ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೈ ಎನ್ ಹೊಸಕೋಟೆ ಹೋಬಳಿಯ ನಾಡ ಕಛೇರಿ ಕಾರ್ಯಾಲಯಕ್ಕೆ ಪ್ರತಿ ದಿನ ನೂರಾರು ಜನ ಬೇಟಿ ನೀಡುತ್ತಾರೆ ಇಲ್ಲಿ ಜನರ ಕೆಲಸಕ್ಕೆ ಯಾವುದೇ ತೊಂದರೆ ಇಲ್ಲದಂತೆ ಇಲ್ಲಿನ ಸಿಬ್ಬಂದಿ ಮಾಡಿಕೊಡುತ್ತಿದ್ದಾರೆ ಆದರೆ ಮಳೆಗಾಲದಲ್ಲಿ ಇಲ್ಲಿ ಜನ ನಿಲ್ಲಲು ಅಥವಾ ಕೂರಲು ಸಹ ಅಗುವುದಿಲ್ಲ ಕನಿಷ್ಟ ಪಕ್ಷ ಜನ ಕಛೇರಿ ಬಳಿ ಸಲೀಸಾಗಿ ಹೋಗುವುದಕ್ಕೆ ಕೂಡಾ ಆಗದೆ ವಿಧಿ ಇಲ್ಲದೆ ಕೆಸರಿನಲ್ಲಿಯೇ ಹೋಗಿ ಕೆಲಸವನ್ನು ಮಾಡಿಸಿಕೊಳ್ಳುತ್ತಿದ್ದಾರೆ ಕಾರಣವೇನೆಂದರೆ
ಮಳೆಗಾಲದಲ್ಲಿ ಇಲ್ಲಿ ಸಾಧಾರಣ ಮಳೆಯಾದರೂ ಊರಿನೊಳಗಿನಿಂದ ಬರುವ ಚರಂಡಿ ನೀರು ಮತ್ತು ಮಳೆ ನೀರು ಎಲ್ಲಾ ಸೇರಿ ತಗ್ಗಿನಲ್ಲಿ ಇರುವ ನಾಡ ಕಛೇರಿ ಕಾರ್ಯಾಲಯಕ್ಕೆ ನುಗ್ಗಿ ಕಛೇರಿ ಮುಂದೆ ನಿಲ್ಲುತ್ತದೆ ಈ ನೀರು ಬೇರೆ ಪಕ್ಕದಲ್ಲಿ ಹಳ್ಳಕ್ಕೆ ಹೋಗುವಂತೆ ಮಾಡಲು ಅವಕಾಶ ಇದ್ದರೂ ಸಹ ಅಧಿಕಾರಿಗಳು ನೋಡಿಯೂ ನೋಡದಂತೆ ಹೋಗುತ್ತಿದ್ದಾರೆ
ವಿಪರ್ಯಾಸವೆಂದರೆ ಇಲ್ಲಿಗೆ ಸ್ಥಳೀಯ ಜನಪ್ರತಿನಿಧಿಗಳು ಸಹ ಯಾವಾಗಲೂ ಭೇಟಿ ಕೊಡುತ್ತಿರುತ್ತಾರೆ ಆದರೆ ಇಲ್ಲಿನ ಸಮಸ್ಯೆ ಬಗ್ಗೆ ತಲೆ ಕೆಡಿಸಿಕೊಳ್ಳದೆ ನೋಡಿಯೂ ನೋಡದಂತೆ ಹೋಗುತ್ತಿದ್ದಾರೆ ಇದಕ್ಕೆ ಆದಷ್ಟು ಬೇಗ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಗಮನ ಹರಿಸಿ ಸಾರ್ವಜನಿಕರಿಗೆ ಅನೂಕೂಲ ಮಾಡಿಕೊಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.
ವರದಿ:ಪೃಥ್ವಿರಾಜ್.ಜಿ ವಿ