ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಒಕ್ಕೂಟ ಪದಾಧಿಕಾರಿಗಳ ಸಮಾವೇಶವನ್ನು ನಿನ್ನೆ ದಿನಾಂಕ 23-10-2024 ರಂದು ಧರ್ಮಸಿಂಗ್ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದರು.
ಈ ಸಭೆಯಲ್ಲಿ ಉಪಸ್ಥಿತರಾದ ಕಾಂಗ್ರೆಸ್ ಮುಖಂಡರು ಹಾಗೂ ವೀರಶೈವ ಲಿಂಗಾಯತ ಕಾರ್ಯಕಾರಿ ಕಾರ್ಯ ನಿರ್ವಾಹಕರಾದ ಶ್ರೀ ಯುತ ರಾಜಶೇಖರ್ ಸಾಹು ಸಿರಿ ಅವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಅಮರೇಶ್ ಬಿ ಲಿಂಗಸೂರ ಧರ್ಮಸ್ಥಳದ ಯೋಜನೆ ಬಗ್ಗೆ ಯೋಜನೆಯ ಕೈಗೊಳ್ಳುವ ಪ್ರತಿಯೊಂದು ಸಾರ್ವಜನಿಕ ಕಾರ್ಯಕ್ರಮಗಳ ಬಗ್ಗೆ ಪದಾಧಿಕಾರಿಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಬ್ಯಾಂಕ್ ಆಫ್ ಬರೋಡ ಬ್ಯಾಂಕಿನ ಶಾಖಾ ಪ್ರಬಂಧಕರಾದ ಶ್ರೀಯುತ ಕಿರಣ್ ಬಂದರ್ ರವರು ಬ್ಯಾಂಕಿನ ನಿಯಮಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದರು.
ಹಾಗೂ ಜಿಲ್ಲೆಯ ಗೌರವಾನ್ವಿತ ಮಾನ್ಯ ಜಿಲ್ಲಾ ನಿರ್ದೇಶಕರು ಯೋಜನೆಯ ನಿಯಮಾವಳಿಗಳು ಸಂಘಕ್ಕೆ ಬೇಕಾದ ಸದಸ್ಯರಿಗೆ ಬೇಕಾದ ಪ್ರಾಥಮಿಕವಾದ ಮಾಹಿತಿ ಬಗ್ಗೆ ದಾಖಲಾತಿಗಳ ಬಗ್ಗೆ ಹಾಗೂ ಯೋಜನೆ ನಡೆದು ಬಂದ ದಾರಿ ಕಿರುಚಿತ್ರದ ವಿಸ್ತರಣೆ, ಯೋಜನೆ ಕೈಗೊಳ್ಳುವ ಸಾಮಾಜಿಕ ಅಭಿವೃದ್ಧಿ ಕೆಲಸಗಳ ಬಗ್ಗೆ ಹಾಗೂ ಪದಾಧಿಕಾರಿಗಳ ಜವಾಬ್ದಾರಿಗಳ ಬಗ್ಗೆ ಪ್ರತಿಯೊಬ್ಬ ಪದಾಧಿಕಾರಿಗಳಿಗೂ ಮನಮುಟ್ಟುವಂತೆ ಮಾಹಿತಿಯನ್ನು ಮಾನ್ಯರು ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಪದಾಧಿಕಾರಿಗಳು ಹಾಗೂ ಎಲ್ಲಾ ವಲಯಗಳ ಮೇಲ್ವಿಚಾರಕರು ಸೇವಾ ಪ್ರತಿನಿಧಿಗಳು, ಸಿಎಸ್ ಸಿ ಸೇವಾದಾರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವರದಿ: ಚಂದ್ರಶೇಖರ ಪಾಟೀಲ್ ಜೇವರ್ಗಿ



















