ಕಾರವಾರ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜನರು ತಮ್ಮ ಹುಟ್ಟೂರಿಗೆ ಹೋಗಿ ಹಬ್ಬವನ್ನು ಆಚರಿಸಬೇಕೆಂಬ ಆಸೆಯನ್ನು ಇಟ್ಟುಕೊಂಡಿರುತ್ತಾರೆ ಆದರೆ ಬೆಂಗಳೂರಿನಿಂದ ಕಾರವಾರಕ್ಕೆ ಕೇವಲ ಎರಡು ರೈಲು ಇರುವುದರಿಂದ ಉತ್ತರಕನ್ನಡದ ಜನತೆಗೆ ಸಂಕಷ್ಟ ಉಂಟಾಗಿತ್ತು ಆದರೆ ಈಗ ಬೆಂಗಳೂರಿನಿಂದ ಕಾರವಾರಕ್ಕೆ ವಿಶೇಷ ರೈಲನ್ನು ಬಿಡುಗಡೆಗೊಳಿಸುವಂತೆ ನಮ್ಮ ಕೇಂದ್ರ ರೈಲ್ವೇ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಮತ್ತು ರೈಲ್ವೇ ಖಾತೆಯ ರಾಜ್ಯ ಸಚಿವರಾದ ಶ್ರೀ ವಿ.ಸೋಮಣ್ಣ ಅವರು ಮಾಡಿದ ಮನವಿಗೆ ನೈಋತ್ಯ ರೈಲ್ವೆಯ ಇಲಾಖೆಯು ಶೀಘ್ರವಾಗಿ ಸ್ಪಂದಿಸಿದೆ ಮತ್ತು ವಿಶೇಷ ರೈಲನ್ನು ಮಂಜೂರು ಮಾಡಿದೆ. ಈ ವಿಶೇಷ ರೈಲು ಸೌಲಭ್ಯ ವನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ವರದಿ – ಸಂದೇಶ ನಾಯ್ಕ