ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹೂಗ್ಯಂ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಿನ್ಯತ್ ಡ್ಯಾಂ ವ್ಯಾಪ್ತಿಯಲ್ಲಿ ಬರುವ ಕಾಲುವೆಗಳ ಹೂಳು ತೆಗೆಯುವ ಕಾಮಗಾರಿ ಸ್ಥಳಕ್ಕೆ ಶಾಸಕ ಎಂ.ಆರ್. ಮಂಜುನಾಥ್ ದಿಢೀರ್ ಭೇಟಿ ಪರಿಶೀಲನೆ ನಡೆಸಿ ನಂತರ ಮಾತನಾಡಿದ ಶಾಸಕರು ಮಿನ್ಯತ್ ಡ್ಯಾಂ ವ್ಯಾಪ್ತಿಯಲ್ಲಿ ಬರುವ ನಾಲೆಗಳಲ್ಲಿ ಕಸ ಕಡ್ಡಿ ಮಣ್ಣು ಇನ್ನಿತರ ತ್ಯಾಜ್ಯಗಳು ಕೊಂಡಿರುವುದರಿಂದ ಜಲಾಶಯದಿಂದ ಹರಿಸುವ ನೀರು ರೈತರಿಗೆ ಜಮೀನುಗಳಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಇದರಿಂದ ಜಲಾಶಯದಲ್ಲಿ ನೀರಿದ್ದರೂ ಅದನ್ನು ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಜಲಾಶಯದ ನೀರು ಎಲ್ಲಾ ರೈತರಿಗೆ ದೊರೆತಾಗ ಫಸಲಿಗೆ ಅನುಕೂಲ ಆಗುತ್ತದೆ. ಆದ್ದರಿಂದ ರೈತರು ಸದೃಢರಾಗಲು ಸಮರ್ಥರಾಗುತ್ತಾರೆ. ಇದರಿಂದ ಸಮಾನತೆ ದೊರೆಯುವುದಲ್ಲದೆ ತಾರತಮ್ಯ ಇನ್ನಿತರ ವೈಮನಸ್ಸುಗಳು ದೂರವಾಗುತ್ತದೆ. ಇದನ್ನು ಸರಿಪಡಿಸಲು ಅಭಿವೃದ್ದಿ ಮಾಡಲು ನರೇಗಾ ಯೋಜನೆಯಡಿ ಸಾಕಷ್ಟ ಹಣ ಬಳಕೆ ಮಾಡಲು ಅವಕಾಶ ಇರುತ್ತದೆ. ಆದ್ದರಿಂದ ಅಧಿಕಾರಿಗಳು ನರೇಗಾದಡಿ ಕಾಲುವೆ ಅಭಿವೃದ್ಧಿಪಡಿಸಲು ಕ್ರಮ ವಹಿಸುವ ಮೂಲಕ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಉದ್ಯೋಗ ಕಲ್ಪಿಸಿದಂತೆ ಆಗುತ್ತದೆ ಎಂದರು.
ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ನಿರ್ವಹಿಸುವ ಕೆಲಸಗಳು ರೈತಾಪಿ ವರ್ಗದ ಜನರಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ತಾವು ಸಹ ರೈತರ ಮಕ್ಕಳಾಗಿದ್ದು ರೈತರಿಗೆ ಅನುಕೂಲ ಕಲ್ಪಿಸಿ ಸಹಕಾರ ನೀಡುವ ನಿಟ್ಟಿನಲ್ಲಿ ಗ್ರಾಮಾಭಿವೃದ್ದಿ ಪೂರಕ ಸಹಕಾರ ನೀಡಬೇಕು ಎಂದರು.
ಇದೇ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ಎಇ ಪ್ರತಾಪ್, ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಉಮೇಶ್, ಗ್ರಾಮ ಪಂಚಾಯಿತಿ ಅಬಿವೃದ್ಧಿ ಅಧಿಕಾರಿ ಪುಷ್ಪಲತಾ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಪಲನಿಸ್ವಾಮಿ,ಮುಖಂಡರಾದ ಮುನಿಯಪ್ಪ, ಹೆಚ್ಡಿಪಿ ಪಲನಿಸ್ವಾಮಿ, ತಂಗವೇಲು, ರಾಜೇಂದ್ರ, ಮುರುಗೇಶ್, ವಸಂತ್ ಕುಮಾರ್, ಬಸವರಾಜು, ಕಾಮರಾಜು, ರಾಮು, ರಾಜು ,ಅರುಲ್ ಸ್ವಾಮಿ,ಕೃಷ್ಣ,ಶಿವು,ಶಿವಣ್ಣ, ನಾಗರಾಜ್, ಮಹೇಶ್, ಇನ್ನಿತರರು ಉಪಸ್ಥಿತರಿದ್ದರು.
ವರದಿ ಉಸ್ಮಾನ್ ಖಾನ್