ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಹಿರೇ ಕಲ್ಮಠದ ಪರಮ ಪೂಜ್ಯರಾದ ಡಾಕ್ಟರ್ ಶ್ರೀ ಶ್ರೀ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿಯವರ ನೇತತ್ವದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನ,ಶಿವಮೊಗ್ಗ ಇದೇ ತಿಂಗಳು 6-11-2024 ರಿಂದ ಹಮ್ಮಿಕೊಂಡಿರುವ
” ಬೃಹತ್ ಜಲಜಾಗೃತಿ – ಜನಜಾಗೃತಿ ಪಾದಯಾತ್ರೆ “ಗೆ ಸಂಬಂಧಿಸಿದಂತೆ ಹೊನ್ನಾಳಿ ಹಿರೇ ಕಲ್ಮಠದ ಪರಮ ಪೂಜ್ಯರ ನೇತೃತ್ವದಲ್ಲಿ ಪೂರ್ವಭಾವಿ ಸಭೆಯನ್ನು ಹೊನ್ನಾಳಿ ಹಿರೇಕಲ್ಮಠದಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಪೂಜ್ಯರು ಪಾದಯಾತ್ರೆಯಲ್ಲಿ ಭಾಗವಹಿಸುವ ಭರವಸೆಯನ್ನು ನೀಡಿದರು, ಈ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಕಾರ್ಯಗಳಿಗೆ ಚಾಲನೆ ನೀಡಲಾಯಿತು,ಈ ಸಭೆಗೆ ಅನೇಕ ಪ್ರಜ್ಞಾವಂತ ರಾಜಕಿಯ ಮುಖಂಡರು, ಕೆಲವು ಸಮಾಜದ ಅಧ್ಯಕ್ಷರು,ಉಪಾಧ್ಯಕ್ಷರು,ಸದಸ್ಯರು,ವಿವಿಧ ಕನ್ನಡ ಪರ ಸಂಘ ಸಂಸ್ಥೆಗಳ ಅಧ್ಯಕ್ಷರು, ಮುಖಂಡರು,ರೈತ ಮುಖಂಡರು, ದಲಿತ ಸಂಘಟನೆ ಮುಖಂಡರು, ಸಾಹಿತಿಗಳು,ಕಲಾವಿದರು,ಬುದ್ಧಿಜೀವಿಗಳು, ಪತ್ರಿಕಾ ಮಾಧ್ಯಮದವರು, ಪ್ರಗತಿ ಪರ ಸಂಘನೆಗಳ ವಿವಿಧ ಮುಂಚೂಣಿ ಮುಖಂಡರು, ಭಾಗಿಯಾಗಿ ಪೂರ್ವಭಾವಿ ಸಭೆಯನ್ನು ನಡೆಸಿ ಸಭೆಯನ್ನು
ಯಶಸ್ವಿಗೊಳಿಸಿದರು.
ವರದಿ ಪ್ರಭಾಕರ್