ಹನೂರು ತಾಲೂಕಿನ ಚಂಗವಾಡಿ ಗ್ರಾಮದಲ್ಲಿ ಇಂದು ನಡೆದ ವಿಶ್ವ ಕರ್ಮ ಜಯಂತಿಯಲ್ಲಿ ವಿರಾಟ್ ವಿಶ್ವ ಕರ್ಮದ ಸಂಘದ ನಾಮ ಫಲಕ್ಕೆ ಪೂಜೆ ಮಾಡಿ ಚಾಲನೆ ನೀಡಿ ನಂತರ ವಿಶ್ವಕರ್ಮ ನಿಗಮ ಮಂಡಳಿ ಚಾಮರಾಜನಗರ ಜಿಲ್ಲಾ ನಿರ್ದೇಶಕರಾದ ಶ್ರೀನಿವಾಸ್ ಬಂಡಳ್ಳಿ ಮಾತನಾಡಿ ವಿಶ್ವ ಕರ್ಮ ಜನಾಂಗವು ಕಾಯಕ ಸಮಾಜ, ಜನರಿಗಾಗಿ ದುಡಿಯುವ ಸಮಾಜವಾಗಿದೆ ಹಾಗೂ ಜನರಿಗಾಗಿ ಸೇವೆ ಮಾಡುವ ಸಮಾಜ ಆದರೂ ಸರ್ಕಾರದ ಸವಲತ್ತುಗಳಿಂದ ವಂಚಿತ ವಾಗಿದೆ ಆದರಿಂದ ಜನ ಪ್ರತಿನಿಧಿಗಳು ನಮ್ಮ ಸಮಾಜಕ್ಕೆ ಕೇವಲ ಚುನಾವಣಾ ಸಮಯದಲ್ಲಿ ಬಳಸಿಕೊಳ್ಳುತ್ತಿದೆ ದಯವಿಟ್ಟು ಮುಂದಿನ ದಿನಗಳಲ್ಲಿ ಹೀಗೆ ಆಗ ಬಾರದು ಸರಕಾರದ ಸವಲತ್ತು ನಮ್ಮ ಸಮಾಜಕ್ಕೆ ಸಿಗುವಂತಹ ಕೆಲಸ ಆಗಬೇಕು ಎಂದರು.
ವಿಶ್ವ ಕರ್ಮ ಸಂಘಟನೆಯ ಅಧ್ಯಕ್ಷ ಪಿ.ರಮೇಶ್ ಮಾತನಾಡಿ ಪ್ರತಿಯೊಂದು ಹಳ್ಳಿಯಲ್ಲೂ ಹೀಗೆ ವಿಶ್ವ ಕರ್ಮ ಜಯಂತಿ ಆಚರಣೆ ಆಗ ಬೇಕು ಹಾಗೆಯೇ ಎಲ್ಲಾ ವಿಶ್ವಕರ್ಮ ಜನಾಂಗದ ಯುವಕರು ಹಾಗೂ ಮುಖಂಡರು ಒಗ್ಗಟ್ಟಾಗಿ ಸಂಘಟನೆಯಲ್ಲಿ ಪಾಲ್ಗೊಂಡು ಸಂಘದಲ್ಲಿ ಸೇರ್ಪಡೆಯಾಗಿ ಸಂಘಟನೆಯಲ್ಲಿ ಹೆಚ್ಚಿನ ಸಂಖೆಯಲ್ಲಿ ಸೇರಬೇಕು ಎಂದರು.
ಈ ಸಂದರ್ಭದಲ್ಲಿ,ಗೌರವ ಅಧ್ಯಕ್ಷರು ಪಿ.ರಮೇಶ್, ಅಧ್ಯಕ್ಷರು ಆರ್ ಸಿದ್ದಾಚರ್, ನಿಗಮ ಮಂಡಳಿ ನಿರ್ದೇಶಕ ಜಿಲ್ಲಾ ನಿರ್ದೇಶಕರು ಶ್ರೀನಿವಾಸ್ ಬಂಡಳ್ಳಿ, ಕಾರ್ಯದರ್ಶಿ ದೇವರಾಜ್ ಆಚಾರ್, ,ರವಿಕುಮಾರ್ ,ನಟರಾಜ ಚಾರ್,ವಿರಾಟ್ ವಿಶ್ವ ಕರ್ಮ ಸಂಘದ ಸರ್ವ ಸದಸ್ಯರು ವಿಶ್ವ ಕರ್ಮ ಜನಾಂಗದ ಯುವಕರು ಹಾಗೂ ಮುಖಂಡರು ಇದ್ದರು.
ವರದಿ :ಉಸ್ಮಾನ್ ಖಾನ್