ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ ವಾಸವಾಗಿದ್ದ ಮುದ್ದರಾಜು ಮತ್ತು ಸಿದ್ದಗಂಗಮ್ಮ ಎಂಬ ದಂಪತಿಗಳ ಮನೆಯು ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದ ಮನೆಯ ಮಾಳಿಗೆ (ಮೇಲ್ಚಾವಣಿ) ಕುಸಿದು ಬಿದ್ದಿದ್ದರಿಂದ ದಂಪತಿಗಳಿಗೆ ವಾಸ ಮಾಡಲು ಮನೆ ಇಲ್ಲದಂತಾಗಿದೆ ಕೊರಟಗೆರೆ ಪಟ್ಟಣದಲ್ಲಿ ದೋಬಿ ಕೆಲಸ ಹಾಗೂ ಬಟ್ಟೆಯ ಇಸ್ತ್ರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ದಂಪತಿಗಳಿಗೆ ಇತ್ತೀಚೆಗೆ ಬಿದ್ದ ಬಾರಿ ಮಳೆಯಿಂದ ವಾಸ ಮಾಡುತ್ತಿದ್ದ ಮನೆಯ ಮೇಲ್ಚಾವಣಿ ಅಥವಾ ಮಾಳಿಗೆಯು ಕುಸಿದು ಬಿದ್ದಿದ್ದರಿಂದ ಈ ದಂಪತಿಗಳಿಗೆ ವಾಸ ಮಾಡಲು ಬೇರೆ ಆಶ್ರಯ ವಸತಿ ಇಲ್ಲದಿರುವುದರಿಂದ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ ಅಧಿಕಾರಿಗಳ ಸಹಾಯ ಹಸ್ತಕ್ಕಾಗಿ ಕಾಯುತ್ತಿದ್ದಾರೆ ಅಧಿಕಾರಿಗಳು ಇವರ ಕಡೆ ಗಮನ ಸಹ ಕೊಟ್ಟಿಲ್ಲ. ದಯವಿಟ್ಟು ಕೊರಟಗೆರೆ ಪಟ್ಟಣ ಪಂಚಾಯತಿಯ ವ್ಯಾಪ್ತಿಗೆ ಬರುವ ಅಧಿಕಾರಿಗಳು ಪರಿಶೀಲನೆ ಮಾಡಿ ಸಹಾಯ ಮಾಡಬೇಕಾಗಿದೆ ಎಂದು ಅಧಿಕಾರಿಗಳನ್ನು ಬೇಡಿಕೊಳ್ಳುತ್ತಿದ್ದಾರೆ.
ವರದಿ ಕೊಟ್ಟ ಕರಿಯಣ್ಣ