ಹನೂರು: ಪಟ್ಟಣದಲ್ಲಿ ವಿಶ್ವಕರ್ಮ ಜಯಂತಿ ಪೂಜಾ ಕಾರ್ಯ ಹಾಗೂ ಮೆರವಣಿಗೆ ಕಾರ್ಯಕ್ರಮ ಸಂಭ್ರಮ, ಸಡಗರದೊಂದಿಗೆ ವಿಜೃಂಭಣೆಯಿಂದ ಜರುಗಿತು.
ಪಟ್ಟಣದ ಆರ್.ಎಸ್.ದೊಡ್ಡಿ ಮಹದೇಶ್ವರ ದೇವಸ್ಥಾನ ಆವರಣದಲ್ಲಿ ಸಪ್ತ ಅಶ್ವಾರೂಢ ಬೆಳ್ಳಿ ರಥದಲ್ಲಿ ವಿಶ್ವಕರ್ಮ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಿತು.
ಈ ಧಾರ್ಮಿಕ ಕಾರ್ಯದಲ್ಲಿ ಶಾಸಕ ಎಂ.ಆರ್.ಮಂಜುನಾಥ್ ಪಾಲ್ಗೊಂಡಿದ್ದರು.
ಬಳಿಕ ಮಾತನಾಡಿದ ಶಾಸಕ ಎಂ.ಆರ್.ಮಂಜುನಾಥ್, ನಬೋ ಮಂಡಲ ಹಾಗೂ ದೇವಾನು ದೇವತೆಗಳ ಸೃಷ್ಟಿಕರ್ತ ಎಂದು ವಿಶ್ವಕರ್ಮರನ್ನು ಕರೆಯುವುದು ಅವರ ಮಹತ್ವವನ್ನು ಸಾರುತ್ತದೆ. ಮಹನೀಯರು ತತ್ವ ಆದರ್ಶಗಳು ನಮಗೆ ದಾರಿ ದೀಪವಾಗಲಿ. ಸಮುದಾಯದ ಜನತೆಗೆ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ವಿಜೃಂಭಣೆಯ ಮೆರವಣಿಗೆ:
ವಿಶ್ವಕರ್ಮ ಜಯಂತಿ ಮೆರವಣಿಗೆ ಕಾರ್ಯಕ್ರಮಕ್ಕೆ ಶಾಸಕ ಮಂಜುನಾಥ್ ಚಾಲನೆ ನೀಡಿದರು. ಆರ್.ಎಸ್.ದೊಡ್ಡಿಯಿಂದ ಹನೂರಿ ರು ಪಟ್ಟಣದವರೆಗೆ ಮೆರವಣಿಗೆ ಸಾಗಿತು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ವಾದ್ಯ ಮೇಳಗಳೊಂದಿಗೆ ಸಾಗಿತು. ಪಾಲ್ಗೊಂಡಿದ್ದ ಯುವಕರು, ಮಕ್ಕಳು ಕುಣಿದು ಕುಪ್ಪಳಿಸಿದರು.
ಈ ಸಂದರ್ಭದಲ್ಲಿ ವಿಶ್ವಕರ್ಮ ಸಮುದಾಯದ ತಮ್ಮಯ್ಯಚಾರಿ, ನಾಗಯ್ಯಚಾರಿ, ಸಿದ್ದರಾಜು, ಮುತ್ತುರಾಜು, ಯೋಗೇಶ್, ಮುರುಗೇಶ್, ಮುತ್ತುರಾಜು, ಕುಮಾರಚಾರಿ, ಗೋವಿಂದಚಾರಿ, ರವಿ, ಸಮುದಾಯದ ಮುಖಂಡರುಗಳು, ಯುವಕರು, ಮಕ್ಕಳು ಉಪಸ್ಥಿತರಿದ್ದರು.
ವರದಿ ಉಸ್ಮಾನ್ ಖಾನ್