ಚಿಕ್ಕವನಾಗಿದ್ದಾಗ
ಪ್ರಪಂಚ ನೋಡಿ
ಎಲ್ಲರೂ ನನ್ನವರೆಂದು
ಸಂತೋಷದಿಂದ
ನಗು ನಗುತ್ತಿದ್ದೆ,
ವಯಸ್ಸಾದಂತೆ
ಸಮಾಜದ ಎಲ್ಲರೂ
ಆಸ್ತಿ,ಅಂತಸ್ತು, ಸ್ವಾರ್ಥಗಳ
ಬೇಲಿ ಹಾಕಿಕೊಂಡಿದ್ದ ನೋಡಿ
ವಿಷಾದದ ನಗು ನಗಲಾರಂಭಿಸಿದೆ
ಅದೇಕೋ ಏನೋ
ಇನ್ನೂ ನಗು ನಿಲ್ಲಿಸಲಾಗಿಲ್ಲ,
ನಂಗೊಂದು ಹೆದರಿಕೆ
ನಾನೂ ಸಹ ನಗೆ ನಿಲ್ಲಿಸದ
ಲಾಫಿಂಗ್ ಬುದ್ಧ
ಆಗಿ ಬಿಡುತ್ತೇನೋ ಅಂತ…
-ಡಾ.ಭೇರ್ಯ ರಾಮಕುಮಾರ್ ,ಮೈಸೂರು