ಜಿಲ್ಲೆಗೊಂದು ವಿಶೇಷ ಪೊಲೀಸ್ ಠಾಣೆ ತೆರೆಯಲು ದೊಡ್ಡಿಂದುವಾಡಿ ಸಿದ್ದರಾಜು ಆಗ್ರಹ
ಚಾಮರಾಜನಗರ: ದಲಿತರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಹಾಗೂ ತ್ವರಿತ ನ್ಯಾಯಕ್ಕಾಗಿ ವಿಶೇಷ ಪೊಲೀಸ್ ಠಾಣೆಗಳನ್ನು ತೆರೆಯುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಮಿತಿ ವತಿಯಿಂದ ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಸಮಾಜ ಕಲ್ಯಾಣ ಸಚಿವರು,ನಡೆಸುವ ಸಚಿವ ಸಂಪುಟ ಸಭೆಯಲ್ಲಿ ದಲಿತರ ಮೇಲಿನ ದೌರ್ಜನ್ಯ ನಿಯಂತ್ರಣ ಮತ್ತು ತ್ವರಿತ ತನಿಖೆ ಹಾಗೂ ನ್ಯಾಯಕ್ಕಾಗಿ ಜಿಲ್ಲೆಗೊಂದು ಹೊಸ ಪೊಲೀಸ್ ಠಾಣೆ ತೆರೆಯಲು ಕಡತ ಮಂಡಿಸಿ ಅನುಮೋದನೆ ಕೊಡಿಸಿ ತ್ವರಿತವಾಗಿ ಪ್ರತ್ಯೇಕ ಪೋಲೀಸ್ ಠಾಣೆಗಳನ್ನು ತೆರೆಯಬೇಕು.
ಮ್ಯಾನೇಜ್ ಮೆಂಟ್ ಕೋಟಾದಲ್ಲಿ ಓದುವ ಹಾಗೂ ಇತರೇ ತರಭೇತಿ ಪಡೆಯುತ್ತಿರುವ ಎಸ್.ಸಿ./ಎಸ್.ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಹಾಸ್ಟೇಲ್ ಸೌಲಭ್ಯವನ್ನು ಈಗಾಗಲೇ ರದ್ದುಗೊಳಿಸಲಾಗಿದ್ದು, ಇದನ್ನು ಹಿಂಪಡೆದು ವಿದ್ಯಾರ್ಥಿವೇತನ ಹಾಗೂ ಇತರೆ ತರಬೇತಿ ಪಡೆಯುತ್ತಿರುವ ಮಕ್ಕಳಿಗೆ ಸರ್ಕಾರದಿಂದ ಎಲ್ಲಾ ಸೌಲಭ್ಯವನ್ನು ಕಲ್ಪಿಸಿ ಕೊಡಬೇಕು.
ಚುನಾವಣೆಯಲ್ಲಿ ಭರವಸೆ ನೀಡಿದ್ದಂತೆ ಸಾವಿರಾರು ಬ್ಯಾಕ್‌ಲ್ಯಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು ಎಸ್.ಸಿ./ಎಸ್.ಟಿ ಗಳಿಗೆ ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಗೊಳಿಸಬೇಕು.
ಕಾಂತರಾಜು ಆಯೋಗದ ವರದಿಯಂತೆ ಒಳ ಮೀಸಲಾತಿ ಹಾಗೂ ಜಾತಿ ಜನಗಣತೆಯ ಜಾರಿ ಮಾಡಬೇಕು.ಎಸ್ ಸಿಪಿ,ಟಿಎಸ್ ಪಿ ಅನುದಾನ ಅನ್ಯ ಉದ್ದೇಶಕ್ಕೆ ಬಳಸದಂತೆ 7C ಕಾಯಿದೆಯನ್ನು ರದ್ದುಗೊಳಿಸುವುದು, ಎಸ್ ಸಿಪಿ, ಟಿಎಸ್ ಪಿ ಫಲಾನುಭವಿಗಳ ಯೋಜನೆಯಲ್ಲಿ ಫಲಾನುಭವಿಗಳನ್ನು ರೂಪಿಸುವಾಗ ಪ್ರತಿ ಸಲ 50 ಆಧಾರಿತ ಯೋಜನೆ ರೂಪಿಸುವುದು.
ಎಸ್.ಸಿ./ಎಸ್.ಟಿ ಮಕ್ಕಳುಗಳು ಖಾಸಗಿ ಶಾಲಾ ಕಾಲೇಜುಗಳು ಹಾಗೂ ವಿವಿಧ ತರಬೇತಿಗಳಲ್ಲಿ ಪ್ರವೇಶ ಪಡೆಯುವಾಗ ಪೂರ್ಣ ಶುಲ್ಕವನ್ನು ಸರ್ಕಾರವೇ ಪಾವತಿಸಬೇಕು ಎಂದು ಸಚಿವರಿಗೆ ಸಲ್ಲಿಸಿರುವ ಮನವಿಯಲ್ಲಿ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಕೆ.ವೀರು,
ಜಿಲ್ಲಾ ಸಂಘಟನಾ ಸಂಚಾಲಕರಾದ ಹಿಂಡಯ್ಯ, ಮಹದೇವಸ್ವಾಮಿ ಉಮ್ಮತ್ತೂರು, ನಾಗಣ್ಣ ಹನೂರು, ಕುಮಾರ್, ಉಪ ಸಂಚಾಲಕ ನಂಜುಡಯ್ಯ, ಹನೂರು ತಾಲೂಕು ಸಂಚಾಲಕ ಮಾದೇಶ್,ಯಳಂದೂರು ತಾಲೂಕು ಸಂಚಾಲಕ ರಾಚಪ್ಪ, ಗುಂಡ್ಲುಪೇಟೆ ತಾಲೂಕು ಸಂಚಾಲಕ ಶಿವಣ್ಣ, ದೊಡ್ಡಯ್ಯ, ರವಿಕುಮಾರ್, ಬಸವರಾಜು, ಮುರುಗೇಶ್, ಮಾದಯ್ಯ, ನಂಜೇಶ್ ಹಾಜರಿದ್ದರು.
ವರದಿ ಉಸ್ಮಾನ್ ಖಾನ್