ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

“ಸಾಫಲ್ಯ ಬದುಕಿನ ಸಂದೇಶಗಳು” ಪುಸ್ತಕ ಲೋಕಾರ್ಪಣೆ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದ ಶರಣಬಸವೇಶ್ವರ ಕಲ್ಯಾಣ ಪಂಟಪದಲ್ಲಿ “ಸಾಫಲ್ಯ ಬದುಕಿನ ಸಂದೇಶಗಳು”ಪುಸ್ತಕ ಲೋಕಾರ್ಪಣೆ ಹಾಗೂ ಗ್ರಾಮದ ಸಾಧಕರಿಗೆ ಗೌರವ ಸನ್ಮಾನ ಕಾರ್ಯಕ್ರಮ ಜರುಗಿತು.
ತಾಲೂಕಿನ ಡಣಾಪೂರ ಗ್ರಾಮದಲ್ಲಿ ಬಸವ ಭಾರತಿ ಸಮುದಾಯ ಅಭಿವೃದ್ದಿ ಸಂಸ್ಥೆ ಬೆಂಗಳೂರ ಇವರೊಂದಿಗೆ ಕವಿ ಕಾದಂಬರಿಕಾರ ,ಕಥೆಗಾರ ಬಿ ವಿರುಪಣ್ಣ ಡಣಾಪೂರ ಅವರ ಆರನೇ ಕೃತಿಯಾದ ಸಾಫಲ್ಯ ಬದುಕಿನ ಸಂದೇಶಗಳು ಎಂಬ ಪುಸ್ತಕ ಲೋಕರ್ಪಾಣೆಯನ್ನು ಮಾಡಲಾಯಿತು.
ಈ ಸಾಫಲ್ಯ ಬದುಕಿನ ಪುಸ್ತಕದ ಸಾರವನ್ನು
ನಿಜಿಲಿಂಗಪ್ಪ ಮೆಣಸಿಗೆ ಅವರು ಸವಿಸ್ತಾರವಾಗಿ ತಿಳಿಸಿದರು, ಪುಸ್ತಕದಲ್ಲಿ ಜೀವನದಲ್ಲಿನ ಅನುಭವವನ್ನು ಪುಸ್ತಕದಲ್ಲಿ ಅಳವಡಿಸಿ ಲೋಕಕ್ಕೆಲ್ಲಾ ಹಂಚುವ ಪ್ರಯತ್ನ ವಿರುಪಣ್ಣನವರು ಮಾಡುತ್ತಿದ್ದಾರೆ ಬದುಕಿನ ಸಾರಾಂಶವನ್ನು ಈ ಪುಸ್ತಕ ಹೊಂದಿದೆ ಎಂದರು.

ಡಾ.ಶರಣಪ್ಪ ಕೊಲ್ಕಾರ ಇತಿಹಾಸ ತಜ್ಙರು ಅವರು ಅಧ್ಯಕ್ಷತೆಯಲ್ಲಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಆರನೇ ಕೃತಿಯನ್ನು ಬಿಡುಗಡೆ ಮಾಡುತ್ತಿರುವುದು ಬಹಳ ಸಂತೋಷ ಎನಿಸಿತು. ವಿರುಪಣ್ಣನವರು ಕವಿತೆ ಕಾದಂಬರಿ ಕಥ ಸಂಕಲನಗಳನ್ನು ಬರೆದಿದ್ದಾರೆ. ಅವರು ಸಾಮಾಜಿಕ ಜೀವನದಲ್ಲಿ ನಡೆದ ಕೆಲ ಅನುಭವಗಳನ್ನು ಪುಸ್ತಕದ ಮೂಲಕ ಜಗತ್ತಿಗೆ ಪರಿಚಯಿಸುವ ಪ್ರಯತ್ನ ಮಾಡುತ್ತಿದ್ದಾರೆ ಹಾಗೂ ತಮ್ಮ ವೃತ್ತಿ ಜೀವನದಲ್ಲಿ ಅತ್ಯಂತ ಸರಳ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸಿ ಎಲ್ಲಾ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು ತಮ್ಮ ಜೀವನದ ಅನುಭವಗಳನ್ನು ಹಾಗೂ ಸಮಾಜದಲ್ಲಿ ನಡೆಯುವ ಕೆಲ ಸತ್ಯ ಅಂಶಗಳನ್ನು ಪುಸ್ತಕದ ರೂಪದಲ್ಲಿ ಬರಹದ ಮೂಲಕ ಸಾರುವ ಪ್ರಯತ್ನ ಮಾಡುತ್ತಿದ್ದಾರೆ .

