ಕೊಪ್ಪಳ:ನೀವು ಕೆ.ಎಸ್.ಆರ್.ಟಿ.ಸಿ ಬಸ್ ಗಳನ್ನು ನೋಡಿರುತ್ತೀರಿ.
ಈ ಬಸ್ ಸಹ ದೂರದಿಂದ ನಿಮಗೆ ಹಾಗೇ ಕಾಣುವದು ಆದರೆ ಇದು ಕೊಪ್ಪಳ ರೆಡ್ ಕ್ರಾಸ್ ಘಟಕದ ಬಸ್.ಕೊಪ್ಪಳ ರೆಡ್ ಕ್ರಾಸ್ ಘಟಕ ರಾಜ್ಯದಲ್ಲಿಯೇ ೫-೬ ವರ್ಷಗಳಿಂದ ಹೆಚ್ಚಿನ ರಕ್ತ ಸಂಗ್ರಹಣೆ(ಪ್ರತಿವರ್ಷ ೯ಸಾವಿರ- ೧೦ ಸಾವಿರ ಯುನಿಟ್)ಮಾಡಿದ್ದಕ್ಕೆ ಮಾನ್ಯ ರಾಜ್ಯಪಾಲರ ಪ್ರಶಸ್ತಿಗೆ ಪಾತ್ರವಾಗುತ್ತಾ ಬಂದಿದೆ. ಉತ್ತಮ ಸೇವೆ ಸಲ್ಲಿಸುತ್ತಿರುವದನ್ನು ಪರಿಗಣಿಸಿ ಕೇಂದ್ರ ಸರ್ಕಾರವು ಈ ಬಸ್ ನೀಡಿದೆ.ಇದರಲ್ಲಿ ೬ ಜನ ಏಕಕಾಲಕ್ಕೆ ರಕ್ತದಾನ ಮಾಡಲು ಅನುಕೂಲಕರ ಬೆಡ್,ಅಗತ್ಯ ವೈದ್ಯಕೀಯ ಸಾಮಗ್ರಿಯೊಂದಿಗೆ ಸುಸಜ್ಜಿತವಾಗಿದೆ ಮತ್ತು ಹವಾನಿಯಂತ್ರಿತ (ಎ.ಸಿ) ಸೌಲಭ್ಯ ಹೊಂದಿದೆ ಇದರ ಅಂದಾಜು ಮೌಲ್ಯ ೮೦ ಲಕ್ಷ ರೂ.
ದೊಡ್ಡ ಪ್ರಮಾಣದ ರಕ್ತದಾನ ಶಿಬಿರಗಳನ್ನು ಆಯೋಜಿಸಿದಾಗ ಈ ವಾಹನ ಬಳಸಲಾಗುವದು.
ಇಡೀ ಕರ್ನಾಟಕದಲ್ಲಿ ಈ ತರದ ಬಸ್ ಸೌಲಭ್ಯ ಇರುವದು ಕೊಪ್ಪಳ ಮತ್ತು ಬೆಂಗಳೂರು ಜಿಲ್ಲೆಗೆ ಮಾತ್ರ ಎನ್ನುವುದು ವಿಶೇಷ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.