ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿ ನೀಡ್ ಬೇಸ್ ಇಂಡಿಯಾ ಸಂಸ್ಥೆ ವತಿಯಿಂದ ಉಚಿತ ಹೊಲಿಗೆ ತರಬೇತಿ ನೀಡುತ್ತಿದ್ದು, 2023- 24 ನೇ ಸಾಲಿನ ತರಬೇತಿಯನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ವಿತರಣೆ ಮಾಡಿ ಬೀಳ್ಕೊಡುವ ಸಮಾರಂಭ ಹಾಗೂ ತರಬೇತಿ ಪಡೆಯಲಿಚ್ಚಿಸುವ ಹೊಸ ವಿದ್ಯಾರ್ಥಿಗಳಿಗೆ ಸ್ವಾಗತ ಮಾಡಿಕೊಳ್ಳುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸಂಸ್ಥೆಯ ವತಿಯಿಂದ ಉತ್ತಮವಾದ ಕಾರ್ಯಕ್ರಮಗಳನ್ನು ನೀಡಲಾಗುತ್ತಿದ್ದು, ತರಬೇತಿಗಳನ್ನು ಪಡೆದುಕೊಂಡು ಉತ್ತಮ ಜೀವನ ಸಾಗಿಸಲು ಸಲಹೆ ನೀಡಿದರು.ನಿರ್ದೇಶಕರಾದ ರಹಿಂ ಶೇಕ್ ಮತ್ತು ಮಲ್ಲಿಕಾರ್ಜುನ್ ಬಡಿಗೇರ್ ಮಾತನಾಡಿದರು. ಹನುಮಂತಪ್ಪ ಗಾಣದಾಳ್, ಸುನಿಲ್ ಬಸೂದೆ, ಅಂಬಾಸಾ ಬಸವಾ ,ಶ್ರೀಮತಿ ಸರೋಜಾಬಾಯಿ ಸಿಂಗ್ರಿ, ಜ್ಯೋತಿಬಾಯಿ ರಂಗ್ರೇಜ್ ಎಸ್ ಎಸ್ ಕೆ ಸಮಾಜದ ಸಲಹಾ ಸಮಿತಿ ಸದಸ್ಯರು, ಸಂಯೋಜಕರಾದ ಮಹಾಂತೇಶ್ ಅಂಗಡಿ ಮತ್ತು ವೆಂಕಟೇಶ್ ಬಸದೆ, ಹೊಲಿಗೆ ತರಬೇತಿ ಕೇಂದ್ರದ ಶಿಕ್ಷಕಿಯರಾದ ಶ್ರೀಮತಿ ಶಾಂತಾಬಾಯಿ ಸೂಡಿ ಮತ್ತು ಶ್ರೀಮತಿ ಬಸಮ್ಮ ಉದ್ದಾರ್, ಶ್ರೀಮತಿ ಜ್ಯೋತಿಕಾ ಅಮ್ಮನಗುದ್ದಿ, ಶ್ರೀಮತಿ ಭಾಗ್ಯಶ್ರೀ ಪಾವಿ ಹಾಗೂ ಸಂಸ್ಥೆಯ ಕಂಪ್ಯೂಟರ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.
