ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ರಾಜ್ಯ ಮಟ್ಟದ ಗಮಕ ಸಮ್ಮೇಳನಕ್ಕೆ ಅದ್ದೂರಿ ಚಾಲನೆ ನೀಡಿದ ತಹಶೀಲ್ದಾರ ಶ್ರೀ ಮಲ್ಲಣ್ಣ ಯಲಗೋಡ್

ಕಲಬುರಗಿ/ಜೇವರ್ಗಿ: ರಾಜ್ಯಮಟ್ಟದ ಗಮಕ ಸಮ್ಮೇಳನ ಜೇವರ್ಗಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಜೇವರ್ಗಿ “ಮೈಸೂರಿನ ಪರಂಪರೆ ಸಂಸ್ಥೆ”ಯ ಸಹಯೋಗದಲ್ಲಿ ಏರ್ಪಡಿಸಿರುವ ರಾಜ್ಯಮಟ್ಟದ ಗಮಕ ಸಮ್ಮೇಳನಕ್ಕೆ ತಾಲೂಕ ದಂಡಾಧಿಕಾರಿಗಳಾದ ಶ್ರೀ ಮಲ್ಲಣ್ಣ ಯಲಗೋಡ್ ಅವರು ಚಾಲನೆ ನೀಡಿದರು ಹಾಗೂ ಗಮಕ ಸಮ್ಮೇಳನ ಸರ್ವಾಧ್ಯಕ್ಷರಾದ ಡಾ.ಎ ವಿ ಪ್ರಸನ್, ಪ್ರೊ.ನಿರ್ಮಲಾ ಪ್ರಸನ್ ಬೆಂಗಳೂರು ರವರಿಗೆ ಕನ್ನಡಾಭಿಮಾನಿಗಳು ಅದ್ದೂರಿಯಾಗಿ ವಿವಿಧ ವಾದ್ಯ- ಮೇಳಗಳಾದ ಡೊಳ್ಳು ಕುಣಿತ,ಭಜನೆ,ಲೇಜಿಮ್,ಕನ್ನಡ ಸಾಹಿತ್ಯ ಮತ್ತು ರಾಷ್ಟ್ರ ಭಕ್ತರ “ಜಯ ಘೋಷ್” ಹಾಕುತ್ತಾ ಮೆರವಣಿಗೆ ಮುಖೇನ ವಸಂತ ಕುಷ್ಠಗಿಯವರ ವೇದಿಕೆಗೆ ಸ್ವಾಗತಿಸಿದರು.


ನಂತರ ಕಾರ್ಯಕ್ರಮವನ್ನು ಡಾ.ಅಲ್ಲಮ ಪ್ರಭು ದೇಶಮುಖ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಕಲಬುರಗಿಯವರು ದಿವ್ಯ ಸಾನಿದ್ಯ ವಹಿಸಿದರು.


