ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಬಹುತೇಕ ಹಾಸ್ಟೆಲ್ ಗಳಲ್ಲಿ ಶೌಚಾಲಯ, ಬಾತ್ ರೂಂ, ಶುದ್ಧ ಕುಡಿಯುವ ನೀರು ಸೇರಿದಂತೆ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೇ ಹಂದಿಗಳ ಗೂಡಾಗಳಾಗಿವೆ. ಇದರಿಂದ ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಪೂರಕ ವಾತಾವರಣ ಇಲ್ಲದೇ ಅನಿವಾರ್ಯವಾಗಿ ಹಾಸ್ಟೆಲ್ ನಲ್ಲಿ ದಿನಗಳೆಯುವಂತಾಗಿದೆ. ಈ ಬಗ್ಗೆ ಅನೇಕ ವರ್ಷಗಳಿಂದ ಹೋರಾಟ ಮಾಡಿದ್ರೂ ಯಾವುದೇ ಪ್ರಯೋಜನ ಆಗಿಲ್ಲ. ತಾವುಗಳು ಹಾಸ್ಟೆಲ್ ಗೆ ಭೇಟಿ ನೀಡಿ ಒಂದು ವಾರದಲ್ಲಿ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಹಾಸ್ಟಲ್ ನಿಂದ ಶಾಸಕರ ಕಚೇರಿಯವರೆಗೂ ಪಾದಯಾತ್ರೆ ಮಾಡಲಾಗುವುದು ಎಂದು ಶಾಸಕರಿಗೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಎಸ್ಎಫ್ಐ ತಾಲೂಕು ಸಮಿತಿಯಿಂದ ಎಚ್ಚರಿಕೆಯ ಮನವಿ ಪತ್ರ ಸಲ್ಲಿಸಲಾಯಿತು.
ಬೇಡಿಕೆಗಳು:
ಹಾಸ್ಟೆಲ್ ಗೆ ಇಲಾಖೆಯಿಂದ ಅನುಮೋದನೆಗೊಂಡ ಫುಡ್ ಚಾರ್ಟ್ ಹಾಕಿ ಗುಣಮಟ್ಟದ ಆಹಾರ ನೀಡಬೇಕು.
ಮೆಟ್ರಿಕ್ ನಂತರದ ಹಾಸ್ಟೆಲ್ ನಲ್ಲಿ 10 ಶೌಚಾಲಯ ಹಾಗೂ 10 ಬಾತ್ರೂಮ್ ಕಟ್ಟಿಸಬೇಕು.
ಹಾಸ್ಟೆಲ್ ನ ಕಟ್ಟಡ ಸಂಪೂರ್ಣವಾಗಿ ಶಿಥಿಲಾವಸ್ಥೆಯಲ್ಲಿದ್ದು, ಹೊಸ ಕಟ್ಟಡ ಮಂಜೂರಾತಿಗೆ ಕ್ರಮ ತೆಗೆದುಕೊಳ್ಳಬೇಕು.
ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.
ಹಾಸ್ಟೆಲ್ ಗಳಲ್ಲಿ ಗ್ರಂಥಾಲಯ ವ್ಯವಸ್ಥೆ ಮಾಡಬೇಕು.
ಹಾಸ್ಟೆಲ್ ಗಳಲ್ಲಿ ಶುಚಿತ್ವ ಕಾಪಾಡಬೇಕು.
ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರ ಹಾಸ್ಟೆಲ್ ನಲ್ಲಿ ಯುಪಿಎಸ್ ಅಳವಡಿಸಬೇಕು
ಎರಡು ಹಾಸ್ಟೆಲ್ ಗಳಲ್ಲಿ ಬಿಸಿನೀರಿಗೆ ಹಾಗೂ ಕರೆಂಟಿಗೆ ಸೋಲಾರ್ ವ್ಯವಸ್ಥೆ ಮಾಡಬೇಕು.
ಬಕೇಟು ಚಂಬು, ಸೊಳ್ಳೆ ಬತ್ತಿ, ಪ್ರಥಮ ಚಿಕಿತ್ಸೆ ಪೆಟ್ಟಿಗೆ ಸೇರಿ ಇತ್ಯಾದಿ ಅಗತ್ಯ ಮೂಲಭೂತ ಸೌಕರ್ಯ ನೀಡಬೇಕು.
ಕೋವಿಡ್ ಸೆಂಟರ್ ಗೆ ಬಳಕೆ ಮಾಡಿದ ಗಾದಿ ಹಾಗೂ ಬೆಡ್ ಶೀಟ್ ಗಳನ್ನು ತೆರವುಗೊಳಿಸಿ ಹೊಸ ಬೆಡ್ ಗಳನ್ನು ನೀಡಬೇಕು.
ಹಾಸ್ಟೆಲ್ಗಳಿಗೆ ಸೆಕ್ಯೂರಿಟಿಯನ್ನು ನೇಮಕ ಮಾಡಬೇಕು.
ಹಟ್ಟಿ ಚಿನ್ನದ ಗಣಿ ಕಂಪನಿಯಿಂದ ಬಂದ ಏಳು ಲಕ್ಷ ಅನುದಾನ ಏನಾಯಿತು ಈ ಬಗ್ಗೆ ಸಂಬಂಧಿಸಿದ ದಾಖಲೆಗಳು ನೀಡಬೇಕು.
ಅಡುಗೆಗೆ ಬೇಕಾದ ಅಗತ್ಯ ಪಾತ್ರೆ ಹಾಗೂ ಇತರೆ ಸಾಮಗ್ರಿಗಳನ್ನು ನೀಡಬೇಕು.
ಅಡಿಗೆಯವರ ಬಾಕಿ ವೇತನ ಕೊಡಬೇಕು.
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷರು ರಮೇಶ ವೀರಾಪೂರು, ತಾಲೂಕಾಧ್ಯಕ್ಷ ಗೋವಿಂದ, ಜಮದಗ್ನಿ, ವಡಿಕೆಪ್ಪ, ಗದ್ದೆಪ್ಪ, ದೇವರಾಜ, ನಿಂಗಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.