ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ತಾಲೂಕ ಘಟಕ ಮೂರು ವರುಷಗಳಿಂದ ಸಾಹಿತ್ಯ ಸಮ್ಮೇಳನ ಅಥವಾ ಸಾಹಿತ್ಯ ಕಾರ್ಯಕ್ರಮಗಳು ಇಲ್ಲದೇ ತಾಲೂಕಾ ಘಟಕ ನಿಷ್ಕ್ರಿಯವಾಗಿದೆ ತಾಲೂಕ ಅಧ್ಯಕ್ಷರಾದ ಶಿವ ಗೌಡ ಕಾಗೆಯವರು ಒಂದೇ ಒಂದು ಕಾರ್ಯಕ್ರಮ ಮಾಡಿಲ್ಲ ಇದು ನಿಜಕ್ಕೂ ನಾಚಿಕೆಗೇಡು ಜಿಲ್ಲೆಯ ಕೆಲವು ತಾಲೂಕು ಘಟಕಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಆದರೆ ಕಾಗವಾಡ ಘಟಕ ಸಂಬಂಧ ಇಲ್ಲದಂತೆ ವರ್ತನೆ ಮಾಡುತ್ತಿರುವುದು ಕನ್ನಡಿಗರಿಗೆ ನಿರಾಶೆ ಮೂಡಿಸಿದೆ, ಕೆಲಸ ಮಾಡಬೇಕು ಅಥವಾ ರಾಜಿನಾಮೆ ನೀಡಿ ಬೇರೆಯವರಿಗೆಅವಕಾಶ ನೀಡಬೇಕು ಎಂದು ಕಾಗವಾಡ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ಸದಸ್ಯ ಹಾಗೂ ಸಾಹಿತಿಗಳಾದ ದಯಾನಂದ ಪಾಟೀಲ ಒತ್ತಾಯಿಸಿದ್ದಾರೆ.
