ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ತುಮಕೂರು ಗ್ರಾಮದಲ್ಲಿ ಕರವೇ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕನ್ನಡ ಧ್ವಜಾರೋಹಣವನ್ನು ಶಿವರಾಜಯ್ಯ ಸ್ವಾಮಿ ನೆರವೇರಿಸಿದರು.
ಜಿಲ್ಲಾ ಕರವೇ ಉಪಾಧ್ಯಕ್ಷ ಚೌಡಯ್ಯ ಬಾವೂರ ಮಾತನಾಡಿ, ಕನ್ನಡನಾಡು ನುಡಿ, ಆಚಾರ ವಿಚಾರ, ಸಂಸ್ಕೃತಿ ಹಾಗೂ ಪರಂಪರೆಯನ್ನು ನೆನಪಿಸಿಕೊಂಡಾಗಲೆಲ್ಲಾ ಮೈ ಮನವೆಲ್ಲಾ ರೋಮಾಂಚನವಾಗುತ್ತದೆ. ವಿವಿಧ ಭಾಗಗಳಾಗಿ ಹರಡಿ ಹೋಗಿದ್ದ ಕನ್ನಡಿಗರನ್ನು ಒಂದಾಗಿಸಿದ ದಿನವಾಗಿದೆ, ಹೀಗಾಗಿ ಪ್ರತಿಯೊಬ್ಬ ಕನ್ನಡಿಗನಿಗೂ ನವೆಂಬರ್ 1 ವಿಶೇಷವಾದ ದಿನವಾಗಿದ್ದು ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವವೆಂದು ಆಚರಿಸುತ್ತೇವೆ ಎಂದರು. ನಂತರ ಕಬಡ್ಡಿ ಪಂದ್ಯದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆ ಆಗಿ ಅಲ್ಲಿಯೂ ಕೂಡ ದ್ವಿತೀಯ ಸ್ಥಾನ ಪಡೆದು ನಮ್ಮ ಜಿಲ್ಲೆಗೆ ಹಾಗೂ ಊರಿಗೂ ಹೆಮ್ಮೆ ಹಾಗೂ ಕೀರ್ತಿ ತಂದ ನಮ್ಮೂರಿನ ಸರಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಸಿದ್ದು ಸುಣಗಾರ ತಾಲೂಕ್ ಸಂಚಾಲಕರು,ವಿನೋದ್ ಸಾಹುಕಾರ ಗ್ರಾಮ ಘಟಕ ಅಧ್ಯಕ್ಷರು,ವಿದ್ಯಾರ್ಥಿ ಘಟಕದ ಅಧ್ಯಕ್ಷರು ಮಹಮ್ಮದ್ ಜಾಫರ್ ಅವಂಟಗಿ, ಯುವ ಘಟಕದ ಅಧ್ಯಕ್ಷರು ಶರಣು ಅಂಗಡಿ,ಮೈನುದ್ದಿನ್ ಮುಲ್ಲಾ, ಬಸ್ಸು ಗೌಡ, ಸುರೇಶ ವಿಶ್ವಕರ್ಮ, ನಿತೀಶ್, ವೆಂಕಟೇಶ್ ಮಾಚನೂರ್, ವೆಂಕಟೇಶ್ ಹೂಗಾರ, ಮಹಾಂತೇಶ್ ಮೂಲಿಮನಿ, ವೆಂಕಟೇಶ್ ಪಿಲ್ಲಿ, ತಮ್ಮಣ್ಣ, ವೆಂಕಟೇಶ್ ಮುಸ್ತಾಜಿರ್, ದೇವು ಮದನೋರ್, ವೆಂಕಟೇಶ್ ಗಾಂಧಿ, ಸುರೇಶ ಕಲಾಲ್ ಹಾಗೂ ಊರಿನ ಮುಖಂಡರು ಇನ್ನಿತರರು ಇದ್ದರು.