ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್‌ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ

ದೇವಸ್ಥಾನ ಜೀರ್ಣೋದ್ಧಾರಕ್ಕೆ ಹಣ ಮಾಡುವಂತೆ ಒತ್ತಾಯ

ಬಿರುಕುಬಿಟ್ಟು ಶಿಥಿಲಾವಸ್ಥೆಗೆ ತಲುಪಿದ ರಾಮಲಿಂಗೇಶ್ವರ ತೀರ್ಥ ದೇವಸ್ಥಾನದ ಜೀರ್ಣೋದ್ಧಾರಕ್ಕೆ ತಾಲೂಕಿನ ಶಾಸಕರು 2 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಬೇಕು ಮಹೇಶ್ ಪಾಟೀಲ್ ಕಡಕೋಳ ಆಗ್ರಹ

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಪೌರಾಣಿಕ ಹಿನ್ನೆಲೆಯುಳ್ಳ ಶ್ರೀರಾಮಚಂದ್ರನು ವನವಾಸಕ್ಕೆ ತೆರಳುವಂತಹ ಸಂದರ್ಭದಲ್ಲಿ ಯಡ್ರಾಮಿ ತಾಲೂಕಿನ ಈ ಸ್ಥಳದಲ್ಲಿ ಬಂದು ಲಿಂಗವನ್ನು ಪ್ರತಿಷ್ಠಾಪನೆ ಮಾಡಿದರು ಅಲ್ಲದೆ ಮನಮೋಹಕ ಪ್ರೇಕ್ಷಣೀಯ ಕೊಳವನ್ನು ನಿರ್ಮಾಣ ಮಾಡಿ ಈ ಸ್ಥಳದಲ್ಲಿ ತಪಸ್ಸು ಮಾಡಿ ಮುಂದೆ ಶ್ರೀ ರಾಮಚಂದ್ರನು ವನವಾಸಕ್ಕೆ ಹೋದನೆಂದು ಪ್ರತೀತಿ ಇದೆ ಇಂತಹ ಪೌರಾಣಿಕ ಹಿನ್ನೆಲೆಯುಳ್ಳ ಹಾಗೂ ರಾಮ ತೀರ್ಥವು ಸಂಪೂರ್ಣ ಬಿರುಕು ಬಿಟ್ಟು ಶಿಥಿಲಾವಸ್ಥೆಗೆ ತಲುಪಿದೆ. ಇಂತಹ ಪುಣ್ಯಕ್ಷೇತ್ರವು ಸಾರ್ವಜನಿಕರ ಮಲವಿಸರ್ಜನೆಯ ಹಾಗೂ ಅನೈತಿಕ ತಾಣವಾಗಿದ್ದು ದುರ್ದೈವದ ಸಂಗತಿಯಾಗಿದೆ ಕೂಡಲೆ ಇದಕ್ಕೆ ಸಂಬಂಧಪಟ್ಟ ತಾಲೂಕಿನ ಶಾಸಕರು ಕೆಕೆಆರ್‌ಡಿಬಿ ಅಧ್ಯಕ್ಷರಾದ ಡಾ. ಅಜಯ್ ಸಿಂಗ್ ಅವರು ಯಡ್ರಾಮಿ ತಾಲೂಕಿನ ರಾಮ ತೀರ್ಥದ ಜೀರ್ಣೋದ್ಧಾರಕ್ಕೆ ಎರಡು ಕೋಟಿ ರೂಪಾಯಿ ಅನುದಾನ ಕೆಕೆಆರ್‌ಡಿಬಿ ಇಲಾಖೆಯಿಂದ ಮಂಜೂರು ಮಾಡಬೇಕು ಎಂದು ನಮ್ಮ ಕರ್ನಾಟಕ ಸೇನೆ ಯಡ್ರಾಮಿ ತಾಲೂಕ ಅಧ್ಯಕ್ಷರಾದ ಮಹೇಶ ಪಾಟೀಲ್ ಕಡಕೋಳ ತಿಳಿಸಿದ್ದಾರೆ. ಇಂತಹ ಪ್ರೇಕ್ಷಣೀಯ ಸ್ಥಳವನ್ನು ಪುನರ್ ನವೀಕರಣಗೊಳಿಸಿದರೆ ವಿಶ್ವದ ಪಾರಂಪರಿಕ ತಾಣಗಳಲ್ಲಿ ಯಡ್ರಾಮಿ ತಾಲೂಕಿನ ರಾಮ ತೀರ್ಥವು ಒಂದು ಪ್ರೇಕ್ಷಣೀಯ ಸ್ಥಳವಾಗುವುದರಲ್ಲಿ ಸಂದೇಹವೇ ಇಲ್ಲ. ಅದೇ ರೀತಿಯಾಗಿ ಯಡ್ರಾಮಿ ತಾಲೂಕಿನ ಎಡಭಾಗದಲ್ಲಿ ರಾಮ ಮಂದಿರ ಇರುವುದರಿಂದ ಎಡ ರಾಮ ಎನ್ನುವ ಹೆಸರು ಬಂದಿದೆ ಅದೇ ರೀತಿಯಾಗಿ ಜನರ ಆಡು ಭಾಷೆಯಲ್ಲಿ ಯಡ್ರಾಮಿ ಆಗಿ ಪರಿವರ್ತನೆಯಾಗಿದೆ ಅದೇ ರೀತಿಯಾಗಿ ಮುಂದಿನ ಯುವ ಪೀಳಿಗೆಯ ಸಲುವಾಗಿ ಇಂತಹ ಪ್ರೇಕ್ಷಣೀಯ ಸ್ಥಳಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವವಾಗಿದೆ ಅದೇ ರೀತಿಯಾಗಿ ಸರ್ಕಾರದ ಮೇಲೆ ಒತ್ತಡ ಹೇರುವುದು ಪ್ರತಿಯೊಬ್ಬರ ಹಕ್ಕಾಗಿದೆ ಆದ್ದರಿಂದ ಸರಕಾರಕ್ಕೆ ಪ್ರತಿಯೊಬ್ಬರು ಇಂತಹ ನಿರ್ಲಕ್ಷಕೊಳಕಾಗಿ ಹಾಳುಬಿದ್ದ ಪೌರಾಣಿಕ ಹಿನ್ನಲೆಯ ಸ್ಥಳಗಳನ್ನು ಸಂರಕ್ಷಿಸುವುದು ಸರಕಾರದ ಹಾಗೂ ಪ್ರತಿಯೊಬ್ಬ ಸಾರ್ವಜನಿಕರ ಕರ್ತವವಾಗಿದೆ ಆದ್ದರಿಂದ ರಾಮತೀರ್ಥದ ಉಳಿವಿಗಾಗಿ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಸರ್ಕಾರದ ಗಮನ ಸೆಳೆಯಲು ನಮ್ಮ ಕರ್ನಾಟಕ ಸೇನಾ ಕಾರ್ಯಕರ್ತರೊಂದಿಗೆ ಕಾಲ್ನಡಿಗೆಯ ಮುಖಾಂತರ ಯಡ್ರಾಮಿ ತಾಲೂಕಿನ ಹೋರಾಟದ ಹುಲಿ ಸರ್ದಾರ್ ಶರಣಗೌಡ ವೃತ್ತದಿಂದ ತಾಲೂಕ ದಂಡಾಧಿಕಾರಿಗಳ ಕಚೇರಿಯವರಿಗೆ ಬಾಜಿ ಭಜಂತ್ರಿಯ ಮೇಳದೊಂದಿಗೆ ದಂಡಾಧಿಕಾರಿಗಳ ಮುಖಾಂತರ ತಾಲೂಕಿನ ಕೆಕೆಆರ್‌ಡಿಬಿ ಅಧ್ಯಕ್ಷರಾದ ಶಾಸಕ ಡಾ ಅಜಯ್ ಸಿಂಗ್ ಅವರಿಗೆ ಮತ್ತು ರಾಜ್ಯದ ಮುಖ್ಯಮಂತ್ರಿಗಳಿಗೆ ರಾಮ ತೀರ್ಥದ ಉಳಿವಿಗಾಗಿ ಮನವಿ ಪತ್ರವನ್ನು ಅತಿ ಶೀಘ್ರದಲ್ಲಿ ಸಲ್ಲಿಸಲಿದ್ದೇವೆ ಎಂದು ನಮ್ಮ ಕರ್ನಾಟಕ ಸೇನಾ ತಾಲೂಕ ಅಧ್ಯಕ್ಷರಾದ ಮಹೇಶ್ ಪಾಟೀಲ್ ಕಡಕೋಳ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