ಕೊಪ್ಪಳ:ನಮ್ಮಲ್ಲಿ ಹಿಮೋಗ್ಲೋಬಿನ್ ಹೆಚ್ಚು ಇದ್ದರೆ ನಮ್ಮ ದೇಹದ ಭಾಗಗಳಿಗೆ ಅಕ್ಷಿಜನ ಪರಿಚಲನೆ ಆಗುತ್ತದೆ ಎಂದು ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಮಹೇಶ್ ಅವರು ಹೇಳಿದರು
ಕೊಪ್ಪಳ ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಯುವರೆಡ್ ಕ್ರಸ್ ಘಟಕ ಹಾಗೂ ಆರೂಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆರೂಗ್ಯ ಅಧಿಕಾರಿಗಳ ಕಾರ್ಯಲಯ ಕೊಪ್ಪಳ ಇವರ ಸಹಯೋಗದಲ್ಲಿ ನಡೆದ ವಿದ್ಯಾರ್ಥಿನಿಯರಿಗೆ ಹಿಮೋಗ್ಲೊಬಿನ್ ತಪಸಣಾ ಹಾಗೂ ಮಾಹಿತಿ ಶಿಭಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅವರು ಮುಂದುವರೆದು ಮಾತನಾಡುತ್ತಾ ಯಾರಿಗಾದರು ಹಿಮೋಗ್ಲೋಬಿನ್ ಕಡಿಮೆಯಿದ್ದರೆ ಅಂತವರನ್ನು ನಮ್ಮ ಸರಕಾರಿ ಆಸ್ಪತ್ರೆ ಕಡೆಯಿಂದ ನಿರಂತರವಾಗಿ ಚಿಕಿತ್ಸೆ ಕೊಡುತ್ತೇವೆ. ಎಲ್ಲರೂ ಉತ್ತಮವಾದ, ಶುಚಿಯಾದ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಗಣಪತಿ ಕೆ. ಲಮಾಣಿ ಅವರು ಮಾತನಾಡುತ್ತಾ ವಿದ್ಯಾರ್ಥಿನೀಯರು ಸರಿಯಾದ ಸಮಯಕ್ಕೆ ಆಹಾರ ಸೇವಿಸುತ್ತಿಲ್ಲ. ಇದರಿಂದ ಹಿಮಾಗ್ಲಿಬಿನ್ ಕಡಿಮೆ ಆಗುತ್ತದೆ. ಎಲ್ಲರೂ ಪೌಸ್ಟಿಕ ಆಹಾರವನ್ನು ಸೇವಿಸಿ ಆರೂಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ರಾಜ್ಯಶಾಸ್ರö್ತ ವಿಭಾಗ ಮುಖ್ಯಸ್ಥರಾದ ಡಾ.ಗವಿಸಿದ್ದಪ್ಪ ಮುತ್ತಾಳ ಅವರು ಮಾತನಾಡಿ ಎಲ್ಲರೂ ನಿರಂತರವಾಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ನಾವು ಅರೋಗ್ಯವನ್ನು ಕಾಪಾಡಿಕೊಳ್ಳಬೇಕು. ಸರಕಾರವು ಎಲ್ಲರಿಗೂ ಅರೋಗ್ಯದ ಸೌಲಭ್ಯಗಳನ್ನು ಕೊಡುತ್ತಿದೆ. ಇದನ್ನು ಉಪಯೋಗ ಮಾಡಕೊಳ್ಳಬೇಕು. ಎಲ್ಲರಲ್ಲೂ ೧೨-೧೫ ಹಿಂಗ್ಲೋಬಿನ್ ಇರಬೇಕು. ನಮಗೆ ಪೌಷ್ಟಿಕಾಂಶಗಳ ಕೊರತೆ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಯುವರೆಡ್ ಕ್ರಸ್ ಘಟಕದ ಸಂಚಾಲಕರಾದ ಡಾ ಪ್ರದೀಪ್ ಕುಮಾರ್ ಯು ಇವರು ಮಾತನಾಡುತ್ತಾ ನಮ್ಮ ಕಾಲೇಜಿನಲ್ಲಿ ಪ್ರತೀವರ್ಷ ವಿದ್ಯಾರ್ಥಿನೀಯರಿಗೆ ಹಿಮೋಗ್ಲೊಬಿನ್ ತಮಾಸಣಾ ಶಿಬಿರವನ್ನು ಆಯೋಜಿಸಲಾಗುತ್ತದೆ. ಮುಂದುವರೆದು ಅತ್ಯಂತ ಕಡಿಮೆ ಹಿಮೋಗ್ಲೊಬಿನ್ ಇರುವ ವಿದ್ಯಾರ್ಥಿನೀಯರಿಗೆ ಮೂರುತಿಂಗಳ ಫರೆಸ್ ಸಲ್ಫೇಟ್ ಮತ್ತು ಫೋಲಿಕ್ ಆಸಿಡ್ ಮಾತ್ರೆಗಳನ್ನು ನೀಡಿ ಮೂರು ತಿಂಗಳ ನಂತರ ಮತ್ತೊಮ್ಮೆ ಪರೀಕ್ಷೆ ಮಾಡಿ ಅವರ ಹಿಮೋಗ್ಲೊಬಿನ್ ಪ್ರಮಾಣವನ್ನು ಪರೀಕ್ಷಿಸಲಾಗುವುದು ಹಾಗೂ ಇಂದಿನ ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ವಿದ್ಯಾರ್ಥಿನಿಯರು ಹಾಗೂ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಯವರು ಪರೀಕ್ಷೆಗೆ ಒಳಪಡುವುದರ ಮೂಲಕ ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಪ್ರಯೋಗಾಲಯದ ತಂತ್ರಜ್ಞರಾದ ಶ್ರೀ ಸಂತೋಷ, ಆರೋಗ್ಯ ನಿರೀಷಣಾ ಅಧಿಕಾರಿಗಳಾದ ಉದಯ, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳಾದ ಶ್ರೀಮತಿ ಚೌಡಮ್ಮ, ಕಾಲೇಜಿನ ಸಹ-ಪ್ರಾದ್ಯಾಪಕರಾದ ಡಾ ಹುಲಿಗೆಮ್ಮ ಬಿ, ಸಹಾಯಕ ಪ್ರಾದ್ಯಾಪಕರಾದ ಡಾ.ನರಸಿಂಹ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಯುವರೆಡ್ ಕ್ರಸ್ ಘಟಕದ ಸಂಚಾಲಕರಾದ ಡಾ ಪ್ರದೀಪ್ ಕುಮಾರ್ ಯು ಇವರು ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್ಲೈನ್ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