ಹಸಿರಾಗಲಿ ಕರ್ನಾಟಕ ಉಸಿರಾಗಲಿ ಕನ್ನಡ
ಕನ್ನಡದ ಸಿಹಿ ನಾ ಕಂಡೆ ಗೆಲುವಿನ ಹಿರಿಮೆ ಕಂಡೆ
ಕನ್ನಡ ಮಾತೆಯ ಮಹಿಮೆ ಇಂದು ಕಂಡೆ
ಕನ್ನಡದ ಮಡಿಲಲ್ಲಿ ಕನಸು ನಾನೊಂದು ಕಂಡೆ
ನಾನು ಕಲಿತಿರುವೆ ಕನ್ನಡವ ತೊದಲು ನುಡಿಯಿಂದ
ಬೆಳೆದನು ತಾಯಿಯ ಮಡಿಲಿಂದ
ನಾ ಹೇಳುವೆನು ಈ ಕನ್ನಡದ ಗರ್ವದಿಂದ
ನನಗೆ ಯಾಕೆ ಬೇಕು ಸಿರಿತನ ಇಂದ ಮುಂದ
ಕನ್ನಡದ ಸಾಹಿತ್ಯ ಕಲಿಸೋಣ ಸಂಗೀತ ಕಲಿಸೋಣ
ಕನ್ನಡವನ್ನು ಬೆಳೆಸೋಣ ಕನ್ನಡವನ್ನು ಉಳಿಸೋಣ
ಕನ್ನಡಕ್ಕಾಗಿ ನಾವು ಈ ಜೀವನ ಬೆಳೆಸೋಣ
ಕನ್ನಡದ ಭಾಷೆಗೆ ಹೂ ಕಂಪು ಸುರಿಸೋಣ
ಕನ್ನಡ ಭಾಷೆ ನಾಲಿಗೆಯಲ್ಲಿರಲಿ
ಕನ್ನಡ ಭಾಷೆ ಹೃದಯದಲ್ಲಿರಲಿ
ಕನ್ನಡದ ಮಣ್ಣಲ್ಲಿ ಒಂದು ಹೆಣ್ಣು ಎದುರಿಗೆ ಬರಲಿ
ಒಂದು ಹೆಣ್ಣು ಇರುವವಳು ನಿನ್ನ ಬೆನ್ನ ಹಿಂದೆ ಅಲ್ಲಿ
ನೀ ಕೈಮುಗಿ ಒಮ್ಮೆ ಅಲ್ಲಿ ನಿನಗೆ ಸಿಗುವುದು ಬಹುಮಾನ ಇಲ್ಲಿ
-ಅಕ್ಕಮಹಾದೇವಿ ಅಂಗಡಿ,ಕುಕನೂರು ತಾಲೂಕು, ರಾಜೂರು. ಕೊಪ್ಪಳ ಜಿಲ್ಲೆ