ಪ್ರಸಕ್ತ ಶೈಕ್ಷಣಿಕ ವರ್ಷದ ನಾಲ್ಕು ತಿಂಗಳು ಕಳೆದರೂ ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ರಾಜ್ಯ ಸರ್ಕಾರ ಇನ್ನೂ ವೇತನ ಪಾವತಿಸಿಲ್ಲ. ಇದರಿಂದ 42 ಸಾವಿರಕ್ಕೂ ಅತಿಥಿ ಶಿಕ್ಷಕರು ಕಂಗಾಲಾಗಿದ್ದಾರೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರ ಮಾಸಿಕ 10000 ರೂ. ಹಾಗೂ ಪ್ರೌಢ ಅತಿಥಿ ಶಿಕ್ಷಕರಿಗೆ 10,500 ರೂ ವೇತನ ನಿಗದಿಪಡಿಸಿದೆ. ಇಷ್ಟು ಕಡಿಮೆ ವೇತನದಲ್ಲಿ ಜೀವನ ನಿರ್ವಹಣೆ ನಡೆಸುವುದೇ ಕಷ್ಟಕರ ಅದರಲ್ಲೂ 4 ತಿಂಗಳಿಂದ ವೇತನ ಕೈಗೆ ಸಿಗದೇ ನಮ್ಮ ಅತಿಥಿ ಶಿಕ್ಷಕರ ಪರಿಸ್ಥಿತಿ ಅಯೋಮಯವಾಗಿದೆ. ಎಂದು ಅತಿಥಿ ಶಿಕ್ಷಕರು ಗೋಳಿಡುತ್ತಿದ್ದಾರೆ.
ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಪ್ರಾಥಮಿಕ ಶಾಲೆಗಳಲ್ಲಿ 33.863 ಹಾಗೂ ಪ್ರೌಢ.8,954 ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ ಒಟ್ಟಾರೆ ರಾಜ್ಯದ 42,817 ಅತಿಥಿ ಶಿಕ್ಷಕರಿಗೆ ಕಳೆದ ನಾಲ್ಕು ತಿಂಗಳುಗಳಿಂದ ವೇತನ ಪಾವತಿಯಾಗಿಲ್ಲ. ವೇತನ ಪಾವತಿಯಾಗದಿರುವ ಬಗ್ಗೆ ಅತಿಥಿ ಶಿಕ್ಷಕರು ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಪಂಚಾಯತಿ ಬಳಿ ವಿಚಾರಿಸಿದರೆ ‘ಸರ್ಕಾರದಿಂದ ಬಜೆಟ್ ಬಂದಿಲ್ಲ’ ಎಂಬ ಉತ್ತರ ಸಿಗುತ್ತಿದೆ
2020-21ರ ಬಳಿಕ ರಾಜ್ಯ ಸರ್ಕಾರ ಅತಿಥಿ ಶಿಕ್ಷಕ ವೇತನ ಹೆಚ್ಚಿಸಿಲ್ಲ ಈ ಕುರಿತು ರಾಜ್ಯ ಸರ್ಕಾರದ ಗಮನಕ್ಕೆ ಹಲವು ಬಾರಿ ತಂದಿದ್ದೇವೆ ಅಲ್ಲದೆ ಹಲವಾರು ಶಾಸಕರಿಗೂ ಸಹ ಮನವಿಯನ್ನು ನೀಡಿದ್ದರೂ ಹೆಚ್ಚಿಸದ ಗೌರವಧನ ಅದಿರಲಿ, ಇದೀಗ ಕಳೆದ ನಾಲ್ಕು ತಿಂಗಳಗಳಿಂದ ವೇತನ ಪಾವತಿಸಿಲ್ಲ. ಇದರಿಂದ ಉಳಿಗಾಲವಿಲ್ಲದಂತಾಗಿದೆ. ಜೀವನ ನಿರ್ವಹಣೆ ಮಾಡುವುದೇ ಕಷ್ಟಕರವಾಗಿದೆ. ಅತಿಥಿ ಶಿಕ್ಷಕರನ್ನು ವರ್ಷ ಪೂರ್ತಿ ನೇಮಿಸಿಕೊಳ್ಳದೆ ತಮ್ಮ ಅವಶ್ಯಕತೆಗೆ ತಕ್ಕಂತೆ ಅತಿಥಿ ಶಿಕ್ಷಕರನ್ನು ಬಳಸಿಕೊಂಡು ಶಿಕ್ಷಕ ವೃತ್ತಿಗೆ ಅವಮಾನಿಸುತ್ತಿದ್ದಾರೆ.
-ಪರಶುರಾಮ ನಾಯಕ ಹುಲಿಹೈದರ,ಅತಿಥಿ ಶಿಕ್ಷಕ