ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದ ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 246 ನೇ ಕಿತ್ತೂರ ರಾಣಿ ಚೆನ್ನಮ್ಮ ಜಯಂತಿಯನ್ನು ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಪಂಚಮಸಾಲಿ ಉಪಾಧ್ಯಕ್ಷರಾದ ಶ್ರೀ ಈರಣ್ಣ ಡಂಗಿ ಇವರು ಮಾತನಾಡಿ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕಿತ್ತೂರ ರಾಣಿ ಚೆನ್ನಮ್ಮ ಅವರದು ದೊಡ್ಡ ಹೆಸರು ಇದೆ ಎಂದು ಹೇಳಿದರು.
ಶಾಲೆಯ ಶಿಕ್ಷಕರಾದ ಶ್ರೀ ಮಂಜುನಾಥ್ ಹಿರೇಮಠ್ ಅವರು ಪ್ರಾಸ್ತಾವಿಕ ಭಾಷಣದಲ್ಲಿ ಮಹಿಳೆಯರು ಯುದ್ಧ ಮಾಡಿ ಗೆಲ್ಲಬಲ್ಲರು ಎಂಬುವುದನ್ನು ರಾಣಿ ಚೆನ್ನಮ್ಮ ತೋರಿಸಿಕೊಟ್ಟಿದ್ದಾರೆ, ದತ್ತು ಮಕ್ಕಳಿಗೆ ಹಕ್ಕು ಇಲ್ಲ ಅನ್ನೋ ಕಾಯ್ದೆ ವಿರುದ್ಧ ಹೋರಾಟ ಮಾಡಿದ್ದಾರೆ. ನಾವು ರಾಣಿ ಚೆನ್ನಮ್ಮನಂತಹ ಹೋರಾಟಗಾರರ ತ್ಯಾಗವನ್ನು ಸ್ಮರಿಸಬೇಕು ಅವರ ಆದರ್ಶಗಳನ್ನು ಪಾಲಿಸಬೇಕು, ಅವರ ಹೋರಾಟವನ್ನು ಗೌರವಿಸಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಮಲ್ಲಿಕಾರ್ಜುನ್ ಉಮರಾಣಿ ಹಾಗೂ ಶಾಲೆಯ ಸಿಬ್ಬಂದಿ ವರ್ಗ ಮತ್ತು ವಿಜಯಪುರ ಜಿಲ್ಲೆಯ ಜಿಲ್ಲಾ ಪಂಚಮಸಾಲಿ ಉಪಾಧ್ಯಕ್ಷರಾದ ಶ್ರೀ ಈರಣ್ಣ ಡಂಗಿ, ಗ್ರಾಮ ಪಂಚಾಯತಿಯ ಸದಸ್ಯರಾದ ಕಾಶಿನಾಥ್ ಮಾನೆ, ಶ್ರೀ ಚಂದು ಬಡಿಗೇರ್, ಶ್ರೀ ತುಕಾರಾಂ ತಾಂಬೆ, ಹಾಗೂ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ-ಮನೋಜ್ ನಿಂಬಾಳ