ಪಾವಗಡ:ಮಾರ್ಚ್ ಅಂತ್ಯಕ್ಕೆ ತುಂಗಭದ್ರಾ ಯೋಜನೆ ನೀರು ಪೂರೈಕೆ ವಿಳಂಬವಾದರೆ ಪ್ಲೊರೈಡ್ ನೀರು ಸೇವನೆಗೆ ತುತ್ತಾದವರಿಗೆ 50 ಲಕ್ಷ ಪರಿಹಾರ ಕಲ್ಪಿಸಬೇಕು ಎಂದು ರಾಷ್ಟೀಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಕೊಂಚೆ ಶಿವರುದ್ರಪ್ಪ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪಾವಗಡ : ರಾಜ್ಯ ಸರ್ಕಾರದ ಆದೇಶನ್ವಯ ಮುಂದಿನ ವರ್ಷ 2025ರ ಮಾರ್ಚ್ ಅಂತ್ಯಕ್ಕೆ ತಾಲೂಕಿನ ಮನೆಮನೆಗೆ ತುಂಗಭದ್ರಾ ಯೋಜನೆಯ ಕುಡಿಯುವ ನೀರು ಸರಬರಾಜ್ ವಿಳಂಬವಾದರೆ ಇಲ್ಲಿನ ಪ್ಲೋರೈಡ್ ನೀರು ಸೇವನೆಯಿಂದ ಅನಾರೋಗ್ಯಕ್ಕೆ ತುತ್ತಾಗಿ ಮೃತ ವ್ಯಕ್ತಿಗೆ ತಲಾ 50ಲಕ್ಷ ಪರಿಹಾರ ಸರ್ಕಾರ ಭರಿಸಬೇಕಿದೆ ಎಂದು ರಾಷ್ಟ್ರೀಯ ಕಿಸಾನ್ ರೈತ ಸಂಘದ ಪ್ರಧಾನ ಚಿತ್ರದುರ್ಗದ ಕಾರ್ಯದರ್ಶಿ ಕೊಂಚೆ ಶಿವರುದ್ರಪ್ಪ ಎಚ್ಚರಿಕೆ ನೀಡಿದರು. ತುಂಗಭದ್ರಾ ಯೋಜನೆ ಕುಡಿವ ನೀರು ಸರಬರಾಜು ವಿಳಂಬ ಧೋರಣೆ ವಿರೋಧಿಸಿ ರಾಷ್ಟ್ರೀಯ ಕಿಸಾನ್ ಸಂಘ ಕರ್ನಾಟಕ ಪಾವಗಡ ತಾಲೂಕು ಶಾಖೆ ವತಿಯಿಂದ ಇಂದು ಪಟ್ಟಣದ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ಕಚೇರಿ ಬಳಿ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿ ಮಾತನಾಡಿದರು.
ತಾಲೂಕಿನಲ್ಲಿ ಶುದ್ದ ಕುಡಿವ ನೀರಿನ ಅಭಾವ ಸೃಷ್ಟಿಯಾಗಿದೆ ಪ್ಲೋರೈಡ್ ನೀರು ಸೇವನೆಯ ಪರಿಣಾಮ ಇಲ್ಲಿನ ಜನತೆ ನಾನಾ ರೋಗಗಳಿಗೆ ತುತ್ತಾಗಿ ನರಕಯಾತನೆ ಅನುಭವಿಸುತ್ತಿದ್ದಾರೆ ಪ್ಲೋರೈಡ್ ಹಾಗೂ ಬಿಸ್ಲೇರಿ ಬಾಟಲ್ ನೀರಿನ ಸೇವನೆಯಿಂದ ನಾನಾ ರೋಗಕ್ಕೆ ತುತ್ತಾದ ಜನತೆ ನಿತ್ಯ ಅಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ,ಕಳೆದ 5ವರ್ಷದ ಹಿಂದೆ ದಾಖಲೆ ಸಮೇತ ಇಲ್ಲಿನ ಪ್ಲೂರೈಡ್ ಯುಕ್ತ ಕುಡಿವ ನೀರಿನ ಸೇವನೆಯಿಂದ ದುಸ್ಪಾರಿಣಾಮ ಹಾಗೂ ಅನಾಹುತ ಕುರಿತು ರಾಷ್ಟ್ರೀಯ ಕಿಸಾನ್ ಸಂಘದಿಂದ ವಕೀಲರ ಮೂಲಕ ಹೈಕೋರ್ಟ್‌ಗೆ ದಾವೆ ಹೂಡಿದ ಕಾರಣಕ್ಕಾಗಿ ಪರಿಶೀಲಿಸಿದ ಘನ ನ್ಯಾಯಾಲಯ ಪಾವಗಡ ತಾಲೂಕಿಗೆ ಕೂಡಲೇ ಶುದ್ದ ಕುಡಿವ ನೀರು ಕಲ್ಪಿಸಿ ಎಂದು ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿತ್ತು.ಈ ಹಿನ್ನಲೆಯಲ್ಲಿ ತಾಲೂಕಿನದ್ಯಾಂತ ಶುದ್ದ ಕುಡಿವ ನೀರಿನ ಘಟಕಗಳ ಸ್ಥಾಪನೆ ಸಾಧ್ಯವಾಗಿದ್ದು,ನಿರ್ವಹಣೆ ಸರಿಯಿಲ್ಲದ ಪರಿಣಾಮ ಅಂತರ್ಜಲ ಕುಸಿತದಿಂದ ನೀರಿನ ಪ್ರಮಾಣ ಕಡಿಮೆಯಾಗಿ ಬಹುತೇಕ ಘಟಕಗಳು ನಿಷ್ಕ್ರಿಯವಾಗಿವೆ.ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಪಾವಗಡಕ್ಕೆ ನದಿ ಮೂಲಕ ಶಾಶ್ವತ ನೀರು ಪೂರೈಕೆಗೆ ಆದೇಶಿಸಿದ್ದ ಹಿನ್ನಲೆಯಲ್ಲಿ ವಿಜಯಪುರ ಜಿಲ್ಲೆ ಹೊಸಪೇಟೆ ಡ್ಯಾಂನಿಂದ 2.35ಕೋಟಿ ವೆಚ್ಚದ ತುಂಗಭದ್ರಾ ಯೋಜನೆ ಕುಡಿಯುವ ನೀರು ಸರಬರಾಜು ಪೈಪು ಲೈನ್ ಕಾಮಗಾರಿ ಪ್ರಗತಿಯಲ್ಲಿದೆ. ಇದರ ಕಾಮಗಾರಿ ನಿರ್ವಹಣೆ ಆಂಧ್ರದ ಹೈದರಾಬಾದ್ ಮೆಗಾ ಕಂಪನಿ ವಹಿಸಿಕೊಂಡಿದ್ದು ಟೆಂಡರ್ ಪ್ರಕ್ರಿಯೆ ಪ್ರಕಾರ ಈಗಾಗಲೇ ನೀರು ಪೂರೈಕೆ ಆಗಬೇಕಿತ್ತು.ಜಿಪಂ ಅಧಿಕಾರಿ ಹಾಗೂ ಗುತ್ತಿಗೆದಾರರ ಇಚ್ಚಾಶಕ್ತಿ ಕೊರತೆಯಿಂದ ನೀರು ಪೂರೈಕೆ ವಿಳಂಬವಾಗುತ್ತಿದೆ ಎಂದು ಆರೋಪಿಸಿದರು.ಜಿಪಂ ಅಧಿಕಾರಿಗಳು ಕಾಮಗಾರಿಯ ಕೆಲ ತಾಂತ್ರಿಕ ಸಮಸ್ಯೆಯಿಂದ ವಿಳಂಬವಾಗಿದೆ ಎಂದು ತಿಳಿಸಿದ್ದು ಮಾರ್ಚ್ ಒಳಗೆ ತಾಲೂಕಿನ ಮನೆಮನೆಗೆ ನೀರು ಪೂರೈಕೆಯ ಭರವಸೆ ನೀಡಿದ್ದಾರೆ.ವಿಳಂಬವಾದರೆ ಮುಂದಿನ ಆನಾಹುತಗಳಿಗೆ ಸರ್ಕಾರವೇ ಹೊಣೆಯಾಗಲಿದೆ ಎಂದು ಎಚ್ಚರಿಸಿದರು.
