ಮಾತಿನಲ್ಲಿ ಹಠವಾ ಸಾಧಿಸದಿರು.
ಇಕ್ಕಟ್ಟಿಗೆ ಸಂಬಂಧಿಕರನ್ನ ಸಿಲುಕಿಸದಿರು.
ನಾನೇ ಎಂದು ನೀ ಮೆರೆಯದಿರು.
ಕಡುಕೋಪಕ್ಕೆ ನೀನು ಗುರಿಯಾಗದಿರು.!!೧!!
ಆಗಿ ಹೋಗಿರುವ ಹಳೆ ದಿನಗಳು.
ಮತ್ತೆ ಮೆಲುಕು ಹಾಕದ ಆ ಕ್ಷಣಗಳು.
ಬಿಟ್ಟಾಗ ಜೀವನದಲ್ಲಿ ಸಂತೋಷ ಉಲ್ಲಾಸವು.
ಕೊನೆಗಾಲದಲ್ಲಿ ನಮ್ಮವರೇ ಕೈ ಹಿಡಿಯುವರು.!!೨!!
ಸಂಬಂಧದಲ್ಲಿ ಒಂದು ಮಾತು ಬರುವುದು.
ಅದರಲ್ಲಿ ಅವರ ನೋವು ಅಡಗಿರುವುದು.
ಕ್ಷಣಾರ್ಧದಲ್ಲಿ ಅದು ಮಾಯವಾಗುವುದು.
ಕೊನೆಗೆ ನನ್ನಲ್ಲಿ ತಪ್ಪು ಎಂದು ಅರಿವಾಗುವುದು.!!೩!!
ಸಂಬಂಧಗಳಿಗೆ ಕೊಳ್ಳಿ ಇಡದಿರಿ.
ಒಂದೊಂದು ದಿನ ಅವರೇ ದಾರಿ.
ಜೊತೆ ಜೊತೆಯಲಿ ನೀವು ನಡೀತೀರಿ.
ಸಾಧನೆ ಶಿಖರಕ್ಕೆ ಕೈ ಜೋಡಿಸಿರಿ .!!೪!!
-ಚಂದ್ರಶೇಖರಚಾರ್ M,ಶಿಕ್ಷಕರು
ವಿಶ್ವಮಾನವ ಪ್ರೌಢಶಾಲೆ,ಚಿತ್ರದುರ್ಗ