ಮುಂಡಗೋಡ:ದಿನಾಂಕ 22-10-2024 ರಂದು ಮುಂಡಗೋಡ ವಲಯದ ಊಗ್ಗಿನಕೇರಿ ಗಸ್ತಿನ ಬಾಳೆ ಹಳ್ಳಿ ಅರಣ್ಯದಲ್ಲಿ ಒಂದು ಸಾಗುವಾನಿ ಮರವನ್ನು ಕಡಿದು , ಏಳು ತುಂಡುಗಳಾಗಿ ತಯಾರಿಸಿ ನಾಲ್ಕು ತುಂಡುಗಳನ್ನು ಉಗ್ಗಿನಕೇರಿ ಗ್ರಾಮದ ವೀರಭದ್ರಯ್ಯ ಚೆನ್ನಯ್ಯ ಹಿರೇಮಠ (ಪ್ರಾಯ 26) ಈತನ ಮನೆಯಲ್ಲಿ ದಾಸ್ತಾನು ಇಟ್ಟಿರುವುದನ್ನು ಪತ್ತೆ ಹಚ್ಚಿ, ಆರೋಪಿತನಾದ ವೀರಭದ್ರಯ್ಯ ಚೆನ್ನಯ್ಯ ಹಿರೇಮಠ್ ಈತನನ್ನು ಬಂಧಿಸಿ,ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ. ನಾಪತ್ತೆಯಾಗಿರುವ ಶಂಕ್ರಯ್ಯ ದೊಡ್ಡಯ್ಯ ಹಿರೇಮಠ್ ಉಗ್ಗಿನಕೇರಿ, ವಸಂತ ಕೊರವರ ಹಾಗೂ ಇನ್ನಿತರ ಆರೋಪಿಗಳ ಶೋಧ ಕಾರ್ಯ ಕೈಗೊಳ್ಳಲಾಗಿದೆ.ಜಪ್ತಿ ಮಾಡಲಾದ ಮಾಲಿನ ಅಂದಾಜು ಮೌಲ್ಯ 1,50,000 ಆಗಿರುತ್ತದೆ ಎಂದು ಅರಣ್ಯ ಇಲಾಖೆ ಮುಂಡಗೋಡದ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಾಚರಣೆಯನ್ನು ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿರುವ ಹರ್ಷಾಭಾನು, ಎಸಿಎಫ್ ರವಿ ಎಂ ಹುಲ್ಕೋಟಿ, ಇವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ವಾಗೀಶ ಬಿ ಜೇ ನೇತೃತ್ವದಲ್ಲಿ ಡಿಆರ್ ಎಫ್ಓ ಬಸವರಾಜ್ ಯಾದವಾಡ, ಶಂಕರ್ ಬಾಗೇವಾಡಿ,ಅರುಣ್ ಕಾಶಿ, ಗಸ್ತು ಅರಣ್ಯ ಪಾಲಕರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.