ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಗುಡೂರ ಎಸ್ ಎನ್ ಗ್ರಾಮದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಗ್ರಾಮದ ದಳಪತಿ ಗೌಡರ ಮನೆಯಲ್ಲಿ ಏಳು-ಕೋಟೆ ಮಲ್ಯಯ್ಯನನ್ನು ಆರಾಧಿಸುತ್ತಾ ಏಳುಸುತ್ತಿನ ಕೋಟೆಯ ಪ್ರತೀಕವಾಗಿ ಏಳು ಸುತ್ತಿನ ಪಾದಾರ್ಪಣೆಯನ್ನು ಪ್ರದರ್ಶಿಸಿ ವಿವಿಧ ಆಯುಧಗಳ ಪೂಜೆ-ಪುನಸ್ಕಾರದೊಂದಿಗೆ ಬನ್ನಿ ಹಬ್ಬಕ್ಕೆ ಚಾಲನೆ ನೀಡಿದರು. ದುರ್ಗಾಮಾತೆಯು ದೃಷ್ಟ ರಾಕ್ಷಸನನ್ನು ಸಂಹರಿಸಲು ವಿವಿಧ ರೂಪ ತಾಳುತ್ತಿದ್ದಳು ಕೊನೆಗೆ ಮಹಿಷಾಸುರ ರಾಕ್ಷಸಸನ್ನು ಸಂಹರಿಸಿ ವಿಜಯ ಸಾಧಿಸಿದ ಹತ್ತನೇಯ ದಿನವನ್ನು ವಿಜಯ ದಶಮಿಯನ್ನಾಗಿ ಆಚರಿಸುತ್ತಿದ್ದೇವೆ ಎಂದು ಉಮೇಶ ಎಸ್ ದಳಪತಿ ಯವರು ಹಾಗೂ ಮುಖಂಡರು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಕಟ್ಟರ್ ಹಿಂದುತ್ವವಾದಿ ಸುದರ್ಶನ ವಿ ಹಿರೇಮಠ ರವರು ನಮ್ಮ ಗ್ರಾಮದಲ್ಲಿ ಹಿಂದೂ ಸಂಪ್ರದಾಯ ಮತ್ತು ಪುರಾತನ ಕಾಲದಿಂದ ದಳಪತಿ ಗೌಡರ ಮನೆಯಲ್ಲಿ ಬನ್ನಿ ಹಬ್ಬಕ್ಕೆ ಚಾಲನೆ ನೀಡಿ ಗ್ರಾಮ ದೇವರಿಗೆ ಅರ್ಪಿಸಿ ಗುರು-ಹಿರಿಯರು ಪರಸ್ಪರ ಬನ್ನಿ ವಿಮಯ ಮಾಡಿಕೊಳ್ಳುತ್ತಾ ಅರ್ಥಪೂರ್ಣವಾಗಿ ಆಚರಿಸುತ್ತಾ ಬಂರುತ್ತಿರುವುದು ಸಂತಸದ ನಾಡ ಹಬ್ಬವಾಗಿದೆ ಹಾಗೂ
ವಿಜಯ ದಶಮಿಯ ಪ್ರಯುಕ್ತ ಹಲವೆಡೆ ಬನ್ನಿ ಹಬ್ಬದ ವಿನಿಮಯ ಮತ್ತು ಮೈಸೂರು ದಸರಾ ಜೊತೆಗೆ ಜಂಬೂ ಸವಾರಿ ಮತ್ತು ಇತರೆ ಅರ್ಥಪೂರ್ಣ ಹಿಂದೂ ಕಾರ್ಯಕ್ರಮವನ್ನು ಮೂಡಿ ಬರುತ್ತಿರುವುದು ನೋಡಿ ನನಗೆ ಅತೀವ ಆನಂದ ಉಂಟಾಗುತ್ತಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಪೂಜ್ಯರಾದ ವೇ. ಮೂ. ನೀಲಕಂಠಯ್ಯ ಮಠ,ಮಹಾಂತಯ್ಯ ಎಸ್ ಮಠ,ಶರಣಗೌಡ ಶಿವರಾಯಗೌಡ ದಳಪತಿ,ರಾಜಶೇಖರ ಪೋ ಪಾಟೀಲ್,ಶಿವರಾಯ ಮಾಲಿ ಪಾಟೀಲ್,ಗುರುಗೌಡ ಮಾಲಿ ಪಾಟೀಲ್,ಗೊಲ್ಲಾಳಪ್ಪಗೌಡ ಮಂದೇವಾಲ,ಮಲ್ಲು ಪಾಟೀಲ್ ಪರಸುರಾಮ ಎನ್ ಪಾಟೀಲ್,ಭೀಮಣ್ಣ ಪೂಜಾರಿ ಹಾಗೂ ಗ್ರಾಮದ ಸಮಸ್ತ ಭಾಂದವರೆಲ್ಲರೂ ಭಾಗವಹಿಸಿದ್ದರು.
ವರದಿ: ಚಂದ್ರಶಾಗೌಡ ಮಾಲಿ ಪಾಟೀಲ್, ಜೇವರ್ಗಿ