ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಶ್ರೀ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಟ್ರಸ್ಟ್ ಸ್ವಸಹಾಯ ಸಂಘದ ಸದಸ್ಯರು ಇಂದು ಸಿಂಧನೂರಿನ ಅಮರ ಶ್ರೀ ಆಲದ ಮರಕ್ಕೆ ಭೇಟಿ ನೀಡಿ ಅಮರ ಶ್ರೀ ಉದ್ಯಾನವನದಲ್ಲಿ ಬೆಳದ ವಿವಿಧ ಪ್ರಭೇದಗಳ ಸಸ್ಯಗಳು,ಹೂವಿನ ವಿವಿಧ ತಳಿಗಳು,ಹಣ್ಣಿನ ಗಿಡಗಳನ್ನು ವನಸಿರಿ ತಂಡ ಬೆಳಸಿರುವುದನ್ನು ನೋಡಿ ಹರ್ಷವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸ್ವಸಹಾಯ ಸಂಘದ ಸದಸ್ಯರಿಗೆ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಮರುಜೀವ ಪಡೆದ ಆಲದ ಮರದ ಉದ್ಯಾನವನದಲ್ಲಿ ಕೃಷಿ, ತೋಟಗಾರಿಕೆ,ವಿವಿಧ ರೀತಿಯ ಸಸ್ಯಗಳ ಪ್ರಭೇದಗಳ ಬಗ್ಗೆ, ಹಾಗೂ ಮನೆಯ ಕೈತೋಟ ನಿರ್ಮಾಣ ಮಾಡುವ ಬಗ್ಗೆ ಮಾಹಿತಿ ನೀಡಿದರು. ಸ್ವಸಹಾಯ ಸಂಘದ ಸದಸ್ಯರು ಅಮರ ಶ್ರೀ ಉದ್ಯಾನವನದಲ್ಲಿ ಬೆಳದ ವಿವಿಧ ಪ್ರಭೇದಗಳ ಸಸ್ಯಗಳು, ಹೂವಿನ ವಿವಿಧ ತಳಿಗಳು,ಹಣ್ಣಿನ ಗಿಡಗಳನ್ನು ವನಸಿರಿ ತಂಡ ಬೆಳಸಿರುವುದನ್ನು ನೋಡಿ ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಆದನಗೌಡ ಎಲೆಕೂಡ್ಲಿಗಿ,ಹೇಮಾ ಮೇಡಮ,ಸ್ವಸಹಾಯ ಸಂಘದ ಸದಸ್ಯರು ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