ಕೊಟ್ಟೂರು :ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿ ಅಧಿಕಾರಿಗಳು 15-09- 2024 ತಿಂಗಳ ರಿಂದ ಪ್ರತಿ ತಿಂಗಳು 3 ನೇ ಶನಿವಾರ ದಂದು 2-10-2024 ತಿಂಗಳ ರವರಿಗೆ ಗ್ರಾಮದಲ್ಲಿ “ನಮ್ಮ ನಡೆ ಸ್ವಚ್ಛತೆ ಕಡೆ”ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಸರ್ಕಾರ ಅದೇಶ ನೀಡಲಾಗಿತ್ತು ಈ ಅದೇಶದ ಪ್ರಕಾರ
ಕೊಟ್ಟೂರು ತಾಲೂಕಿನ ರಾಂಪುರ ಗ್ರಾಮ ಪಂಚಾಯತಿ ಅಧಿಕಾರಿಗಳು 21-9-2024 ರ 3 ನೇ ಶನಿವಾರದಂದು
ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದಲ್ಲಿ “ನಮ್ಮನಡೆ ಸ್ವಚ್ಛತೆ ಕಡೆ”ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮವನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಆನಂದ ರವರು ದೀಪ ಬೆಳಗಿ ಪ್ರತಿಜ್ಞೆ ಮಾಡುವುದರ ಮೂಲಕ ಈ ಕಾರ್ಯಕ್ರಮವನ್ನು ಚಾಲನೆ ನೀಡಿದರು.ನಂತರ ಗ್ರಾಮದಲ್ಲಿ ಸ್ವಚ್ಛತೆ ಜಾಗೃತಿ ಮೂಡಿಸಲು ಗ್ರಾಮದ ಬೀದಿಗಳಲ್ಲಿ
ಜಾಥ ನೆಡೆಸಿ ಮತ್ತು ಗ್ರಾಮದಲ್ಲಿ ಸ್ವಚ್ಛತೆ ಮಾಡುವುದರ ಮೂಲಕ ಗ್ರಾಮಸ್ಥರಿಗೆ ಸ್ವಚ್ಛತೆ ಜಾಗೃತಿ ಅರಿವು ಮೂಡಿಸಿದರು.
ಈ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಎ ಡಿ ವಿಜಯಕುಮಾರ್ ಸಿಬ್ಬಂದಿ ವರ್ಗದವರು, ಗ್ರಾಮ ಪಂಚಾಯಿತಿ ಪಿಡಿಒ ಉಮಾಪತಿ ಪಿ. ಸಿಬ್ಬಂದಿ ವರ್ಗದವರು, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಎಚ್ ಬಸಪ್ಪ, ಉಪಾಧ್ಯಕ್ಷರಾದ ಎಚ್ ಯು ಮಹಾದೇವಿ, ಗ್ರಾಮ ಪಂಚಾಯಿತಿ ಸದಸ್ಯರಾದ ಅಂಗಡಿ ನಾಗರಾಜ,ಹುಲಿಗೆಮ್ಮಗಂಡ ಬಸವರಾಜ ,ಡಿ ಗಂಗಮ್ಮ ಗಂಡ ನಾಗರಾಜ, ಅನುಸೂಯ ಗಂಡ ಭರ್ಮಲಿಂಗಪ್ಪ ,ಎಚ್. ಮೂಗಪ್ಪ ,ಆರೋಗ್ಯ ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಸಂಘ ಸಂಸ್ಥೆಗಳ ವರ್ಗದವರು, ಶಿಕ್ಷಕರು ವಿಧ್ಯಾರ್ಥಿಗಳು, ಗ್ರಾಮಸ್ಥರು ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.