ರಾಯಚೂರು ಜಿಲ್ಲೆಯ ಸಿಂಧನೂರಿನ ಶಹರ ಪೋಲಿಸ್ ಠಾಣೆಯಲ್ಲಿ ಕಾರ್ಯನಿರ್ವಹಿಸಿಸುತ್ತಿರುವ ಶ್ರೀ ಸಂಗನಗೌಡ ಪಾಟೀಲ್ ಸಿಂಧನೂರು ಅವರು PSI ಪರೀಕ್ಷೆಯಲ್ಲಿ ಪಾಸಾಗಿರುವುದಕ್ಕೆ ವನಸಿರಿ ಫೌಂಡೇಶನ್ ತಂಡದ ಸದಸ್ಯರು ಶಹರ ಪೋಲಿಸ್ ಠಾಣೆಗೆ ಆಗಮಿಸಿ ಅಭಿನಂದಿಸಿ ಸನ್ಮಾನಿಸಿ ಗೌರವಿಸಿದರು.
ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ ಸನ್ಮಾನಿಸಿ ಮಾತನಾಡಿ ಸಿಂಧನೂರಿನ ಶಹರ ಪೋಲಿಸ್ ಠಾಣೆಯಲ್ಲಿ ರೈಟ್ ಪೋಲಿಸ್ ಆಗಿ ಕಾರ್ಯ ನಿರ್ವಹಿಸಿಸುತ್ತಿರುವ ಶ್ರೀ ಸಂಗನಗೌಡ ಪಾಟೀಲ್ ಸಿಂಧನೂರು ಅವರು ಕರ್ತವ್ಯದ ಜೊತೆ PSI ಆಗುವ ಛಲದೊಂದಿಗೆ ಕನಸನ್ನು ಕಟ್ಟಿಕೊಂಡು ಹಗಲಿರುಳೆನ್ನದೆ ವಿದ್ಯಬ್ಯಾಸ ಮಾಡುವ ಮೂಲಕ PSI ಪರೀಕ್ಷೆಯನ್ನು ಎದುರಿಸಿ ಇಂದು PSI ಆಗುವ ಕನಸನ್ನು ನನಸಾಗುವ ಮೂಲಕ PSI ಆಗಿ ನೇಮಕಗೊಳ್ಳುತ್ತಿರುವುದು ನಮಗೆಲ್ಲಾ ಸಂತೋಷದಾಯಕ ಸಂಗತಿಯಾಗಿದೆ.ಶ್ರೀ ಸಂಗನಗೌಡ ಪಾಟೀಲ ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಚೆನ್ನಾಗಿ ಪರಿಶ್ರಮ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಉನ್ನತ ಮಟ್ಟದಲ್ಲಿ ಬೆಳೆಯಲು ಮುಂದಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಿಂಧನೂರಿನ ಶಹರ ಪೊಲೀಸ್ ಠಾಣೆ PSI ಬಸವರಾಜ, ಕರ್ನಾಟಕ ಸರ್ಕಾರ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರಾದ ಅಮರೇಗೌಡ ಮಲ್ಲಾಪುರ, ಹಡಪದ ಸಮಾಜದ ಅಧ್ಯಕ್ಷರಾದ ಭೀಮಣ್ಣ ಬೆಳಗುರ್ಕಿ,ಗಿರಿ ಸ್ವಾಮಿ ಹೆಡಿಗಿನಾಳ,ವೆಂಕಟರೆಡ್ಡಿ ಹೆಡಿಗನಾಳ,ವೀರಭದ್ರಯ್ಯ ಸ್ವಾಮಿ ತಿಮ್ಮಾಪುರ,ರಾಜು ಪತ್ತಾರ ವನಸಿರಿ ಫೌಂಡೇಶನ್ ತಾಲೂಕು ಅಧ್ಯಕ್ಷ,ವನಸಿರಿ ಮುದಿಯಪ್ಪ ಹೊಸಳ್ಳಿ ಕ್ಯಾಂಪ್,ವನಸಿರಿ ಜಾಲತಾಣ ಅಧ್ಯಕ್ಷರಾದ ಚನ್ನಪ್ಪ ವಿಶ್ವಕರ್ಮ ಇದ್ದರು.