ಶ್ರೀ ಬಸವರಾಜಗೌಡ ಪಾಟೀಲ್ ನರಿಬೋಳ ರವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು ಇದೇ ಸಂಧರ್ಭದಲ್ಲಿ ಸಮ್ಮೇಳ ಸರ್ವಾಧ್ಯಕ್ಷರಾದ ಡಾ. ಎ ವಿ ಪ್ರಸನ್ ಕೆ.ಎ.ಎಸ್. ನಿವೃತ್ತ ವಿಶೇಷ ಜಿಲ್ಲಾಧಿಕಾರಿಗಳು ಹಾಗೂ ಗಮಕ ವಿದ್ವಾಂಸರು,ಗಮಕ ಕಲೆ ಎಂದರೇನು ಮತ್ತು ಅದರ ಮಹತ್ವ,ಚಾರಿತ್ರ್ಯಿಕ ಹಿನ್ನೆಲೆ,ಕನ್ನಡ ಭಾಷೆಯ ವಿವಿಧ ವೈಶಿಷ್ಠತೆಯ ಸ್ವರೂಪದ ಬಗ್ಗೆ,ಗಮಕ ಕಲೆಯ ತಾಳ ಮತ್ತು ಲಯ ಬದ್ದವಾಗಿ ಹಾಡುವುದರ ಬಗ್ಗೆ ಸವಿವರವಾಗಿ ಸರ್ವಾಧ್ಯಕ್ಷೀಯ ನುಡಿಗಳನ್ನು ವ್ಯಕ್ತ ಪಡಿಸಿದರು.ಕಾರ್ಯಕ್ರಮದ ಪ್ರಾಸ್ತವಿಕ ನುಡಿಗಳನ್ನು ಕ.ಸಾ.ಪ ಅಧ್ಯಕ್ಷರಾದ ಶ್ರೀ ಎಸ್ ಕೆ ಬಿರಾದಾರ ಹೇಳಿದರು.
ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷರಾದ ಶ್ರೀ ವಿಜಯಕುಮಾರ ಪಾಟೀಲ್ ತೆಗಲತಿಪ್ಪಿಯವರು ಶ್ರೀ ಮಹಾಂತೇಶ ಪಾಟೀಲ್ ಯಾತನೂರ ರವರ ಕವನ ಸಂಕಲನ “ಜೀವನದ ರತ್ನ” ಎಂಬ ಕವನ ಸಂಕಲನದ ಪುಸ್ತಕ ಬಿಡುಗಡೆ ಮಾಡಿದರು.
ಕಾರ್ಯಕ್ರಮದ ಮುಖ್ಯ ಅಂಶಗಳೆಂದರೆ ಗಮಕ ವಾಚನ ಮತ್ತು ವ್ಯಾಖ್ಯಾನಗಳಾದ ಕುಮಾರವ್ಯಾಸನ ಭಾರತ ಪಾಶುಪತಾಸ್ತ್ರ ಪ್ರಧಾನ,ಮಂಕುತಿಮ್ಮನ ಕಗ್ಗ,ಚಾಮರಸನ ಪ್ರಭುಲಿಂಗ ಲೀಲೆ,ಪಠ್ಯಾಧಾರಿತ ಗಮಕ ಪ್ರಾತ್ಯಕ್ಷಿಕೆ,ರನ್ನನ ಗದಾಯುದ್ಧ,ಹರಿಶ್ಚಂದ್ರ ಕಾವ್ಯ ಪರಮೇಶ್ವರ ಸಾಕ್ಷ್ಯಾತ್ಕಾರ ಹಿಗೇ ಸುಮಾರು ಆರು ಗಮಕ ಸಾಹಿತ್ಯವನ್ನು ಬೇರೆ-ಬೇರೆ ವಿಧ್ವಾಂಸರು ಮಾಡಿದರು.ಕಾರ್ಯಕ್ರಮದಲ್ಲಿ ಯಡ್ರಾಮಿ ತಾಲೂಕಿನ ಯತ್ನಾಳ ಗ್ರಾಮದ ಕನ್ನಡಾಭಿಮಾನಿಯಾದ ರೈತ ನಾಯಕ “ಅಲಿಸಾಬ ಅಮಿನಸಾಬ ಮುಲ್ಲಾ” ಅಧ್ಬುತವಾದ ಗಾಯನವನ್ನು ವೇದಿಕೆ ಮೇಲೆ ಪ್ರಸ್ತುತ ಪಡಿಸಿದರು.


