ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹೂಗ್ಯಂ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಿನ್ಯತ್ ಡ್ಯಾಂ ಜಲಾಶಯ ಭರ್ತಿ ಆದ ಹಿನ್ನೆಲೆ ಕಾರ್ಯಕರ್ತರು, ಮುಖಂಡರ ಜೊತೆ ಸ್ಥಳೀಯ ಶಾಸಕ ಎಂ.ಆರ್ ಮಂಜುನಾಥ್ ಅವರು ಜಲಾಶಯಕ್ಕೆ ಭೇಟಿ ನೀಡಿ ಭಾಗಿನ ಅರ್ಪಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು ಕ್ಷೇತ್ರದಲ್ಲಿ ಉತ್ತಮ ಮಳೆ ಆಗುತ್ತಿದೆ ಮಿನ್ಯತ್ ಡ್ಯಾಂ ಸೇರಿದಂತೆ ಎಲ್ಲಾ ಜಲಾಶಯಗಳು ಭರ್ತಿಗೊಂಡಿರುವುದು ಒಳ್ಳೆಯ ವಿಚಾರ ಸಕಲ ಜೀವರಾಶಿಗಳಿಗೂ ಅತ್ಯಂತ ಅವಶ್ಯಕತೆ ಇರುವ ನೀರನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯ.
ಮುಂದಿನ ದಿನಗಳಲ್ಲಿ ನಮ್ಮ ರೈತರಿಗೆ ಉತ್ತಮ ಮಳೆಯಾಗಿ ಸುಬಿಕ್ಷವಾಗಿ ಬೆಳೆ ಆಗಲಿ ಎಂಬ ಉದ್ದೇಶ ದಿಂದ ಇಂದು ದೇವರ ನೆನೆದು ಜಲಾಶಯಕ್ಕೆ ಬಾಗಿನ ಅರ್ಪಿಸುತ್ತಿರುವುದು ತುಂಬಾ ಸಂತಸದ ವಿಷಯವಾಗಿದೆ.
ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಲಿ ಎಂಬುದು ನಮ್ಮ ಆಶಯ ಸಂಗ್ರಹವಾದ ನೀರನ್ನು ರೈತರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಕಾಲುವೆಗಳ ಹೂಳು ತೆಗೆಸಿ ರೈತರಿಗೆ ನೀರಿನ ಸಮಸ್ಯೆ ಉಲ್ಬಣ ಆಗದ ರೀತಿಯಲ್ಲಿ ಕಾರ್ಯಕ್ರಮ ರೂಪಿಸುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆ ಎಇ ಪ್ರತಾಪ್, ಇಓ ಉಮೇಶ್, ಪಿಡಿಓ ಪುಷ್ಪಲತಾ, ಗ್ರಾ.ಪಂ ಸದಸ್ಯರಾದ ಪಳನಿಸ್ವಾಮಿ ಶಿವಣ್ಣ ಮಾದೇಶ್ ಮುಖಂಡರಾದ ಹೆಚ್ ಡಿಪಿ ಪಳನಿಸ್ವಾಮಿ ,ಹನೂರು ರಾಜೂಗೌಡ ,ಮುರುಗೇಶ್, ಸಿದ್ದರಾಜು ,ಮುನಿಯಪ್ಪ ಯರಂಬಾಡಿ ಮಹೇಶ್, ಚಿನ್ನ ವೆಂಕಟ ,ಎಸ್.ಆರ್ ಮಹಾದೇವ್ ,ಉದ್ದನೂರು ಗಿರಿ, ಪ್ರಮೋದ್, ಶ್ರೀರಂಗಂ ವೆಂಕಟೇಶ್, ಶಿವು ,ರವಿ ನಾಗರಾಜ್, ತಂಗವೇಳು, ಜಪಮಾಲೆ ಸೀನಾ ಬಾಲಯ್ಯ ಮಾರ್ಟಳ್ಳಿ ಮಣಿ ,ಜೆಸೀಮ್ ಪಾಷ ಜವಾದ್, ಬಶರತ್ ರಾಜೇಂದ್ರ ಅರುಳ್ ಸ್ವಾಮಿ, ಮಹದೇವ,ರಾಮು,ಸುಸೈರಾಜ್ ಮಹಾದೇವ ಹಾಗೂ ಇನ್ನಿತರರು ಇದ್ದರು.
ವರದಿ :ಉಸ್ಮಾನ್ ಖಾನ್