ಕಲಬುರಗಿ:
ಕನ್ನಡ ನಾಡು ನುಡಿಯ ಊಳಿಸಿ ಬೆಳೆಸಲು ಎಲ್ಲರೂ ಶ್ರಮಿಸೋಣ, ಕನ್ನಡ ಭಾಷೆ ನಮ್ಮೆಲ್ಲರಿಗೂ ಅನ್ನದ ಭಾಷೆಯಾಗಿದೆ, ಸಕ್ಕರೆ4 ನಾಡು ಎಂಬ ಖ್ಯಾತಿ ಹೊಂದಿರುವ ಮಂಡ್ಯ ಜಿಲ್ಲೆಯಲ್ಲಿ ಜರುಗಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲಿ ಎಂದು ಕಮಲಾಪುರ ತಹಸಿಲ್ದಾರ್ ಮಹಮ್ಮದ್ ಮೋಹ ಸಿನ್ ಹಾರೈಸಿದರು.
ಶುಕ್ರವಾರ ಕಮಲಾಪುರ ತಾಲೂಕು ಆಡಳಿತ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಕಮಲಾಪುರ ವತಿಯಿಂದ ಹಮ್ಮಿಕೊಂಡ ಕನ್ನಡ ಜ್ಯೋತಿ ಹೊತ್ತ ರಥಯಾತ್ರೆಗೆ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದವರು ಕನ್ನಡ ಭಾಷೆ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ್ದು ಕನ್ನಡ ನಾಡು ತನ್ನದೇ ಆದ ವಿಶೇಷ ಪರಂಪರೆಯನ್ನು ಹೊಂದಿರುವಂಥದ್ದು. ಈ ನಾಡಿನ ಪರಂಪರೆಯನ್ನು ಬಿಂಬಿಸುವ ಕನ್ನಡ ಜ್ಯೋತಿ ರಥಯಾತ್ರೆಗೆ ಅದ್ದೂರಿ ಸ್ವಾಗತ ಕೋರಲು ಆಗಮಿಸಿದ ಎಲ್ಲರಿಗೂ ನಾನು ಚಿರಋಣಿ ಎಂದರು.
ತಾಲ್ಲೂಕಿನ ಕಗ್ಗನಮಡಿ ಕ್ರಾಸ್ ಬಳಿ ಕಲಬುರ್ಗಿ ಗ್ರೇಡ್ 2 ತಹಶೀಲ್ದಾರ ಗಂಗಾಧರ ಪಾಟೀಲ ಅವರು ಕಮಲಾಪುರ ತಹಶೀಲ್ದಾರ ಮಹಮದ್ ಮೋಹಸಿನ್ ಅವರಿಗೆ ರಥಯಾತ್ರೆ ಹಸ್ತಾಂತರಿಸಿದಾಗ ರಥಯಾತ್ರೆಗೆ ಹೂಮಾಲೆ ಹಾಕಿ ವಿವಿಧ ಜಯಘೋಶಗಳನ್ನು ಕೂಗಿ ಸ್ವಾಗತಿಸಲಾಯಿತು.
ತದನಂತರ ಸಿರಗಾಪುರ ಕ್ರಾಸ್ , ತಾಲೂಕಿನ ಮಹಾಗಂವ ಕ್ರಾಸ್ ಮತ್ತು ಕಮಲಾಪುರದ ಬಳಿ ವಿವಿಧ ಕನ್ನಡ ಗೀತೆಗಳಿಗೆ ಕನ್ನಡ ಪ್ರೇಮಿಗಳು ಕುಣಿದು ಕುಪ್ಪಳಿಸಿ ಜಯಾಘೋಷ್ ಕೂಗಿ ಮೆರವಣಿಗೆಗೆ ಕಳೆ ತಂದರು.
ಬಳಿಕ ಕಮಲಾಪುರ, ಮರಾಗುತ್ತಿ ಕ್ರಾಸ್, ಕಿಣ್ಣಿಸಡಕ್ ಗಡಿ ಬಳಿ ತೆರಳಿ ಹುಮನಾಬಾದ ತಹಶೀಲ್ದಾರ ಅಂಜುಮ್ ಟಾಬಸುಮ್ ಅವರಿಗೆ ರಥಯಾತ್ರೆ ಹಸ್ತಾಂತರಿಸಲಾಯಿತು.
