ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಸಿರಾ ರಸ್ತೆ ನಾಗರಕಟ್ಟೆ ಬಳಿ ಬಸ್ ಗಾಗಿ ಕಾದು ಕುಳಿತಿದ್ದ ಓರ್ವ ವ್ಯಕ್ತಿಯ ಮೇಲೆ ದುರಸ್ತಿ ಕಾರ್ಯದ ವಾಣಿಜ್ಯ ಮಳಿಗೆಯ ದೊಡ್ಡ ಡಿಮ್ಮಿ ಕಳಚಿ ಬಿದ್ದು ಅದೃಷ್ಟವಸಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಿನ್ನೆ ಜರುಗಿದೆ.
ಚರಂಡಿ ನಿರ್ಮಾಣಕ್ಕಾಗಿ ವಾಣಿಜ್ಯ ಮಳಿಗೆ ಒತ್ತುವರಿ ತೆರವುಗೊಳಿಸಲು ಮಳಿಗೆಯ ಕೆಲ ಭಾಗ ದುರಸ್ತಿಕಾರ್ಯ ನಡೆಯುತ್ತಿದ್ದು ಸುಮಾರು ಆರು ತಿಂಗಳುಗಳಿಂದ ಕೆಲ ಕಾರಣಾಂತರಗಳಿಂದ ನೆನೆಗುದಿಗೆ ಬಿದ್ದಿದ್ದು ಸದರಿ ಸ್ಥಳದ ಮುಂಭಾಗದಲ್ಲಿ ಪ್ರತಿನಿತ್ಯ ಬಸ್ ಗಾಗಿ ಕಾಯುತ್ತಿರುವುದು ಸರ್ವೇ ಸಾಮಾನ್ಯವಾಗಿದ್ದು ಆದರೆ ಅದೃಷ್ಟವಶಾತ್ ನಿನ್ನೆ ಸಂಜೆ ನಾಲ್ಕು ಗಂಟೆ ಸಮಯದಲ್ಲಿ ವಾಣಿಜ್ಯ ಮಳಿಗೆಯ ಮೇಲ್ಚಾವಣಿಯ ದೊಡ್ಡ ಡಿಮ್ಮಿಗೆ ಆಧಾರ ಸ್ಥoಬವಿಲ್ಲದೆ ಏಕಾಏಕಿ ನೆಲಕ್ಕುರಿಳಿದೆ.ಇದರ ಮುಂಭಾಗ ಬಸ್ ಗಾಗಿ ಕಾದು ಕುಳಿತಿದ್ದ ಓರ್ವ ವ್ಯಕ್ತಿಯ ಮೇಲೆ ದೊಡ್ಡ ಡಿಮ್ಮಿ ನೆಲಕ್ಕುರುಳಿ ತಲೆಗೆ ಹಾಗೂ ಕೈ ಕಾಲುಗಳಿಗೆ ರಕ್ತ ಸ್ರಾವವಾಗಿ ಕೂಡಲೇ ಸ್ಥಳದಲ್ಲಿದ್ದ ಆಟೋ ಚಾಲಕರು 108 ಆಂಬುಲೆನ್ಸ್ ಗೆ ಕರೆ ಮಾಡಿ ಗಾಯಾಳು ವ್ಯಕ್ತಿಯನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದಿದ್ದಾರೆ.
ಸ್ಥಳೀಯ ನಾಗರಿಕರು ಈ ದುರಂತಕ್ಕೆ ವಾಣಿಜ್ಯ ಮಳಿಗೆಯ ಮಾಲೀಕನ ನಿರ್ಲಕ್ಷವೇ ಕಾರಣ ಎಂದು ತಿಳಿಸಿದ್ದಾರೆ.ಸೋಮವಾರ ಸಂತೆ ದಿನವಾಗಿದ್ದರೆ ಸಾಕಷ್ಟು ಜನ ಬಸ್ ಗಾಗಿ ಕಾದು ಕುಳಿತವರ ಸಾವು ನೋವು ಖಂಡಿತಾ ಸಂಭವಿಸುತ್ತಿತ್ತು ಭಗವಂತನ ಕೃಪೆಯಿಂದ ಈ ದುರಂತ ತಪ್ಪಿತೆಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ವರದಿ ಪಾವಗಡ.ಕೆ. ಮಾರುತಿ ಮುರಳಿ