ಆಮ್ ಅದ್ಮಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ರಾಮಾಂಜಿನಪ್ಪ ಮಾತನಾಡಿ ಜಿಪಂ ಹಾಗೂ ಮೆಗಾ ಕಂಪನಿಯ ಗುತ್ತಿಗೆದಾರರ ನಿರ್ಲಕ್ಷ್ಯದ ಪರಿಣಾಮ ತುಂಗಭದ್ರಾ ಯೋಜನೆಯ ನೀರು ಪೂರೈಕೆ ವಿಳಂಬವಾಗುತ್ತಿದೆ.ನೆಪ ಹೇಳಿಕೊಂಡು ಕಾಲಹರಣ ಮಾಡುವುದು ಸರಿಯಲ್ಲ.ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಮಾಡಿ,ಪ್ಲೊರೈಡ್ ಸೇವನೆಯಿಂದ ತಾಲೂಕಿನ ಜನತೆ ತತ್ತರಿಸಿದ್ದಾರೆ.ತುಂಗಭದ್ರಾ ಯೋಜನೆಯ ಪ್ರಗತಿ ಕುಂಠಿತವಾಗಿದ್ದು ಯೋಜನೆಯ ಕಥೆ ಸತ್ತ ಹೆಣಕ್ಕೆ ಶೃಂಗಾರ ಮಾಡಿ ರಾಜ ಬೀದಿಗಳಲ್ಲಿ ಮೆರವಣಿಗೆ ಮಾಡಿದಂತಿದೆ.ಇನ್ನೂ ಎರಡು ತಿಂಗಳ ಒಳಗೆ ಮನೆ ಮನೆಗೆ ತುಂಗಭದ್ರಾ ಯೋಜನೆಯ ನೀರು ಪೂರೈಕೆಗೆ ಆಗದಿದ್ದರೆ ರಾಷ್ಟ್ರೀಯ ಕಿಸಾನ್ ಸಂಘದಿಂದ ಬೀದಿಗಿಳಿದು ಹೋರಾಟ ಮಾಡಬೇಕಿದೆ ಎಂದು ಯೋಜನೆಯ ವಿಳಂಬದ ತಾಂತ್ರಿಕ ಸಮಸ್ಯೆ ಕುರಿತು ಮಾಹಿತಿ ಪಡೆದರು.
ರಾಷ್ಟ್ರೀಯ ಕಿಸಾನ್ ರೈತ ಸಂಘದ ರಾಜ್ಯಾಧ್ಯಕ್ಷ ವಿ.ನಾಗಭೂಷಣರೆಡ್ಡಿ ಮಾತನಾಡಿ ಇಲ್ಲಿನ ಫ್ಲೊರೈಡ್ ಯುಕ್ತ ನೀರಿನ ಸೇವನೆಯ ಪರಿಣಾಮ ಹೊಟ್ಟೆ ನೋವು,ಕೈಕಾಲು ನೋವು ಮೂಳೆ ಸವತೆ ಹಾಗೂ ಇತರೆ ಆನಾರೋಗ್ಯಕ್ಕೆ ತುತ್ತಾದ ಹಿನ್ನಲೆಯಲ್ಲಿ ಸಂಶೋಧನೆಯ ವರದಿಯ ದಾಖಲೆ ಸಮೇತ ವಕೀಲರೊಂದಿಗೆ ಹೈಕೋರ್ಟ್‌ಗೆ ದಾವೆ ಹೊಡಿದ್ದ ಪರಿಣಾಮ ನ್ಯಾಯಾಲಯ ಗಂಭೀರವಾಗಿ ಪರಿಶೀಲಿಸಿ ಪಾವಗಡಕ್ಕೆ ಶುದ್ದ ನೀರು ಕೂಡಿ ಎಂದು ರಾಜ್ಯ ಸರ್ಕಾರಕ್ಕೆ ಆದೇಶ ಜಾರಿಪಡಿಸಿತ್ತು.ಈ ಹಿನ್ನಲೆಯಲ್ಲಿ ತಾಲೂಕಿನಧ್ಯಂತ ಶುದ್ದ ನೀರಿನ ಘಟಕ ಆಳವಡಿಕೆ
ಸಾಧ್ಯವಾಗಿದ್ದು.ತುಂಗಭದ್ರಾ ಯೋಜನೆ ಕಾರ್ಯಾರಂಭ ಸಾಧ್ಯವಾಗಲು ಅನುಕೂಲವಾಗಿದೆ.ಕಾಮಗಾರಿಯ ವೇಗ ಹೆಚ್ಚಿಸಿ ನೀರು ಪೂರೈಕೆಯಲ್ಲಿ ಜಿಪಂ ಅಧಿಕಾರಿ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ವಿಳಂಬವಾಗಿದೆ.ಇನ್ನೂ ಮುಂದೆ ಕಾಮಗಾರಿಯ ವೇಗ ಹೆಚ್ಚಿಸಬೇಕು. ಪ್ಲೂರೈಡ್ ನೀರು ಸೇವನೆಗೆ ಬ್ರೆಕ್ ಹಾಕುವ ಮೂಲಕ ತಾಲೂಕಿನ ಜನತೆಯ ಆರೋಗ್ಯ ಕಾಪಾಡುವಂತೆ ಆಗ್ರಹಿಸಿದರು.