ತಾಲ್ಲೂಕಿನ ಮಹಾಗಾಂವ ಕ್ರಾಸ್ ಮತ್ತು ಮತ್ತು ಕಮಲಾಪುರದಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ಮುಖಂಡ ರವಿ ಬಿರಾದರ್, ತಹಶೀಲ್ದಾರ ಮಹಮದ್ ಮೋ ಹಸಿನ್, ಕಸಾಪ ತಾಲ್ಲೂಕು ಅಧ್ಯಕ್ಷ ಸುರೇಶ ಲೆಂಗಟಿ ನೇತೃತ್ವದಲ್ಲಿ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಕರುನಾಡೇ ಕೈ ಬೀಸಿ ನೋಡೇ, ಜೀವ ಕನ್ನಡ , ಬಾಳು ಕನ್ನಡ ವಿವಿಧ ಗೀತೆಗಳಿಗೆ ಭರ್ಜರಿ ಸ್ಟೆಪ್ಸ್ ಹಾಕಿ ಮೆರವಣಿಗೆಗೆ ಶೋಭೆ ತಂದರು.
ಈ ಸಂದರ್ಭದಲ್ಲಿ ಮಹಾಗಾಂವ ಕಳ್ಳಿಮಠದ ಶ್ರೀ ವಿರೂಪಾಕ್ಷ ದೇವರು, ವೀರಶೈವ ಲಿಂಗಾಯತ ಮುಖಂಡ ರವಿ ಬಿರಾದರ್ ಕಮಲಾಪುರ ತಾಸಿಲ್ದಾರ್ ಮಹಮದ್ ಮೋಹಸಿನ್ ತಾಲೂಕು ಪಂಚಾಯಿತಿ ಓ ನೀಲಗಂಗಾ ಬಬಲಾದ್ , ಗ್ರೇಡ್ 2 ತಹಶೀಲ್ದಾರ ಶಿವಕುಮಾರ ಶಾಬಾ, ಕಮಲಾಪುರ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿ ಶಾಂತಪ್ಪ ಹಾದಿಮನಿ, ಕಮಲಾಪುರ್ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸುರೇಶ್ ಲೆಂಗಟಿ ,ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ಹಂಚಿನಾಳ,
ಸರಕಾರಿ ನೌಕರರ ತಾಲೂಕು ಅಧ್ಯಕ್ಷ ಮಿಟ್ಟೆಸಾಬ್ ಮುಲ್ಲಾ ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಪರಮೇಶ್ವರ ಓಕಳಿ, ಮಜರ ಅಲಿ ದರ್ಜಿ, ಮೆಹಬೂಬ್ ಸಾಬ್ ಮಾದಕ, ತಿಪ್ಪಣ್ಣ, ಸಂತೋಶ್ ರಾಂಪೂರ, ಜಯ ಕರ್ನಾಟಕ ಸಂಘಟನೆಯ ತಾಲುಕು ಅಧ್ಯಕ್ಷ ಆಕಾಶ ಜಾಲಳ್ಳಿ,
ನಟರಾಜ್ ಕಲ್ಯಾಣ, ಚನವೀರ್ ಹಿರೇಮಠ್, ಶರಣಬಸಪ್ಪ ಜಾಲಳ್ಳಿ, ರಘುನಂದನ್ ದ್ಯಾಮನಿ, ಮಂಜುನಾಥ ಬಿರಾದಾರ್, ಲಕ್ಷ್ಮೀಕಾಂತ್ ಶಿರೋಳ್ಳಿ, ಸುಹಾಸಿನಿ ಹಾಲು, ಜಯಪ್ರಕಾಶ್ ಹಣಕುನಿ, ಅಂದಪ್ಪ, ಅವಿನಾಶ್, ಭೀಮಶಾ,
ಸಿದ್ಧಲಿಂಗ ದಿಘಾವ, ಶಿವಪ್ಪ ಚಿಂಚೋಳಿ , ಶರಣಪ್ಪ ಗೊಬ್ಬುರ ವಾಡಿ, ಶರಣಪ್ಪಾ ನಾಟಿಕಾರ ಇತರರು ಇದ್ದರು.