ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬಗದೂರಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಪಂಚ ಕಮಿಟಿ ಟ್ರಸ್ಟ್ ನ ನೂತನ ಅಧ್ಯಕ್ಷರಾಗಿ ಶ್ರೀ ಶ್ರೀನಿವಾಸ್ ಬಿರಾದರ್ ಅವರು ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ಬಗದೂರಿ ಗ್ರಾಮದ ಗ್ರಾಮಸ್ಥರು, ಸಕಲ ಸದ್ಭಕ್ತರು, ಗುರು ಹಿರಿಯರು, ಅಣ್ಣ ತಮ್ಮಂದಿರು ತಾವೆಲ್ಲರೂ ಸೇರಿ ಸರ್ವಾನುಮತದಿಂದ ನನ್ನನ್ನು ದೇವಸ್ಥಾನದ ಟ್ರಸ್ಟ್ ನ ಅಧ್ಯಕ್ಷರಾಗಿ ಆಯ್ಕೆಮಾಡಿದಕ್ಕಾಗಿ ತಮ್ಮೆಲ್ಲರಿಗೂ ನನ್ನ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಸಂದೀಪ್ ಕುಮಾರ್