ಚಾಮರಾಜನಗರ:ಪಿ.ಜಿ ಪಾಳ್ಯದಲ್ಲಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನವೀಕರಣವನ್ನು ಶಾಸಕ ಎಂ.ಆರ್ ಮಂಜುನಾಥ್ ರವರು ಉದ್ಘಾಟನೆಯನ್ನು ನೆರವೇರಿಸಿ ನಂತರ ಮಾತನಾಡಿದ ಅವರು ಹಾಲು ಉತ್ಪಾದಕರ ಸಹಕಾರ ಸಂಘವು ರೈತರಿಗೆ ಅತ್ಯವಶ್ಯಕ ವ್ಯವಸಾಯದ ಜೊತೆ ಗೆ ರೈತರು ಹೈನುಗಾರಿಕೆ ಮಾಡಿ ಹಾಲು ಉತ್ಪಾದಿಸಿ ತಮ್ಮ ದಿನ ನಿತ್ಯದ ಖರ್ಚು ವೆಚ್ಚಗಳಿಗೆ ಆರ್ಥಿಕವಾಗಿ ಸಬಲರಾಗಬಹುದುವುದು ಎಂದರು.
ಇದೇ ಸಂದರ್ಭದಲ್ಲಿ ಶಾಸಕರಿಗೆ ಪಿಜಿ ಪಾಳ್ಯದ ಜನರಿಂದ ಪಶುವೈದ್ಯಸ್ಪತ್ರೆ ಬೇಡಿಕೆ ಇಟ್ಟರು ಇದಕ್ಕೆ ಸ್ಪಂದಿಸಿದ ಶಾಸಕರು ಮುಂದಿನ ದಿನಗಳಲ್ಲಿ ಪಿಜಿ ಪಾಳ್ಯಕ್ಕೆ ಪಶು ವೈದ್ಯ ಆಸ್ಪತ್ರೆಯನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ನಂತರ ಪಿ.ಜಿ ಪಾಳ್ಯ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷರಾದ ಕೃಷ್ಣ ಮೂರ್ತಿ ಮಾತನಾಡಿ ಶಾಸಕರು ತಮಗೆ ಮಾಡಿರುವ ಸಹಾಯ ಹಾಗೂ ಹಾಲು ಉತ್ಪಾದಕ ಘಟಕ ನಿರ್ಮಾಣಕ್ಕೆ ಅವರ ಕೊಡುಗೆ ಬಗ್ಗೆ ಮಾತನಾಡಿ ಕ್ಷೇತ್ರದ ನೆಚ್ಚಿನ ಶಾಸಕರ ಬಗ್ಗೆ ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಪಿಜಿ ಪಾಳ್ಯ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿ, ಚಾಮರಾಜನಗರದ ಹಾಲು ಒಕ್ಕೂಟದ ನಿರ್ದೇಶಕರಾದ ಮಹದೇವಸ್ವಾಮಿ, ಶಾಹುಲ್ ಅಹಮ್ಮದ್,ಚಾ ನಗರ ಹಾಲು ಒಕ್ಕೂಟದ ವ್ಯವಸ್ಥಾಪಕರಾದ ರಾಜಕುಮಾರ್ ,ಪ್ರಭಾರ ವ್ಯವಸ್ಥಾಪಕರಾದ ಚಾ.ನಗರ ಜಿಲ್ಲಾ ಹಾಲು ಒಕ್ಕೂಟ ನಿ. ಕುದೇರು ಶರತ್ ಕುಮಾರ್,ವಿಸ್ತರಣಾ ಅಧಿಕಾರಿ ಚಾ.ನಗರ ಜಿಲ್ಲಾ ಹಾಲು ಒಕ್ಕೂಟ ಕುದೇರು ವೆಂಕಟೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವರದಿ :ಉಸ್ಮಾನ್ ಖಾನ್