ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಕೇರಳ ರಾಜ್ಯದ ಲಾಟರಿ
ಎಗ್ಗಿಲ್ಲದೆ ನಡೆಯುತ್ತಿದೆ,ಕರ್ನಾಟಕ ರಾಜ್ಯದಲ್ಲಿ ಲಾಟರಿ ನಿಷೇಧವಿದ್ದರೂ ಗಡಿ ಜಿಲ್ಲೆಯಲ್ಲಿ ಬಡವರ ಬದುಕಿಗೆ ಕೊಳ್ಳಿ ಇಟ್ಟಿದ್ದ ಹೊರ ರಾಜ್ಯದ ಲಾಟರಿ ಮಾರಾಟ ನಡೆಯುತ್ತಿದೆ ಇದರಿಂದ ಕೂಲಿ ಕಾರ್ಮಿಕರು ಬದುಕು ಮೂರಾಬಟ್ಟೆಯಾಗುತ್ತಿದೆ.
ಕೇರಳ ರಾಜ್ಯದ ಲಾಟರಿ ತಂದು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಡಿ.ವೈ.ಎಸ್.ಪಿ ಲಕ್ಷ್ಮಯ್ಯ ಮತ್ತು ಸರ್ಕಲ್ ಇನ್ಸ್ ಪೆಕ್ಟರ್ ವನರಾಜ್ ಮತ್ತು ಇನ್ಸ್ಪೆಕ್ಟರ್ ಸಾಹೇಬ್ ಗೌಡ ರವರ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದ ವೆಂಕಟೇಶ ಹಾಗೂ ಹಂಗಳ ಗ್ರಾಮದ ನಾಗರಾಜು ಇಬ್ಬರು ಆರೋಪಿಗಳನ್ನು ಮದ್ದೂರು ಚೆಕ್ ಪೋಸ್ಟ್ ಹತ್ತಿರ ದಾಳಿ ನಡೆಸಿ ಬಂಧಿಸಿದ್ದಾರೆ.ಬಂಧಿತನಿಂದ ಸುಮಾರು 2 ಲಕ್ಷದ 14 ಸಾವಿರ ಮೊತ್ತದ ಲಾಟರಿ ವಶಪಡಿಸಿಕೊಂಡಿದ್ದು ಒಂದೂವರೆ ಸಾವಿರ ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ಮಹೇಶ್ ಎ, ಎಸ್ ಐ ಚಿನ್ನಸ್ವಾಮಿ,ರೇವಣ್ಣ ಸ್ವಾಮಿ,ಬಂಟಪ್ಪ, ಬಸವರಾಜ ಆರಾಧ್ಯ,ಮಹೇಶ್ ಇನ್ನಿತರರು ಉಪಸ್ಥಿತರಿದ್ದರು.
ವರದಿ ಗುಂಡ್ಲುಪೇಟೆ ಕುಮಾರ್