ಶಿವಮೊಗ್ಗ : ಪುನೀತ್ ರಾಜಕುಮಾರ್ ಅವರ 3ನೇ ವರ್ಷದ ಪುಣ್ಯ ಸ್ಮರಣೆ ಪ್ರಯುಕ್ತ ಶಿವಮೊಗ್ಗದ ಗೋಪಿ ವೃತ್ತದಲ್ಲಿ ಸ್ಟೈಲ್ ಡಾನ್ಸ್ ಕ್ರಿವ್ ಶಿವಮೊಗ್ಗ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಜ್ಯೋತಿನಮನ, ಮೌನಾಚರಣೆ ಕಾರ್ಯಕ್ರಮಕ್ಕೆ ಜನಸಾಗರವೇ ಪಾಲ್ಗೊಂಡಿತ್ತು.
ಇದೇ ಸಂದರ್ಭದಲ್ಲಿ ಸ್ಟೈಲ್ ನೃತ್ಯ ಸಂಸ್ಥೆ ವಿದ್ಯಾರ್ಥಿಗಳಿಂದ ನೃತ್ಯನಮನ ಎಲ್ಲರ ಗಮನ ಸೆಳೆಯಿತು. ಈ ಕಾರ್ಯಕ್ರಮಕ್ಕೆ ಶಿವಮೊಗ್ಗ ಸಿನಿಮಾಸ್ ಅಡ್ಡ ,ಅಶ್ವಿನಿ ಮೇಕೋವರ್ ಸ್ಟುಡಿಯೋ ಶಿವಮೊಗ್ಗ, ಕುಟ್ಟಿ ಸಿನಿಮಾ, ಮಹೇಶ್ ಆಟ್ಸ್,ರಘು ಫಿಟಿಂಗ್ಸ್, ಎಸ್ ಬಿ ಎಸ್ ಸೌಂಡ್ಸ್, ತುಂಗಾತರಂಗ ಮತ್ತು ಸತ್ಯಸಂಗತಿ ದಿನ ಪತ್ರಿಕೆ ಸಾಥ್ ನೀಡಿತ್ತು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ.



















