ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಇಂಡಿ ಉಪ ವಿಭಾಗ ಹೆಸ್ಕಾಂದಲ್ಲಿ ಬರುವ ಲಚ್ಯಾಣ ಶಾಖೆಯ ಹಳ್ಳಿಗಳಾದ ಅಗರಖೇಡ, ಗುಬ್ಬೆವಾಡ, ಶಿರಗೂರ, ಲಚ್ಚಾಣ, ಪಡನೂರ, ಮಾವಿನಹಳ್ಳಿ, ಇಂಗಳಗಿ, ಬರಗುಡಿ, ಅಹಿರಸಂಗ ಗ್ರಾಮಗಳಲ್ಲಿ ಬರುವ ಗ್ರಾಹಕರು, ಗೃಹ ವಾಣಿಜ್ಯ ಬಳಕೆದಾರರು, ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದ ಗ್ರಾಹಕರು ನಿಗದಿತ 30 ದಿನದೊಳಗೆ ಬಿಲ್ ಪಾವತಿಸಬೇಕು ಇಲ್ಲದಿದ್ದಲ್ಲಿ ಮುಂದಿನ ಮೀಟರ್ ರೀಡಿಂಗ್ ಗೆ ಬರುವ ದಿನದಂದೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು.
ಅಕ್ಟೋಬರ್ 1 ನೇ ತಾರೀಖಿನಿಂದ ಮೀಟರ್ ರೀಡಿಂಗ್ ಮಾಡುವವರೊಂದಿಗೆ ಲೈನ್ ಮ್ಯಾನ್ ಗಳು ತೆರಳಲಿದ್ದು, ಹೊಸ ಬಿಲ್ ನೀಡುವ ಸಮಯದಲ್ಲಿ ಹಿಂದಿನ ಬಿಲ್ ಬಾಕಿ ಉಳಿಸಿಕೊಂಡಿದ್ದು ಕಂಡು ಬಂದರೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಿದ್ದಾರೆ.
ಆದ ಕಾರಣ ಗ್ರಾಹಕರು ವಿದ್ಯುತ್ ಸಂಪರ್ಕ ಕಡಿತಕ್ಕೆ ಅವಕಾಶ ಮಾಡಿಕೊಡದೆ, ವಿದ್ಯುತ್ ಬಿಲ್ಲನ್ನು ಪಾವತಿಸಿ ಇಲಾಖೆಯೊಂದಿಗೆ ಸಹಕರಿಸಬೇಕು ಹಾಗೂ ವಿದ್ಯುತ್ ಬಿಲ್ ವಸೂಲಾತಿಗಾಗಿ ಬರುವ ಇಲಾಖೆಯ ಸಿಬ್ಬಂದಿಯೊಂದಿಗೆ ಗ್ರಾಹಕರು ಅನುಚಿತವಾಗಿ ವರ್ತಿಸದೆ ವಿದ್ಯುತ್ ಬಿಲ್ ಬಾಕಿ ಪಾವತಿಸಬೇಕೆಂದು ಇಂಡಿ ಹೆಸ್ಕಾಂ ಉಪವಿಭಾಗದ ಲಚ್ಯಾಣ ಶಾಖೆಯ ಶಾಖಾಧಿಕಾರಿಗಳಾದ ಶ್ರೀ ಸಂತೋಷ್ ಬನಗೊಂಡೆ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-ಕರುನಾಡ ಕಂದ