ಗ್ರಾಮದ ಪ್ರಶಸ್ತಿ ಪುರಸೃತರಾದ ಹಿರಿಯ ಕಲಾವಿದರಾದ ಈ ಚಿದಾನಂದಪ್ಪ ಅವರು ಮಾತನಾಡಿ ಡಣಾಪೂರ ವಿರುಪಣ್ಣನವರು ಮೊದಲಿನಿಂದಲೂ ಅವರು ಬರಹದ ಮೂಲಕ ಸಣ್ಣವಯಸ್ಸಲ್ಲೆ ಶಾಲೆಯಲ್ಲಿ ಕೆಲ ಸಣ್ಣ ಸಣ್ಣ ಕಥೆಗಳನ್ನು , ಸುಳ್ಳುವಾರ್ಥೆ ಇನ್ನಿತರ ಬರಹಗಳನ್ನು ಓದಿ ಹೇಳುತ್ತಿದ್ದರು ಅಂದಿನಿಂದ ಅವರು ಬರಹಗಳನ್ನು ರೂಢಿಸಿಕೊಂಡು ಇಂದು ತಮ್ಮ ಸ್ವ ಗ್ರಾಮದಲ್ಲಿ ಪುಸ್ತಕ ಬಿಡುಗಡೆಗೊಂಡು ನಮ್ಮಂತ ಕಲಾವಿದರನ್ನು ಗುರುತಿಸಿ ಗೌರವಿಸಿದ್ದಕ್ಕೆ ಸಂತೋಷವೆನಿಸಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಕವಿಗಳಾದ ವಿರುಪಣ್ಣ ಅವರು ಗ್ರಾಮದ ನಿಸ್ವಾರ್ಥ ಸೇವೆ ಸಲ್ಲಿಸಿದ ಮಸ್ತನವಲಿಸಾಬ ಅವರಿಗೆ ಜೀವ ರಕ್ಷಕ ಪ್ರಶಸ್ತಿ ,ಈ ಚಿದಾನಂದಪ್ಪರವರಿಗೆ ಹಾಸ್ಯ ರತ್ನ ಪ್ರಶಸ್ತಿ , ಕಾಳಾಚಾರಿ ಇವರಿಗೆ ನಾಟಕ ರತ್ನ ಪ್ರಶಸ್ತಿ,ಬಾಬುಸಾಬ ರವರಿಗೆ ನಾಟಕ ರತ್ನ ಪ್ರಶಸ್ತಿ ,ಯಂಕಪ್ಪ ಮಾಸ್ತರ ಇವರಿಗೆ ಶಿಕ್ಷಣ ರತ್ನ ಪ್ರಶಸ್ತಿನೀಡಿ ಗೌರವಿಸಿದರು.ಗ್ರಾಮದ ಆದರ್ಶ ಯುವಕ ಹನುಮೇಶ ಭಾವಿಕಟ್ಟಿ ಇವರ ಸಾಮಾಜಿಕ ಕಾರ್ಯ,ಪರಿಸರ ಸೇವೆ, ರಕ್ತದಾನದ ಸೇವೆಯನ್ನು ಶ್ಲಾಘಿಸಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಬಸವ ಭಾರತಿ ಸಮುದಾಯ ಅಭಿವೃದ್ದಿ ಸಂಸ್ಥೆ ಬೆಂಗಳೂರ ಅವರು
ಕವಿ ಕಾದಂಬರಿಕಾರ , ಕಥೆಗಾರ ಬಿ ವಿರುಪಣ್ಣ ಡಣಾಪೂರ ಅವರಿಗೆ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪುಸ್ತಕ ಬಿಡುಗಡೆಯ ಕಾರ್ಯಕ್ರಮದಲ್ಲಿ ಕವಿ ವಿರುಪಣ್ಣ ರವರ ಕುಟುಂಬದ ಸದಸ್ಯರಾದ ಶ್ರೀಮತಿ ಶಾರದಮ್ಮ, ಚನ್ನಬಸವ, ಪಲ್ಲವಿ ಉಪಸ್ಥಿತರಿದ್ದರು .ಕಾರ್ಯಕ್ರಮದ ನಿರುಪಣೆಯನ್ನು ಅಮೃತಾ ಹಾಗೂ ಲಿಂಗರಾಜ ಅವರು ಅಚ್ಚು ಕಟ್ಟಾಗಿ ನಡೆಸಿಕೊಟ್ಟರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇತಿಹಾಸ ತಜ್ಞರಾದ ಶರಣಬಸಪ್ಪ ಕೊಲ್ಕಾರ ,ನಿಜಿಲಿಂಗಪ್ಪ ಮೆಣಸಿಗೆ ಪುಸ್ತಕ ನಿರೂಪಣೆ ,ಡಾ.ಸೋಮಪ್ಪ , ಶ್ರೀರೇವಣ ಸಿದ್ದಯ್ಯತಾತನವರು, ಪಂಪಣ್ಣ ಚಾಪುಡಿ ಸಾಹಿತಿಗಳು ,ಹುಲಿಗೇಶ ಕುರುಗೋಡ ಚಿತ್ರನಟ ,ಗುಂಡಯ್ಯ ಸ್ವಾಮಿಗಳು ,ಪಿ.ಪಕೀರಪ್ಪ , ನಾಗಪ್ಪ ,ಶಿವಪ್ಪ ,ಈರಪ್ಪ ,ಸಿದ್ದರಾಯಮ್ಮಯ್ಯ ,ನಿಂಗರಾಜ ,ಚನ್ನಯ್ಯ , ಡಾ.ಚಿನ್ಮಯಿ, ಗ್ರಾಮಸ್ಥರು ಹಾಗೂ ಹಸಿರು ಬಳಗದ ಸದಸ್ಯರು ಇತರರು ಇದ್ದರು.

ವರದಿ ಹನುಮೇಶ ಭಾವಿಕಟ್ಟಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