ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಪೋಲಿಸ್ ಠಾಣೆ ವತಿಯಿಂದ ಕೊಟ್ಟೂರಿನ ಸಮಸ್ತ ಜನತೆಗೆ ತಿಳಿಯಪಡಿಸುವುದೇನೆಂದರೆ ಕೊಟ್ಟೂರಿನ ಕೆರೆ ತುಂಬಿ ಕೋಡಿ ಬಿದ್ದಿದ್ದು ಒಂದು ವಾರದ ಕೆಳಗೆ ಹೊಸಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಗೆ ಸೇರುವ ಕುಮತಿ ಗ್ರಾಮದ ಕೆರೆಯಲ್ಲಿ ಈ ಜಾಡಲು ಹೋಗಿ ಮೂರು ಜನರು ನೀರು ಹೆಚ್ಚಾಗಿರುವುದರಿಂದ ಮುಳುಗಿ ಸಾವನ್ನಪ್ಪಿರುತ್ತಾರೆ ಮತ್ತು ಗುಡೆಕೋಟಿ ಠಾಣಾ ವ್ಯಾಪ್ತಿಗೆ ಸೇರುವ ಗಂಡುಬೊಮ್ಮನಹಳ್ಳಿ ಕೆರೆ ಹತ್ತಿರ ಸೆಲ್ಫಿ ತೆಗೆಯಲು ಹೋದ ವ್ಯಕ್ತಿಯು ಕಾಲುಜಾರಿ ಬಿದ್ದು ಸಾವನಪ್ಪಿದ್ದು ಇವಾಗ ಕೊಟ್ಟೂರು ಕೆರೆ ತುಂಬಿದ್ದು ಕೊಟ್ಟೂರಿನ ಜನತೆ ಮತ್ತು ಪೋಷಕರು ತಮ್ಮ ಮಕ್ಕಳು ಕೆರೆಯ ಕಡೆ ಹೋಗದಂತೆ ಜಾಗೃತಿ ವಹಿಸಿ ನೋಡಿ ಕೊಳ್ಳ ತಕ್ಕದ್ದು ಎಂದು ಕೊಟ್ಟೂರು ಪೋಲಿಸ್ ಠಾಣೆ ಸಿಬ್ಬಂದಿ ಯವರು ಪತ್ರಿಕೆ ಪ್ರಕಟಣೆ ಮುಖಾಂತರ ಸಾರ್ವಜನಿಕರಲ್ಲಿ ಕಳಕಳಿಯ ಮನವಿ ಮಾಡಿಕೊಂಡಿದ್ದಾರೆ.
