ಕಲಬುರಗಿ ಜಿಲ್ಲೆಯ ರೋಟರಿ ಕಲಬುರಗಿ ಮಿಡ್ ಟೌನ್ ಕಲಬುರ್ಗಿ ಇವರ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಬರಹಗಾರ ಸಂಘ(ರಿ.) ಹೂವಿನ ಹಡಗಲಿ ಜಿಲ್ಲಾ ಘಟಕ ಕಲಬುರಗಿ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯಘಟ್ಟವಾದ ಉಪನ್ಯಾಸ, ಕವಿಗೋಷ್ಠಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭವು ಬಹಳ ಅದ್ದೂರಿಯಾಗಿ ಮತ್ತು ಅರ್ಥಪೂರ್ಣವಾಗಿ ನಡೆಯಿತು.
ಈ ಸಂದರ್ಭದಲ್ಲಿ ಕಲಬುರ್ಗಿ ಜಿಲ್ಲೆಯ ಜಿಲ್ಲಾ ಬರಹಗಾರ ಸಂಘದ ಜಿಲ್ಲಾಧ್ಯಕ್ಷರಾದ ಮಾಂತೇಶ್ ಎನ್ ಪಾಟೀಲ್ ಯಾತನೂರ ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು ಅದೇ ರೀತಿಯಾಗಿ ಶ್ರೀ ಬಾಬೂ ಮಿಯಾ ಪುಲಾರಿ ಗೌರವ ಅಧ್ಯಕ್ಷರು ಜಿಲ್ಲಾ ಬರಹಗಾರರ ಸಂಘ ಕಲಬುರ್ಗಿಯವರು ಕೂಡಾ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಉದ್ಘಾಟನೆಯ ನುಡಿಗಳನ್ನು ಪ್ರೊ. ಚಂದ್ರಕಾಂತ ಎಂ ಯತನೂರ, ಮುಖ್ಯಸ್ಥರು ರಾಜ್ಯಶಾಸ್ತ್ರ ಅಧ್ಯಯನ ವಿಭಾಗ ಕಲಬುರಗಿ ವಿಶ್ವವಿದ್ಯಾಲಯ ಕಲಬುರಗಿ ಅವರು ಕನ್ನಡ ಮತ್ತು ಸಾಹಿತ್ಯ ಯಾವ ಮಟ್ಟಿಗೆ ಪ್ರಸ್ತುತ ಜಾರಿಯಲ್ಲಿದೆ ಹಿಂದೆ ಯಾವ ಮಟ್ಟದಲ್ಲಿ ನಮ್ಮ ಕನ್ನಡದ ಉಳಿವು ಇತ್ತು ಹೀಗಾಗಿ ನಾವೆಲ್ಲರೂ ಕನ್ನಡದ ಬಗ್ಗೆ ಅಧ್ಯಯನ ಮಾಡಿ ಕನ್ನಡದ ಬಗ್ಗೆ ಹಲವಾರು ವಿಚಾರ ಧಾರೆಗಳನ್ನು ಸ್ಮರಿಸಿ ಅದಕ್ಕೋಸ್ಕರ ಹಗಲು ರಾತ್ರಿ ದುಡಿದು ಕನ್ನಡವನ್ನು ಉಳಿಸೋಣ ಎಂದು ತಮ್ಮ ಉದ್ಘಾಟನೆ ನುಡಿಗಳನ್ನು ಹೇಳಿದರು.
ಕಾರ್ಯಕ್ರಮದ ಎರಡನೇ ಘಟ್ಟವಾದ ಉಪನ್ಯಾಸವನ್ನು ಶ್ರೀಮತಿ ಕಾವ್ಯಶ್ರೀ ಮಹಾಗಾವ್ಕರ್ ಸಾಹಿತಿಗಳವರು ವಿಷಯ “ಜಿಲ್ಲಾ ಸಮಗ್ರ ಸಾಹಿತ್ಯ ಚಿಂತನ” ಈ ವಿಷಯದ ಕುರಿತು ಅದ್ಭುತವಾಗಿ ಉಪನ್ಯಾಸವನ್ನು ನೀಡಿದರು.
ಕಾರ್ಯಕ್ರಮದ ಮುಖ್ಯಘಟ್ಟ ಕವಿಗೋಷ್ಠಿ, ಈ ಕವಿ ಗೋಷ್ಠಿ ಕಾರ್ಯಕ್ರಮದಲ್ಲಿ ಶ್ರೀ ರೇಣುಕಾಚಾರ್ಯ ಸ್ಥಾವರಮಠ ಭೀಮಳ್ಳಿ, ಶ್ರೀ ಸಿದ್ದರಾಮಯ್ಯ ಪಾಟೀಲ್, ಶ್ರೀ ವಿಜಯ ಭಾಸ್ಕರ್ ರೆಡ್ಡಿ, ಶ್ರೀ ರಾಜೇಂದ್ರ ಜಳಕಿ, ಶ್ರೀಮತಿ ಬಸಮ್ಮ ಸಜ್ಜನ್, ಕು: ಕವಿತಾ ಮಾಲಿ ಪಾಟೀಲ್,ಈ ರೀತಿಯಾಗಿ ಹತ್ತು ಹಲವಾರು ಕವಿಗಳನ್ನ ಈ ಕವಿಕೋಷ್ಠಿಯಲ್ಲಿ ಭಾಗವಹಿಸಿದ ಕವಿ ಮತ್ತು ಕವಿಯತ್ರಿಗಳು ಪ್ರಸ್ತುತ ಕನ್ನಡದ ಬಗ್ಗೆ ಸವಿವರವಾಗಿ ಕನ್ನಡ ಅಭಿಮಾನಿಗಳಲ್ಲಿ ಸಮಗ್ರವಾಗಿ ಕನ್ನಡದ ಜ್ಞಾನಾಮೃತವನ್ನು ಬಡಿಸಿದರು.
ಕನ್ನಡದ ಜಲ,ನೆಲ ಮತ್ತು ಇತರೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸಾಧನೆ ಮಾಡಿದ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಿದರು ಮಹನೀಯರಾದ ಶ್ರೀ ಕಲ್ಯಾಣ ಕುಮಾರ ಸಂಗಾವಿ,ಮನೋಜಕುಮಾರಬಗುದ್ಧಿ, ಪ್ರಶಾಂತಗೌಡ ಮಾಲಿ ಪಾಟೀಲ್, ಹನುಮಂತರಾಯ ಎಸ್ ,ಚಂದ್ರಶಾಗೌಡ ಮಾಲಿ ಪಾಟೀಲ್ ಗುಡೂರ ಎಸ್ ಎನ್ ಹೀಗೆ ಹತ್ತು ಹಲವಾರು ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿ ಸನ್ಮಾನಿಸಿ ಹಾರೈಸಿದರು.
ಈ ಸಂದರ್ಭದಲ್ಲಿ ಕಸಾಪ ತಾಲೂಕು ಅಧ್ಯಕ್ಷರಾದ ಶ್ರೀ ಎಸ್ ಕೆ ಬಿರಾದಾ,ಎಸ್ ಟಿ ಬಿರಾದಾರ,ಹಣಮಂತ್ರಾಯ ರಾಂಪೂರ್, ವಿಜಯಕುಮಾರ ರಾಠೋಡ್,ಭೀಮಾಶಂಕರ ಇಜೇರಿ,ವಿನಾಯಕ ಹಡಪದ ಹಾಗೂ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.
ವರದಿ: ಚಂದ್ರಶಾಗೌಡ ಮಾಲಿ ಪಾಟೀಲ್