ಕಾರ್ಯಕ್ರಮದ ಕೊನೆಯ ಘಟ್ಟವಾದ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದ ನೇತೃತ್ವವನ್ನು ಐ.ಎಸ್ ಹಿರೇಮಠ ನಿವೃತ್ತ ತೋಟಗಾರಿಕೆ ಇಲಾಖೆ ಜೇವರ್ಗಿಯವರು ನೆರವೇರಿಸಿದರು.ಈ ಸಂಧರ್ಭದಲ್ಲಿ ಹಲವಾರು ರೀತಿಯ ಪ್ರಶಸ್ತಿಗಳಾದ ಡಾ. ಎಸ್ ಎ ಪಾಟೀಲ್ ಬಿರಾಳ ಪ್ರಶಸ್ತಿ,ನೃಪತುಂಗ ಪ್ರಶಸ್ತಿ,ಉತ್ತಮ ಪ್ರಕಾಶಕ ಪ್ರಶಸ್ತಿ,ಷಣ್ಮುಖ ಶಿವಯೋಗಿಗಳ ಸೇವಾ ಪ್ರಶಸ್ತಿ, ನಾಟಿ ವೈಧ್ಯ ಪ್ರಶಸ್ತಿ, ಉತ್ತಮ ಶಿಕ್ಷಕ ಪ್ರಶಸ್ತಿ ಹಿಗೆ ಹತ್ತು- ಹಲವಾರು ಪ್ರಶಸ್ತಿಗಳು ಗಣನೀಯವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕಸಾಪ ಗೌರವ ಅಧ್ಯಕ್ಷರಾದ ಶ್ರೀ ಚನ್ನಮಲ್ಲಯ್ಯ ಹಿರೇಮಠ ಹಾಗೂ ಕಸಾಪ ತಾಲೂಕು ಅಧ್ಯಕ್ಷರಾದ ಎಸ್ ಕೆ ಬಿರಾದಾರವರು ಹಾಗೂ ಪಧಾಧಿಕಾರಿಗಳು ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ನಿರಂತರವಾಗಿ ಎರಡು ದಿನಗಳ ಕಾಲ ಕಾರ್ಯಕ್ರಮದ ನಿರೂಪಣೆಯನ್ನು ಡಾ.ಹಣಮಂತ್ರಾಯ ರಾಂಪೂರೆ ಜೇವರ್ಗಿಯವರು ನಿರ್ವಹಿಸಿದರು
ಈ ಸಂದರ್ಭದಲ್ಲಿ ಗೌರವ ಕಾರ್ಯದರ್ಶಿಗಳಾದ ಕಲ್ಯಾಣಕುಮಾರ ಸಂಗಾವಿ ಮತ್ತು ಶ್ರೀ ಹರಿ ಎಸ್ ಕರಕಿಹಳ್ಳಿ,ಶಾಂತಲಿಂಗ ಪಾಟೀಲ್ ಕೋಳಕೂರ,ಎಸ್ ಟಿ ಬಿರಾದಾರ,ಎ ಸಿ ಹರವಾಳ,ಬಂಗಾರೆಪ್ಪ ಆಡಿನ ಕೋಳಕೂರ, ಸಿದ್ರಾಮಯ್ಯ ಎಸ್ ಮಠ,ಮಹೇಶ ಚಿಂತನಳಿ,ರಾಜು ಮುದ್ದಡಗಿ,ಮಲ್ಲು ಚನ್ನಮಲ್ಲಪಗೋಳ್,ಮಹಾಂತಯ್ಯ ಶ್ರೀ ಹಿರೇಮಠ,ಶಿವಪುತ್ರ ನೆಲ್ಲಗಿ,ಹಣಮಂತ್ರಾಯಗೌಡ ಪಾಟೀಲ್ ಜಗದೀಶ ಉಕನಾಳಕರ್,ಸದಾನಂದ ಪಾಟೀಲ್,ಶರಣು ಟಿ ಭೂತಪೂರ,ಗುಡೂರ ಎಸ್ ಎನ್,ನ್ಯಾಯಮೂರ್ತಿ ಶಿವರಾಜ ಪಾಟೀಲ್,ಭೀಮರಾವ್ ಆರ್. ಗುಜಗೊಂಡ,ಚಂದ್ರಶೇಖರ ತುಂಬಗಿ,ಜಗನ್ನಾಥ ಇಮ್ಮಣ್ಣಿ ಹಾಗೂ ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.

ವರದಿ: ಚಂದ್ರಶೇಖರ ಮಾಲಿ ಪಾಟೀಲ್ (ಗುಡೂರ ಎಸ್ . ಎನ್)

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