ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಲೋಕೋಪಯೋಗಿ ವಸತಿ ಗೃಹದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ವಿಶ್ವ ಕರ್ಮ ಜಯಂತಿಯನ್ನು ಆಚರಿಸಲಾಯಿತು.
ವಿಶ್ವ ಕರ್ಮ ಜಯಂತಿಯನ್ನು ದೀಪ ಬೆಳಗುವ ಮೂಲಕ ಶಾಸಕ ಎಂ. ಆರ್ ಮಂಜುನಾಥ್ ಚಾಲನೆ ನೀಡಿದ್ದರು.
ಈ ಸಂಧರ್ಭದಲ್ಲಿ ವಿಶ್ವ ಕರ್ಮ ಸಂಘದ ಜಿಲ್ಲಾ ನಿರ್ದೇಶಕ ಶ್ರೀನಿವಾಸ್ ಮೂರ್ತಿ ಮಾತನಾಡಿ ನಮ್ಮ ಸಮುದಾಯ ಪ್ರತಿ ನಿತ್ಯ ಕಾಯಕದಲ್ಲಿ ತೊಡಗಿ ಜನರ ಸೇವೆ ಮಾಡುತ್ತದೆ ಆದರೆ ನಮ್ಮ ಸಮುದಾಯ ಸರ್ಕಾರದ ಸವಲತ್ತುಗಳಿಂದ ವಂಚಿತವಾಗಿದೆ ಎಂದರು. ನಂತರ ಶಾಸಕರಲ್ಲಿ ಶಾಸಕರಲ್ಲಿ ನಮ್ಮ ಸಮುದಾಯಕ್ಕೆ ಸಿಗುವ ಸೌಲಭ್ಯಗಳು ಸಮುದಾಯಕ್ಕೆ ಸಿಗುವಂತೆ ಮಾಡಲು ಮನವಿ ಮಾಡಿಕೊಂಡರು.
ನಂತರ ಮಾತನಾಡಿದ ಶಾಸಕರು ವಿಶ್ವಕರ್ಮ ಸಮುದಾಯದವರು ಸಮಾಜದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಜನರ ಕಷ್ಟ ಕಾರ್ಪಣ್ಯಗಳಿಗೆ ದನಿಯಾಗಿದ್ದರು,ವೇದ ಪುರಾಣಗಳಲ್ಲಿ ವಿಶ್ವಕರ್ಮ ದೇವರುಗಳ ದೇವರು ಎಂದು ಉಲ್ಲೇಖ ಮಾಡಲಾಗಿದೆ.ನಮ್ಮ ಕ್ಷೇತ್ರದಲ್ಲಿ ಈ ಸಮುದಾಯವು ಸರ್ಕಾರದ ಸೌಲಭ್ಯಗಳಿಂದ ವಂಚಿತ ಆಗಿದೆ ಎಂದು ಗಮನಕ್ಕೆ ಬಂದಿದೆ ಆದ್ದರಿಂದ ಸರ್ಕಾರದಿಂದ ಬರುವಂಥ ಸವಲತ್ತು ಒದಗಿಸಿಕೊಡಲಾಗುವುದು ಎಂದರು ಹಾಗೂ ಹನೂರು ಪಟ್ಟಣದಲ್ಲಿ ಅರ್ಧಕ್ಕೆ ಕಾಮಗಾರಿ ನಿಂತಿರುವ ಸಮುದಾಯ ಭವನಕ್ಕೆ ಒಂದು ವರ್ಷದೊಳಗೆ ಪೂರ್ಣಗೊಳಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಮುಮ್ತಾಜ್ ಭಾನು,ಕಾರ್ಯ ನಿರ್ವಾಹಕ ಅಧಿಕಾರಿ ಉಮೇಶ್,ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಅಶೋಕ್,ಬಿಇಒ ಗುರುಲಿಂಗಯ್ಯ,ಸಮುದಾಯ ಮುಖರುಗಳದ ಶ್ರೀನಿವಾಸ್ ಮೂರ್ತಿ, ನಂಜುಂಡಸ್ವಾಮಿ ,ಸಿದ್ದಪ್ಪ ಚಾರಿ, ರವಿ ಕುಮಾರ್ ,ಸುನಿಲ್ ,ನಾಗೇಶ್ ಚಾರಿ,ಗೋವಿಂದ ಚಾರಿ,ಕುಮಾರ್,ತಮ್ಮಯ್ಯ ಚಾರಿ,ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವರದಿ ಉಸ್ಮಾನ್ ಖಾನ್