ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಸಾರ್ವಜನಿಕ ಗ್ರಂಥಾಲಯ ವತಿಯಿಂದ
ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಪಟ್ಟಣದ ತುಂಗಭದ್ರಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿತ್ತು.
ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು ಯಾವ ರೀತಿ ಪರೀಕ್ಷೆಗೆ ತಯಾರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಂವಿಧಾನ , ಭೂಗೋಳ ಶಾಸ್ತ್ರ ಮತ್ತು ವಿಜ್ಞಾನ ವಿಷಯಗಳಲ್ಲಿ ಎದುರಿಸುವ ಬಗ್ಗೆ ಎಳೆ-ಎಳೆಯಾಗಿ ತಿಳಿಸಿದರು.
ಪ್ರಶ್ನೆಗಳಿಗೆ ಯೋಚಿಸದೆ ಉತ್ತರಿಸಬಾರದು ಯೋಚಿಸಿ ಉತ್ತರಿಸಬೇಕು ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು ಸದಾ ಗ್ರಂಥಾಲಯದಲ್ಲಿ ವ್ಯಾಸಂಗ ಮಾಡುವುದರ ಜೊತೆಗೆ ಸ್ನೇಹಿತರೊಂದಿಗೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಬೇಕು.
ಎಲ್ಲಾ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು ಪುಸ್ತಕ ಮತ್ತು ಪತ್ರಿಕೆಗಳನ್ನು ಓದುವ ಜೊತೆಗೆ ಕೆಲವು ಸುಲಭ ಮಾರ್ಗೋಪಾಯಗಳಿಂದ ಓದುವುದರಂದ ಪ್ರಥಮ ಬಾರಿಗೆ ಆಯ್ಕೆಯಾಗುತ್ತೀರಿ ಎಂದು ಉಪನ್ಯಾಸಕರಾದ ಶ್ರೀ ಆರ್ ಚಂದ್ರ ನಾಯ್ಕ ಉಪನ್ಯಾಸ ನೀಡಿದರು.
ಮನುಷ್ಯ ಹಲವಾರು ಪುಸ್ತಕಗಳನ್ನು ಪ್ರತಿನಿತ್ಯ ಓದುವುದರಿಂದ ಸದಾ ಚಟುವಟಿಕೆಯಿಂದ ಇದ್ದು ನೆಮ್ಮದಿಯ ಜೀವನವನ್ನು ಮಾಡಬಹುದೆಂದು ಶ್ರೀ ಅರವಿಂದ ಬಸಾಪುರ ಸಹಾಯಕ ಪ್ರಾಧ್ಯಾಪಕರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ಪ್ರತಿಯೊಂದು ಗ್ರಂಥಾಲಯಗಳಿಂದ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಎಲ್ಲಾ ವಿಷಯಗಳ ಬಗ್ಗೆ ಪ್ರತಿ ತಿಂಗಳ ಎರಡನೇ ಶನಿವಾರದಂದು ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ ನೀವೆಲ್ಲಾ ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಬಂದು ಸದಸ್ಯತ್ವ ಪಡೆದುಕೊಂಡು ನಿರಂತರ ವ್ಯಾಸಂಗ ಮಾಡುವುದರಿಂದ ಬಹಳ ಸುಲಭವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಜಯಗಳಿಸಬಹುದು ಎಂದು ಶಾಖಾ ಗ್ರಂಥಾಲಯ ಅಧಿಕಾರಿ ಮಲ್ಲಪ್ಪ ಗುಡ್ಲಾನೂರು ಪ್ರಾಸ್ತವಿಕವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ಉಪನ್ಯಾಸಕರಾದ ಶ್ರೀಮತಿ ಸುಧಾ ಶ್ರೀಮತಿ ರಂಜಿತಾ ಹಾಗೂ ಗ್ರಂಥಾಲಯ ಸಿಬ್ಬಂದಿ ಶ್ರೀನಿವಾಸ್ ಪತ್ತಾರ್ ಉಪಸ್ಥಿತರಿದ್ದರು.
ಸಿಂಧು ಪ್ರಾರ್ಥಿಸಿದರು,
ನಿಶ್ಚಿತ ಸ್ವಾಗತಿಸಿದರು,
ಷಾಹೀನ್ ತಾಜ್ ನಿರೂಪಿಸಿ, ಪಿ ಕ್ಷಮಾ ವಂದಿಸಿದರು.