ತಾಲೂಕಿನ ಜನತೆಯ ಬವಣೆ ಕುರಿತು ಮನವಿ ಸ್ವೀಕರಿಸಿದ ಬಳಿಕ ಜಿಪಂ ಕುಡಿವ ನೀರು ಹಾಗೂ ನೈರ್ಮಲ್ಯ ವಿಭಾಗದ ಎಇಇ ಬಸವಲಿಂಗಪ್ಪ ಮಾತನಾಡಿ,ಸರ್ಕಾರದ ಆದೇಶ ಅನ್ವಯ ತುಂಗಭದ್ರಾ ಯೋಜನೆಯ ಪೈಪ್ ಲೈನ್ ಕಾಮಗಾರಿಯು ಪೂರ್ಣಗೊಂಡಿದೆ.ಈಗಾಗಲೇ ವಿಜಯನಗರ ಜಿಲ್ಲೆಯ ಹೊಸಪೇಟೆ ಡ್ಯಾಂನಿಂದ ತಾಲೂಕಿನ ಓವರ್‌ಹೆಡ್ ಜೋನ್‌ಗಳ ಟ್ಯಾಂಕ್‌ಗಳಿಗೆ ನೀರು ಪೂರೈಕೆಯಾಗಿದ್ದು,ಗ್ರಾಮೀಣ ಪ್ರದೇಶದಲ್ಲಿ ಪೈಪುಲೈನ್ ಕಾಮಗಾರಿಯ ನೀರು ಪೂರೈಕೆಯ ಟೆಸ್ಟಿಂಗ್ ಪರಿಶೀಲನೆ ಕಾರ್ಯ ನಡೆಯುತ್ತಿದೆ.ಲಕ್ಷಾಂತರ ಲೀಟರ್ ಸಾಮಾರ್ಥ್ಯದ 15ಒವರ್‌ಹೆಡ್ ಟ್ಯಾಂಕ್‌ಗಳಿದ್ದು ಈ ಪೈಕಿ ತಾಲೂಕಿನ ನಾಗಲಮಡಿಕೆ ಹೋಬಳಿಯ 2ಟ್ಯಾಂಕ್‌ಗಳಿಗೆ ನೀರು ಪೂರೈಕೆಗೆ ಸಮಸ್ಯೆ ಎದುರಾಗಿದೆ.ಶೀಘ್ರ ಸಮಸ್ಯೆ ನಿವಾರಿಸುವ ಮೂಲಕ ಬರುವ ಮಾರ್ಚಿ ಅಂತ್ಯಕ್ಕೆ ಜೆಜೆಎಂ ಕಾಮಗಾರಿಯ ಪೈಪ್ ಲೈನ್ ಮೂಲಕ ತಾಲೂಕಿನ ಮನೆಮನೆಗೆ ತುಂಗಭದ್ರಾ ಯೋಜನೆಯ ನೀರು ಪೂರೈಕೆಗೊಳಿಸುವ ಭರವಸೆ ವ್ಯಕ್ತಪಡಿಸಿದರು.
ಇದೇ ವೇಳೆ ಸಮಾಜ ಸೇವಕ ತಾಳೇ ಮರದಹಳ್ಳಿ ಗೋವಿಂದಪ್ಪ,ವಾಚ್ ಮೆಕಾನಿಕ್ ವೆಂಕಟಸ್ವಾಮಿ,ವೆಂಕಟಾಪುರ ವೆಂಕಟರೆಡ್ಡಿ,ಕಾಂತಪ್ಪ,ರಾಮಯ್ಯ ಅಕ್ಕಲಪ್ಪ ಹಾಗೂ ಇತರೆ ಅನೇಕ ಮಂದಿ ರೈತ ಮುಖಂಡರು ಇದ್ದರು.
ಪಾವಗಡ,ಶೀಘ್ರ ತುಂಗಭದ್ರಾ ಯೋಜನೆಯ ನೀರು ಪೂರೈಕೆಗೆ ಆಗ್ರಹಿಸಿ ರಾಷ್ಟ್ರೀಯ ಕಿಸಾನ್ ಸಂಘ,ತಾಲೂಕು ಶಾಖೆ ವತಿಯಿಂದ ಜಿಪಂನ ಕುಡಿವ ನೀರು ಹಾಗೂ ನೈರ್ಮಲ್ಯ ವಿಭಾಗದ ಎಇ ಬಸವಲಿಂಗಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪಾವಗಡ ತುಂಗಭದ್ರಾ ಕುಡಿಯುವ ನೀರು ಪೂರೈಕೆ ವಿಳಂಬ ಕುರಿತು ಜಿಪಂ ಎಇ ಬಸವಲಿಂಗಪ್ಪರಿಂದ ಕಿಸಾನ್ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಕೊಂಚೆ ಶಿವರುದ್ರಪ್ಪ ಹಾಗೂ ಅಧ್ಯಕ್ಷ ನಾಗಭೂಣರೆಡ್ಡಿ ಮತ್ತು ಎಎಪಿಯ ರಾಮಾಂಜಿನಪ್ಪ ಮಾಹಿತಿ ಪಡೆದರು.
ವರದಿ ಕೆ. ಮಾರುತಿ ಮುರಳಿ