ವಿಜಯನಗರ/ಕೊಟ್ಟೂರು:
ಮಂಡ್ಯದಲ್ಲಿ 87ನೇ ಕನ್ನಡ ಸಾಹಿತ್ಯ ಸಮ್ಮೇಳನವು ಮಂಡದಲ್ಲಿ 2024ರ ಡಿಸೆಂಬರ್ 20,21 ಹಾಗೂ 22 ರಂದು ಜರುಗಲಿದ್ದು, ಸದರಿ ಸಮ್ಮೇಳನವು ವಿಶೇಷವಾಗಿ ಆಚರಿಸಲು ಕನ್ನಡದ ಜ್ಯೋತಿ ಹೊತ್ತ “ಕನ್ನಡ ರಥ” ವು ಕರ್ನಾಟಕದಾದ್ಯಂತ ಸಂಚರಿಸಲಿದೆ. ಈ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯಲ್ಲಿ ಸಂಚರಿಸುವ ರಥವು ಕೂಡ್ಲಿಗಿ ತಾಲೂಕಿನಿಂದ ದಿನಾಂಕ: 23.10.2024 ರಂದು ಬೆಳಿಗ್ಗೆ ಕೊಟ್ಟೂರಿಗೆ ಆಗಮಿಸಿದ್ದು, ಅಮರೇಶ್ ಜಿ ಕೆ ತಹಶೀಲ್ದಾರರು ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿಗೆ ಗೌರವ ಪೂರ್ವಕವಾಗಿ ಸ್ವಾಗತಿಸಿಕೊಂಡರು.
ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿಯ ಕ್ರಿಯಾಮೂರ್ತಿಗಳಾದ ಆರ್ ಎಂ ಪ್ರಕಾಶ್ ಸ್ವಾಮಿಗಳು ಪೂಜೆ ನೆರವೇರಿಸಿದರೆ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಬಿ ರೇಖಾ ರಮೇಶ್ ಇವರು ತಾಯಿ ಭುವನೇಶ್ವರಿಗೆ ಮಾಲಾರ್ಪಣೆ ಮಾಡುವ ಮೂಲಕ ರಥಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪಟ್ಟಣ ಉಪಾಧ್ಯಕ್ಷರಾದ ಸಿದ್ದಯ್ಯ, ಸದಸ್ಯರಾದ ಬಿ ರಾಮಣ್ಣ, ಕೆಂಗರಾಜ, ಕೊಟ್ರೇಶ್, ವೀಣಾ ವಿವೇಕಾನಂದ ಹಾಗೂ ಇತರರು, ಹೆಚ್ ವಿಜಯಕುಮಾರ್ ಎಡಿ ನರೇಗಾ, ನಿಂಗಪ್ಪ ಇಸಿಒ, ಬದ್ದಿಮರಿಸ್ವಾಮಿ ಜಿಲ್ಲಾ ಡಿಎಸ್ಎಸ್ ಮುಖಂಡರು, ದೇವರಮನಿ ಕೊಟ್ರೇಶ ಅಧ್ಯಕ್ಷರು ಕೊಟ್ಟೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಹಾಗೂ ಸದಸ್ಯರು, ಈರಣ್ಣ ಕಾರ್ಯದರ್ಶಿ ಎಪಿಎಂಸಿ , ವಿವಿಧ ಶಾಲಾ ಶಿಕ್ಷಕರು ಭಾಗವಹಿಸಿದ್ದರು.
ಶ್ರೀ ಗುರು ಕೊಟ್ಟೂರೇಶ್ವರ ಮಹಾದ್ವಾರದಿಂದ ಹೊರಟ ರಥವು ಉಜ್ಜಿನಿ ರಸ್ತೆಯ ಮೂಲಕ ಸಾಗಿ ಬಸ್ ನಿಲ್ದಾಣದ ಮುಖ್ಯರಸ್ತೆಯ ಮೂಲಕ ಹಡಗಲಿಗೆ ತೆರಳಿತು. ತಹಶೀಲ್ದಾರರು ಹಾಗೂ ತಾಲೂಕು ಪಂಚಾಯತಿಯ ವಿಜಯ ಕುಮಾರ್ ಇವರು ಕೊಟ್ಟೂರಿನ ಗಡಿಭಾಗವಾದ ಅಲಬೂರು ಗ್ರಾಮದವರೆಗೆ ಹೋಗಿ ಹಡಗಲಿಗೆ ಬೀಳ್ಕೊಟ್ಟರು. ಅಲಬೂರು ಗ್ರಾಮದಲ್ಲಿ ಗ್ರಾ ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಗ್ರಾಮದ ಮುಖಂಡರು ಭಾಗವಹಿಸಿ ಪೂಜೆ ಮಾಡಿ ಗೌರವ ಸಲ್ಲಿಸಿದರು. ಕಂದಾಯ ನಿರೀಕ್ಷಕರಾದ ಎಸ್ ಎಂ ಹಾಲಸ್ವಾಮಿ, ಡಿ ಶಿವಕುಮಾರ್, ಗ್ರಾಮ ಆಡಳಿತ ಅಧಿಕಾರಿ ಹರೀಶ್, ಮಂಗಳ ಮುದೇನೂರು, ಶಾರದಮ್ಮ ಇದ್ದರು. ಮಾರ್ಗ ಮಧ್ಯದಲ್ಲಿ ಆಗಮಿಸಿದ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ನೇಮಿರಾಜನಾಯ್ಕರವರು ಗೌರವ ಸಲ್ಲಿಸಿದರು.