ಕಳವಳ ವ್ಯಕ್ತಪಡಿಸಿ ಕೇಳಿದಳು ಪ್ರೀತಿಗೆ
ಪಟ್ಟಣದ ಪ್ರಮುಖ ರಸ್ತೆಯಲ್ಲಿಯ ದಾರಿಗೆ
ಹಳ್ಳಿಯಲ್ಲಿ ಹುಟ್ಟಿದೆ ನಾ ಅಮೃತಗಳಿಗೆ
ನನ್ನವಳಗೆ ನಾ ಮನವರಿಕೆ ಮಾಡುವೆ ಹೇಗೆ
ಹೊಸ ನರನಾಡಿಗಳೆಲ್ಲಾ ಬಿಚ್ಚಿ ಹೇಳುವಂತೆ
ಷರತ್ತು ಸವಾಲು ಮೆಟ್ಟಿ ನಾ ನಿಲ್ಲುವಂತೆ
ಕಳಚಿದ ಹೃದಯಕ್ಕೆ ಹಂಬಲಿಸುವ ಮಾತಿನಂತೆ
ಘಮಘಮಿಸುವ ಹೊಳಪಿನ ಹೂ ಕಟ್ಟುವಂತೆ
ಕೌಂಟರ್ ಹತ್ತಿರ ಬಂದಳು ಬಡಬಡ
ಢನಢನ ಡನ್ ಅಂದಳು ಹಣ ನೋಡು
ಖಾಲಿ ಜೇಬಿನ ಜೀವನ ದೊಡ್ಡದು ನೋಡು
ಪಕ್ಕದಲ್ಲಿ ಕೂತ ಕುಮಾರಿ ಹೇಳುತ್ತಾ ನಗುತ್ತಾ
ಚಟಪಟದ ಜೀವನ ಶೈಲಿಯಲ್ಲಿ ಚರಿತ್ರೆಯಾಗಲ್ಲಿ
ಕಾಡುಮೇಡು ಊರಲ್ಲಿ ಪಣಕ್ಕಿಟ್ಟ ಫಲ ನಮ್ಮಲ್ಲಿ
ಕಷ್ಟದ ಸಹಿತವಾಗಿ ಜಾಣ್ಮೆಯಲ್ಲಿ ನೆಮ್ಮದಿಕಾಣಲ್ಲಿ
ತಿಳಿಯದು ಸುವಾಸನಿ ಮುಗ್ಧ ಹೃದಯದ ಬಡಿತದಲ್ಲಿ
-ಮಹಾಂತೇಶ ಖೈನೂರ,ಸಾ:ಯಾತನೂರ