನ್ನೂ ಹಲವಾರು ಭಕ್ತರು ಜಾತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು.
ವರದಿ: ಬಸವರಾಜ ಕೆ ಕಳಸಪ್ಪನವರ